For Quick Alerts
ALLOW NOTIFICATIONS  
For Daily Alerts
 

B.S. Chandrasekhar: ಪೋಲಿಯೋ ಗೆದ್ದ ಧೀರ: ಗೂಗ್ಲಿ ಮೂಲಕ ಬ್ಯಾಟರ್ ಕಾಡಿದ ಸ್ಟಾರ್ ಆಟಗಾರ

By ನಾಗೇಶ್

ಪೋಲಿಯೋ ರೋಗ ಬಂದು ಅದೇಷ್ಟೋ ಜನರ ಜೀವನ ನರಕ ಮಾಡಿದೆ. ಈ ಕಾಯಿಲೆಯನ್ನೇ ಗೆದ್ದು ವಿಶ್ವದಲ್ಲಿ ತಮ್ಮ ವಿಭಿನ್ನ ಬೌಲಿಂಗ್ ಶೈಲಿಯ ಮೂಲಕ ಸದ್ದು ಮಾಡಿದ ಆಟಗಾರ. ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬುಮ್ರಾ ಬೌಲಿಂಗ್ ಶೈಲಿಯನ್ನು ಕಂಡು ಅಸಂಪ್ರದಾಯಿಕ ಬೌಲಿಂಗ್ ಶೈಲಿ ಎಂದು ಹೇಳುತ್ತಾರೆ. ಇವರಂತೆ ಅಸಂಪ್ರದಾಯಿಕ ಬೌಲಿಂಗ್ ಶೈಲಿಯಿಂದಲೇ ವಿಶ್ವದ ಚಿತ್ತ ಲೆಗ್ ಸ್ಪಿನ್ ಬೌಲರ್ ಕರ್ನಾಟಕದ ಭಾಗವತ್ ಸುಬ್ರಮಣ್ಯಂ ಚಂದ್ರಶೇಖರ್.

ಮೇ 17, 1945 ರಂದು ಮೈಸೂರಿನಲ್ಲಿ ಜನಿಸಿದ ಚಂದ್ರಶೇಖರ್ ಅವರು ಸುಮಾರು ಐದು ವರ್ಷ ವಯಸ್ಸಿನವರಾಗಿದ್ದಾಗ ಅವರು ಪೋಲಿಯೊದಿಂದ ಬಳಲುತ್ತಿದ್ದರು ಮತ್ತು ಅವರ ಬಲಗೈ ಸಂವೇದನೆಯನ್ನು ಕಳೆದುಕೊಂಡರು. ನಂತರ ಎಡಗೈನಲ್ಲಿ ಟೇಬಲ್-ಟೆನ್ನಿಸ್ ಮತ್ತು ಬ್ಯಾಡ್ಮಿಂಟನ್ ಆಡುತ್ತಾ ಬೆಳೆದರು. ಬಲಗೈಗೆ ಹೆಚ್ಚಿನ ಆರೈಕೆ ಮಾಡಲಾಗುತ್ತಿತ್ತು, ವಿವಿಧ ಚಿಕಿತ್ಸೆಗಳ ನಂತರ ಬಲಗೈ ಸ್ವಾಧೀನಕ್ಕೆ ಬಂದಿತು.

Overcoming Polio: B. S. Chandrasekhars Inspiring Cricket Journey

ಅವರ ಕುಟುಂಬ ಬೆಂಗಳೂರಿಗೆ ಸ್ಥಳಾಂತರಗೊಂಡಿತು. ನಂತರ ಅವರು ಕ್ರಿಕೆಟ್ ಆಡುವತ್ತ ಆಸಕ್ತಿ ಬೆಳೆಸಿಕೊಂಡರು. ರಬ್ಬರ್ ಚೆಂಡಿನಲ್ಲಿ ಆಡುತ್ತಿದ್ದ ಅವರು, ನಂತರ ಲೆದರ್ ಬಾಲ್‌ನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದರು. ಅವರ ಸ್ಪಿನ್ ಬೌಲಿಂಗ್‌ ಆದಷ್ಟು ಬೇಗ ಅವರನ್ನು ರಾಜ್ಯ, ದೇಶಕ್ಕಾಗಿ ಆಡಲು ಸಹಾಯ ಮಾಡಿತು.

1964ರಲ್ಲಿ ಚೊಚ್ಚಲ ಟೆಸ್ಟ್ ಕ್ರಿಕೆಟ್ ಪಂದ್ಯ

ಭಾರತದ ದಿಗ್ಗಜ ಆಟಗಾರ ಬಿಎಸ್ ಚಂದ್ರಶೇಖರ್ ಸ್ಪಿನ್ ಬೌಲಿಂಗ್ ಮಾಂತ್ರಿಕ. ಅವರು ಇಎಎಸ್ ಪ್ರಸನ್ನ, ಬಿಷನ್ ಸಿಂಗ್ ಬೇಡಿ, ಶ್ರೀನಿವಾಸರಾಘವನ್ ವೆಂಕಟರಾಘವನ್ ಒಳಗೊಂಡ ಟೀಮ್ ಇಂಡಿಯಾದ ಸ್ಪಿನ್ ವಿಭಾಗದ ಭಾಗವಾಗಿದ್ದರು. ಈ ಆಟಗಾರರು 1960 ರಿಂದ 1970 ರವರೆಗೆ ಪ್ರಾಬಲ್ಯ ಮೆರೆದಿದ್ದರು. ಅವರು ಕ್ರಿಕೆಟ್‌ನಲ್ಲಿ ಮೊದಲಿನಿಂದಲೂ ಆಸಕ್ತಿ ಇತ್ತು. ಅವರು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ರಿಚಿ ಬೆನಾಡ್ ಅವರ ಆಟದ ಶೈಲಿಯಿಂದ ಸ್ಫೂರ್ತಿ ಪಡೆದು, 10 ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಅಲ್ಲದೆ 1964 ರಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದರು.

ಚಂದ್ರಶೇಖರ್ ಅವರು ತಮ್ಮ ಜಿಗಿತ ಮತ್ತು ಬಿಗುವಾದ ದಾಳಿಯಿಂದಲೇ ಹೆಸರುವಾಸಿ. ಇವರು ತಮ್ಮ ಎರಡು ಕೈಗಳಲ್ಲಿ ಬೌಲನ್ನು ಮುಚ್ಚಿಕೊಂಡು ಜಿಗಿದು ಬೌಲಿಂಗ್ ಮಾಡಿದರೆ, ಎದುರಾಳಿ ಬ್ಯಾಟರ್ ಒಂದು ಕ್ಷಣ ಕಕ್ಕಾಬಿಕ್ಕಿ ಆಗುತ್ತಿದ್ದರು. ಚಂದ್ರಶೇಖರ್ ಎಸೆಯುತ್ತಿದ್ದ ಗೂಗ್ಲಿ ಅರಿಯುವಲ್ಲಿ ವಿಫಲರಾಗುತ್ತಿದ್ದ ಬ್ಯಾಟರ್ ಗಳು ವಿಕೆಟ್ ನೀಡುತ್ತಿದ್ದರು. ದೇಶದಲ್ಲಿ ಅಷ್ಟೇ ಅಲ್ಲ, ವಿದೇಶಗಳಲ್ಲಿಯೂ ಚಂದ್ರಶೇಖರ್ ತಮ್ಮ ವಿಶಿಷ್ಠ ಬೌಲಿಂಗ್ ಮೂಲಕ ವಿಕೆಟ್ ಪಡೆದು ಮಿಂಚಿದ್ದಾರೆ. ಕರ್ನಾಟಕದ ಲೆಗ್ ಸ್ಪಿನ್ನರ್ ಭಾರತ ತಂಡ ವಿದೇಶಗಳಲ್ಲಿ ಟೆಸ್ಟ್ ಪಂದ್ಯ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಟಗಾರ.

242 ವಿಕೆಟ್ ಪಡೆದಿರುವ ಬೌಲರ್

ಇಂಗ್ಲೆಂಡ್‌ನಲ್ಲಿ ಭಾರತದ ಗೆಲುವಿನ ಶ್ರೇಯ ಚಂದ್ರಶೇಖರ್ ಗೆ ಸಲ್ಲುತ್ತದೆ. ಇವರ ಭರ್ಜರಿ ಪ್ರದರ್ಶನದ ಫಲವಾಗಿದೆ 1972 ರಲ್ಲಿ ಅರ್ಜುನ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ಬ್ಯಾಟರ್ ಆಗಿ, ಅವರು 11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರುತ್ತಿದ್ದರು ಮತ್ತು ತಮ್ಮ ಅವಕಾಶಗಳನ್ನು ಸಮರ್ಥಿಸಿಕೊಂಡರು. ಅವರು ಪ್ರತಿ 4 ಇನ್ನಿಂಗ್‌ನ ನಂತರ 0 ರನ್‌ಗೆ ಔಟಾಗುತ್ತಿದ್ದರು.

ಚಂದ್ರಶೇಖರ್ ವಿಶಿಷ್ಟ ಬೌಲಿಂಗ್ ಆಕ್ಷನ್ ಮತ್ತು ರನ್ ಅಪ್ ಬ್ಯಾಟರ್ಗಳಿಗೆ ನುಂಗಲಾಗದ ತುತ್ತಾಗಿತ್ತು. ಅವರ ಗೂಗ್ಲಿ ಮತ್ತು ಟಾಪ್ ಸ್ಪಿನ್ ಆಡುವುದು ಬ್ಯಾಟರ್ ಗಳಿಗೆ ಸುಲಭವಾಗಿರಲಿಲ್ಲ. ಏಕೆಂದರೆ ಅವರ ಎಸೆತಗಳ ವೇಗ ಮಧ್ಯಮ ವೇಗದ ಬೌಲರ್ ನಂತೆಯೇ ಇರುತ್ತಿದ್ದವು. ಹೀಗಾಗಿಯೇ ಚಂದ್ರಶೇಖರ್ ತಮ್ಮ 19ನೇ ವಯಸ್ಸಿನಲ್ಲಿ ಭಾರತ ಪರ ಟೆಸ್ಟ್‌ಗೆ ಪದಾರ್ಪಣೆ ಮಾಡಿದರು. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಚಂದ್ರಶೇಖರ್ 4 ವಿಕೆಟ್ ಕಬಳಿಸಿ ತಮ್ಮ ಕ್ಷಮತೆಯನ್ನು ಸಾಬೀತು ಪಡೆಸಿದ್ದರು.

ಚಂದ್ರಶೇಖರ್ ಭಾರತ ತಂಡದ ಭಾಗವಾಗಿದ್ದಾಗ, ಟೀಮ್ ಇಂಡಿಯಾ 14 ಟೆಸ್ಟ್ ಗೆದಿದೆ. ಈ ಪಂದ್ಯಗಳಲ್ಲಿ ಬಿಎಸ್ 98 ವಿಕೆಟ್ಗಳನ್ನು ಪಡೆದಿದ್ದು, ಅವರ ಸರಾಸರಿ 19.27 ಆಗಿದೆ. ಒಟ್ಟಾರೆಯಾಗಿ, ಅವರು ರಾಷ್ಟ್ರೀಯ ತಂಡಕ್ಕಾಗಿ 58 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಬಿಎಸ್ ಬೆಸ್ಟ್ ಬೌಲಿಂಗ್ 8 ವಿಕೆಟ್ ಗೆ 79 ಆಗಿದೆ. ಒಟ್ಟಾರೆ ಚಂದ್ರಶೇಖರ್ 242 ವಿಕೆಟ್ ಗಳನ್ನು ಪಡೆದು ಬೀಗಿದ್ದಾರೆ.

Story first published: Sunday, August 13, 2023, 11:09 [IST]
Other articles published on Aug 13, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+