Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025 Orange Cap: ಆರೆಂಜ್‌ ಕ್ಯಾಪ್‌ಗಾಗಿ ಇಂದು ಬಿಗ್‌ ಫೈಟ್‌

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ಆಟಗಾರರಿಗೆ ನೀಡುವ ಆರೆಂಜ್‌ ಕ್ಯಾಪ್‌ಗಾಗಿ ಶನಿವಾರ ಬಿಗ್ ಫೈಟ್ ನಡೆಯಲಿದೆ. ಲಕ್ನೋ ಸೂಪರ್‌ ಜೈಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವಿನ ಪಂದ್ಯದ ವೇಳೆ ಆರೆಂಜ್ ಕ್ಯಾಪ್‌ಗಾಗಿ ಸ್ಟಾರ್ ವಾರ್‌ ನಡೆಯಲಿದೆ. ಉಭಯ ತಂಡಗಳ ಬ್ಯಾಟರ್‌ಳು ಅಮೋಘ ಫಾರ್ಮ್‌ನಲ್ಲಿದ್ದು, ಸದ್ಯ ಈ ರೇಸ್‌ನಲ್ಲಿ ಎಲ್‌ಎಸ್‌ಜಿ ತಂಡದ ನಿಕೋಲಸ್‌ ಪೂರನ್ ಮುಂದಿದ್ದಾರೆ. ಹಾಗಿದ್ದರೆ ಯಾರ ಯಾರ ನಡುವೆ ವಾರ್‌ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಪ್ರಸಕ್ತ ಐಪಿಎಲ್‌ ರೋಚಕತೆ ದಿನೇ ದಿನೆ ಹೆಚ್ಚಿಸುತ್ತಿದೆ. ಸ್ಟಾರ್ ಆಟಗಾರರು ತಮ್ಮ ಪ್ರದರ್ಶನದಿಂದ ತಂಡಕ್ಕೆ ನೆರವಾಗುತ್ತಿದ್ದಾರೆ. ಇದೇ ವೇಳೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಟಾರ್ ಆಟಗಾರ ನಿಕೋಲಸ್ ಪೂರನ್‌ ಕ್ಲಾಸಿಕ್ ಫಾರ್ಮ್‌ನಲ್ಲಿದ್ದಾರೆ. ಇವರು ಎಲ್‌ಎಸ್‌ಜಿ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಅಬ್ಬರಿಸುತ್ತಿದ್ದಾರೆ. ಇವರು ಆಡಿದ 5 ಪಂದ್ಯಗಳಲ್ಲಿ 288 ರನ್‌ ಸಿಡಿಸಿದ್ದಾರೆ. ಈ ವೇಳೆ 3 ಅರ್ಧಶತಕ ಸೇರಿವೆ. ಇನ್ನು ಇವರ ಬ್ಯಾಟ್‌ನಿಂದ 25 ಬೌಂಡರಿ ಹಾಗೂ 24 ಸಿಕ್ಸರ್‌ಗಳು ಹರಿದು ಬಂದಿವೆ.

Orange Cap Showdown Nicholas Pooran Sai Sudharsan and Mitchell Marsh Set for Saturday Face-Off

ಆರೆಂಜ್ ಕ್ಯಾಪ್‌ ರೇಸ್‌ನಲ್ಲಿರುವ ಅತಿ ಹತ್ತಿರದ ಸ್ಪರ್ಧಿ ಎಂದರೆ ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಆಟಗಾರ ಬಿ ಸಾಯಿ ಸುದರ್ಶನ್. ಇವರು ತಮ್ಮ ವೃತ್ತಿ ಜೀವನದ ರೆಡ್ ಹಾಟ್ ಫಾರ್ಮ್‌ನಲ್ಲಿದ್ದಾರೆ. ಇವರು ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದ ಗುಜರಾತ್ ತಂಡಕ್ಕೆ ನೆರವಾಗುತ್ತಿದ್ದು, ಭರವಸೆ ಮೂಡಿಸಿದ್ದಾರೆ. ಇವರು ಆಡಿರುವ 5 ಪಂದ್ಯಗಳಲ್ಲಿ 3 ಅರ್ಧಶತಕದ ಬಲದಿಂದ 273 ರನ್‌ ಸಿಡಿಸಿದ್ದಾರೆ. ಈ ವೇಳೆ 24 ಬೌಂಡರಿ, 12 ಸಿಕ್ಸರ್‌ ಬಾರಿಸಿದ್ದಾರೆ. ಇವರು ನಿಕೋಲಸ್‌ ಅವರಿಗಿಂತ ಜಸ್ಟ್‌ 15 ರನ್‌ ಹಿಂದೆ ಇದ್ದು, ಇಂದಿನ ಕಾದಾಟದಲ್ಲಿ ಯಾರ ಕೈ ಮೇಲಾಗುತ್ತದೆ ಎಂಬುದೇ ರೋಕಚತೆ ಹುಟ್ಟಿಸಿದೆ.

ಮಿಚೆಲ್ ಮಾರ್ಷ್ ಮಿಂಚು

ಎಲ್‌ಎಸ್‌ಜಿ ತಂಡದ ಆರಂಭಿಕ ಮಿಚೆಲ್ ಮಾರ್ಷ್ ಸಹ ಆರೆಂಜ್ ಕ್ಯಾಪ್‌ ರೇಸ್‌ನಲ್ಲಿರುವ ಪ್ರಬಲ ಸ್ಪರ್ಧಿ. ಇವರು ಸಹ ಪ್ರಸಕ್ತ ಐಪಿಎಲ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ಮಿಚೆಲ್‌ 23 ರನ್‌ಗಳಿಂದ ನಿಕೋಲಸ್‌ ಅವರಿಗಿಂತ ಹಿಂದೆ ಇದ್ದು, ಇಂದಿನ ಪಂದ್ಯದಲ್ಲಿ ಈ ಅಂಕಿ ಅಂಶವನ್ನು ಮೀರಿ ನಿಲ್ಲುವ ಕನಸು ಕಾಣುತ್ತಿದ್ದಾರೆ. ಮಿಚೆಲ್‌ ಮಾರ್ಷ್‌ ಆಡಿದ 5 ಪಂದ್ಯಗಳಲ್ಲಿ 53 ಸರಾಸರಿಯಲ್ಲಿ 265 ರನ್‌ ಕಲೆ ಹಾಕಿದ್ದು, 4 ಅರ್ಧಶತಕವನ್ನು ಸಿಡಿಸಿದ್ದಾರೆ. ಈ ವೇಳೆ 28 ಬೌಂಡರಿ ಹಾಗೂ 15 ಮುಗಿಲೆತ್ತರದ ಸಿಕ್ಸರ್‌ ಬಾರಿಸಿದ್ದಾರೆ.

Orange Cap Showdown Nicholas Pooran Sai Sudharsan and Mitchell Marsh Set for Saturday Face-Off

ಅತಿ ಹೆಚ್ಚು ರನ್ ಬಾರಿಸಿದ ಟಾಪ್‌ 5 ಬ್ಯಾಟರ್ಸ್‌

ನಿಕೋಲಸ್‌ ಪೂರನ್‌ (ಎಲ್‌ಎಸ್‌ಜಿ), 5 ಪಂದ್ಯ, 288 ರನ್‌
ಸಾಯಿ ಸುದರ್ಶನ್‌ (ಜಿಟಿ), 5 ಪಂದ್ಯ, 273 ರನ್‌
ಮಿಚೆಲ್ ಮಾರ್ಷ್ (ಎಲ್‌ಎಸ್‌ಜಿ), 5 ಪಂದ್ಯ, 265 ರನ್‌
ಅಜಿಂಕ್ಯ ರಹಾನೆ (ಕೆಕೆಆರ್‌), 5 ಪಂದ್ಯ, 204 ರನ್‌
ಜೋಸ್ ಬಟ್ಲರ್ (ಜಿಟಿ), 5 ಪಂದ್ಯ, 202 ರನ್

Story first published: Saturday, April 12, 2025, 8:35 [IST]
Other articles published on Apr 12, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+