ರೋಚಕತೆ ಹೆಚ್ಚಿಸಿರುವ ಆರೆಂಜ್ ಕ್ಯಾಪ್ ರೇಸ್; ಇಲ್ಲಿದೆ ಟಾಪ್ 10 ರನ್ ಸಾಧಕರ ಪಟ್ಟಿ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ರೋಚಕತೆ ಹೆಚ್ಚಿಸಿದೆ. ಈ ಬಾರಿಯ ಲೀಗ್‌ನಲ್ಲಿ ಅನುಭವಿ ಹಾಗೂ ಯುವ ಆಟಗಾರರ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಬೌಲರ್‌ಗಳು ಕಮಾಲ್ ಪ್ರದರ್ಶನ ನೀಡಿದರೆ, ಬ್ಯಾಟರ್‌ಗಳ ಆರ್ಭಟ ನಡೆಸಿ ತಂಡದ ಗೆಲುವಿನಲ್ಲಿ ಮಿಂಚುತ್ತಿದ್ದಾರೆ. ಈ ಬಾರಿಯ ಆರೆಂಜ್ ಕ್ಯಾಪ್ ರೇಸ್ ಜಿದ್ದಿನಿಂದ ಕೂಡಿದೆ.
ಅನುಭವಿ ಹಾಗೂ ಯುವ ಆಟಗಾರರ ನಡುವೆ ಆರೆಂಜ್ ಕ್ಯಾಪ್‌ಗಾಗಿ ಪೈಪೋಟಿ ಜೋರಾಗಿದೆ. ಈ ವೇಳೆ ಒಂದೇ ತಂಡದ ಇಬ್ಬರು ಆಟಗಾರರು ರನ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿಯ ಆರೆಂಜ್ ಕ್ಯಾಪ್ ರೇಸ್‌ನ ವಿಶೇಷತೆ ಅಂದರೆ ಟಾಪ್ 5ನಲ್ಲಿ ಇರುವ ಆಟಗಾರರು 500ಕ್ಕೂ ಹೆಚ್ಚು ರನ್ ಸಿಡಿಸಿದ್ದಾರೆ.

ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಇಬ್ಬರು ಆರಂಭಿಕರಾದ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಕಾಣಿಸಿಕೊಳ್ಳುತ್ತಾರೆ. ಈ ಇಬ್ಬರೂ ಆಟಗಾರರು ಈ ಲೀಗ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದು ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದಾರೆ. ಸಾಯಿ ಆಡಿದ 13 ಪಂದ್ಯಗಳಲ್ಲಿ 46ರ ಸರಾಸರಿಯಲ್ಲಿ 554 ರನ್ ಕಲೆ ಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 6 ಅರ್ಧಶತಕಗಳು ಸೇರಿವೆ. ಎರಡನೇ ಸ್ಥಾನದಲ್ಲಿರುವ ಶುಭಮನ್ ಗಿಲ್ ಸಹ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿಲ್ಲ. ಇವರು ಆಡಿದ 12 ಪಂದ್ಯಗಳಲ್ಲಿ 46ರ ಸರಾಸರಿಯಲ್ಲಿ 552 ರನ್ ಕಲೆ ಹಾಕಿದ್ದಾರೆ. ಇವರು 5 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ.
ವಿರಾಟ್ ಕೊಹ್ಲಿ
ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಕಾಣಿಸಿಕೊಳ್ಳುವ ಮೂರನೇ ಆಟಗಾರ ಆರ್‌ಸಿಬಿ ತಂಡದ ವಿರಾಟ್ ಕೊಹ್ಲಿ. ಇವರು ಈ ಲೀಗ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಆಡಿದ 13 ಪಂದ್ಯಗಳಲ್ಲಿ 542 ರನ್ ಕಲೆ ಹಾಕಿದ್ದಾರೆ. ಈ ವೇಳೆ ಇವರು 1 ಶತಕ ಹಾಗೂ 4 ಅರ್ಧಶತಕಗಳನ್ನು ಸಹ ಸಿಡಿಸಿದ್ದಾರೆ.
ಕೆಎಲ್ ರಾಹುಲ್
ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಳ್ಳುವ ಆಟಗಾರ ಕನ್ನಡಿಗ ಕೆಎಲ್ ರಾಹುಲ್. ಇವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುವ ಇವರು ಆಡಿದ 13 ಪಂದ್ಯಗಳಲ್ಲಿ 44ರ ಸರಾಸರಿಯಲ್ಲಿ 533 ರನ್ ಕಲೆ ಹಾಕಿದ್ದಾರೆ.
ಹೆನ್ರಿಕ್ ಕ್ಲಾಸೆನ್
ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ 5ನೇ ಸ್ಥಾನದಲ್ಲಿದ್ದಾರೆ. ಇವರು ಆಡಿದ 12 ಪಂದ್ಯಗಳಲ್ಲಿ 508 ರನ್ ಕಲೆ ಹಾಕಿದ್ದಾರೆ. ಈ ವೇಳೆ ಇವರು 5 ಅರ್ಧಶತಕ ಚಚ್ಚಿದ್ದಾರೆ.
ಟಾಪ್ 10ರಲ್ಲಿ ಸ್ಥಾನ ಪಡೆದ ಆಟಗಾರರು
ರಾಜಸ್ಥಾನ್ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ (486) 6ನೇ, ಎಸ್‌ಆರ್‌ಎಚ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (481) 7ನೇ, ಪಂಜಾಬ್ ಕಿಂಗ್ಸ್ ತಂಡದ ಕೂಪರ್ ಕೊನೊಲಿ (473) 8ನೇ ಸ್ಥಾನ, ಎಲ್ಎಸ್‌ಜಿ ತಂಡದ ಮಿಚೆಲ್ ಮಾರ್ಷ್ (467) 9ನೇ ಸ್ಥಾನ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಂಜು ಸ್ಯಾಮ್ಸನ್ (450) 10ನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications