Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Oval Test: ರೂಟ್-ಪ್ರಸಿದ್ಧ್ ವಾಗ್ವಾದ, ಡಕೆಟ್‌ಗೆ ಆಕಾಶ್ ದೀಪ್ 'ಸೆಂಡ್‌ಆಫ್'

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಐದನೇ ಟೆಸ್ಟ್‌ ಪಂದ್ಯ ಓವಲ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳಿಗೆ ಟೀಮ್ ಇಂಡಿಯಾ ಬೌಲರ್‌ಗಳ ಕಾಟ ನೀಡಿದರು. ಇದೇ ವೇಳೆ ಜೋ ರೂಟ್‌ ಹಾಗೈ ಪ್ರಸಿದ್ಧ್ ಕೃಷ್ಣಾ ನಡುವೆ ಮಾತಿನ ಚಕಮಕಿ ನಡೆದರೆ, ಬೆನ್‌ ಡಕೇಟ್‌ ವಿಕೆಟ್‌ ಪಡೆದ ಆಕಾಶ್‌ ದೀಪ್‌ ಅವರ ಹೆಗಲ ಮೇಲೆ ಕೈ ಹಾಕಿ ಪೆವೆಲಿಯನ್ ಹಾದಿ ತೋರಿಸಿದರು.

ಓವಲ್‌ ಟೆಸ್ಟ್‌ ಪಂದ್ಯದ ಎರಡನೇ ದಿನದಂದು ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಮಾತಿನ ಚಕಮಕಿ ಕಾಣಿಸಿಕೊಂಡಿತು. ಪ್ರಸಿದ್ಧ್ ಕೃಷ್ಣ ಮತ್ತು ಜೋ ರೂಟ್ ನಡುವೆ ಬಿಸಿ ವಾಗ್ವಾದ ಕಂಡುಬಂದಿತು. ಇಂಗ್ಲೆಂಡ್ ಜಾಕ್ ಕ್ರಾಲಿ ವಿಕೆಟ್‌ ಕಳೆದುಕೊಳ್ಳುತ್ತಿದ್ದಂತೆ ಮೈದಾನಕ್ಕೆ ಇಂಗ್ಲೆಂಡ್ ತಂಡದ ಭರವಸೆಯ ಬ್ಯಾಟರ್ ಜೋ ರೂಟ್ ಇಳಿದರು. ಇವರು ತಂಡಕ್ಕೆ ತಮ್ಮ ಅನುಭವದ ಧಾರೆಯನ್ನು ಎರೆಯಬೇಕಿತ್ತು. ಇದೇ ವೇಳೆ ಪ್ರಸಿದ್ಧ್ ಸಹ ಬಿಗುವಿನ ದಾಳಿಯನ್ನು ನಡೆಸಿ ಸತತ ಪ್ರಶ್ನೆಗಳನ್ನು ಕೇಳಿದರು.

Oval Test Root-Prasidh Verbal Spat Akash Deep s Send-Off to Duckett Steal Show

ಇನಿಂಗ್ಸ್‌ನ 22ನೇ ಓವರ್‌ ಪ್ರಸಿದ್ಧ್ ಕೃಷ್ಣಾ ಬೌಲಿಂಗ್ ಮಾಡಿದರು. ಈ ವೇಳೆ ಮೊದಲ ಎಸೆತದಲ್ಲಿ ರನ್ ಕದಿಯಲಿಲ್ಲ. ಈ ವೇಳೆ ರೂಟ್‌ಗೆ ಪ್ರಸಿದ್ಧ್ ಏನು ಹೇಳಿದಂತೆ ಕಂಡು ಬಂದಿತು. ಪ್ರಸಿದ್ಧ್ ಅವರ ಮಾತುಗಳನ್ನು ಕೇಳಿದ ರೂಡ್ ಕೋಪಗೊಂಡು ಕೆಂಡ ಕಾರಿದರು. ಇದೇ ಓವರ್‌ನ ಕೊನೆಯ ಎಸೆತದಲ್ಲಿ ರೂಟ್‌ ಗಲ್ಲಿ ಕಡೆಗೆ ಚೆಂಡನ್ನು ತಳ್ಳಿ ಬೌಂಡರಿ ಬಾರಿಸಿದರು. ಈ ವೇಳೆ ಮತ್ತೆ ಪ್ರಸಿದ್ಧ್ ಕೃಷ್ಣ ಮತ್ತು ಜೋ ರೂಟ್ ನಡುವೆ ಮತ್ತೆ ವಾಗ್ವಾದ ಪ್ರಾರಂಭವಾಯಿತು. ಫೀಲ್ಡ್‌ ಅಂಪೈರ್ ಮಧ್ಯ ಪ್ರವೇಶಿಸಿ ಆಟಗಾರರನ್ನು ಸಮಾಧಾನ ಪಡಿಸಬೇಕಾಯಿತು.

ಈ ಮಾತಿನ ಚಕಮಕಿಗೂ ಮೊದಲು ಆಕಾಶ್‌ ದೀಪ್‌ ಬೆನ್‌ ಡಕೆಟ್‌ ಅವರಿಗೆ ಸೆಂಡಾಫ್ ನೀಡಿದ ರೀತಿ ಎಲ್ಲರ ಗಮನ ಸೆಳೆಯಿತು. ಇಂಗ್ಲೆಂಡ್ ಆರಂಭಿಕರು ಮೊದಲ ವಿಕೆಟ್‌ಗೆ ಭರ್ಜರಿ ಜೊತೆಯಾಟನ್ನು ನೀಡಿ ಭಾರತೀಯ ಬೌಲರ್‌ಗಳಿಗೆ ಕಾಟ ನೀಡಿದರು. ಅಲ್ಲದೆ ಮೊದಲ ವಿಕೆಟ್‌ಗೆ 92 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯನ್ನ ಬೇರ್ಪಡಿಸಲು ಗಿಲ್ ಮಾಡಿದ ಎಲ್ಲ ತಂತ್ರಗಳು ವಿಫಲವಾದವು.

ಆಕಾಶ್ ಸೆಂಡ್‌ಆಫ್

ಆಕಾಶ್‌ ದೀಪ್‌ ಇನಿಂಗ್ಸ್‌ನ 13ನೇ ಓವರ್ ಬೌಲ್ ಮಾಡಿದರು. ಈ ವೇಳೆ ಬೆನ್‌ ಡಕೆಟ್ ಬ್ಯಾಟಿಂಗ್ ಮಾಡ್ತಾ ಇದ್ದರು. ಐದನೇ ಎಸೆತವನ್ನು ಆಕಾಶ್ ದೀಪ್ ಆಫ್ ಸ್ಟಂಪ್‌ನಿಂದ ಸ್ವಲ್ಪ ಹೊರಗೆ ಹಾಕಿದರು. ಈ ಚೆಂಡನ್ನು ರಿವರ್ಸ್ ಸ್ವೀಪ್ ಆಡಲು ಪ್ರಯತ್ನಿಸಿ ಧ್ರುವ್ ಜುರೆಲ್ ಅವರಿಗೆ ಕ್ಯಾಚ್‌ ನೀಡಿದರು. ಈ ವಿಕೆಟ್‌ ಪಡೆದು ಆಕಾಶ್ ದೀಪ್, ಡಕೆಟ್‌ ಹೆಗಲ ಮೇಲೆ ಕೈ ಹಾಕಿ ಪೆವಿಲಿಯನ್‌ ನತ್ತ ಬಿಡಲು ಮುಂದಾದರು. ಈ ವೇಳೆ ಆಕಾಶ್‌ ದೀಪ್‌ ಅವರನ್ನು ರಾಹುಲ್‌ ಕರೆದುಕೊಂಡು ಬಂದರು.

ಬೆನ್‌ ಡಕೆಟ್‌ ಹಾಗೂ ಆಕಾಶ್‌ ದೀಪ್‌ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 5 ಬಾರಿ ಮುಖಾಮುಖಿಯಾಗಿದ್ದಾರೆ. ವೇಳೆ ಡಕೆಟ್‌ ಅವರನ್ನು ಆಕಾಶ್ ದೀಪ್ ನಾಲ್ಕು ಬಾರಿ ಪೆವಿಯನ್ ಹಾದಿ ತೋರಿಸಿದ್ದಾರೆ.

Story first published: Saturday, August 2, 2025, 7:45 [IST]
Other articles published on Aug 2, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+