ಇಶಾಂತ್ ಶರ್ಮಾ ಅನ್ ಫಿಟ್ : ವಿಶ್ವಕಪ್ ತಂಡದಿಂದ ಔಟ್
ಅಡಿಲೇಡ್, ಫೆ. 7: ಭಾರತದ ಹಿರಿಯ ಬೌಲರ್ ಇಶಾಂತ್ ಶರ್ಮಾ ಅವರನ್ನು ವಿಶ್ವಕಪ್ ತಂಡದಿಂದ ಕೈಬಿಡಲಾಗಿದೆ. ಮೊಣಕಾಲು ಗಾಯದಿಂದ ನರಳುತ್ತಿದ್ದ ಇಶಾಂತ್ ಶರ್ಮಾ ಶನಿವಾರ ನಡೆದ ಪರೀಕ್ಷೆಯಲ್ಲಿ ದೈಹಿಕ ಸಾಮರ್ಥ್ಯ ನಿರೂಪಿಸಲು ವಿಫಲರಾಗಿದ್ದಾರೆ.
ವಿಶ್ವಕಪ್ ಪಂದ್ಯಾವಳಿಗೆ ಆಯ್ಕೆಯಾಗಿದ್ದ ಇಶಾಂತ್ ಶರ್ಮಾ, ರೋಹಿತ್ ಶರ್ಮಾ, ಭುವನೇಶ್ವರ್ ಕುಮಾರ್ ಹಾಗೂ ರವೀಂದ್ರ ಜಡೇಜಾ ಗಾಯಗೊಂಡಿದ್ದರು. ಅವರಿಗೆ ಶನಿವಾರ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಯಿತು. ಇಶಾಂತ್ ಶರ್ಮಾ ಬಿಟ್ಟು ಉಳಿದ ಮೂವರೂ ಸಾಮರ್ಥ್ಯ ಸಾಬೀತುಪಡಿಸಿದರು. [ದೋನಿ ದಂಪತಿಗೆ ಹೆಣ್ಣು ಮಗು]

ಪಿಟಿಐಗೆ ಈ ವಿಷಯವನ್ನು ಬಿಸಿಸಿಐ ದೃಢಪಡಿಸಿದೆ. "ಇಶಾಂತ್ ಶರ್ಮಾ ಅವರು ವಿಶ್ವಕಪ್ ಆರಂಭವಾಗುವ ಸಮಯಕ್ಕೆ ಗಾಯದಿಂದ ಗುಣವಾಗುವುದು ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ. ಆದ್ದರಿಂದ ಅವರನ್ನು ವಿಶ್ವಕಪ್ ತಂಡದಿಂದ ಕೈಬಿಡಲಾಗಿದೆ" ಎಂದು ತಿಳಿಸಲಾಗಿದೆ. [ಭಾರತ-ಆಸ್ಟ್ರೇಲಿಯಾ ಅಭ್ಯಾಸ ಪಂದ್ಯ ಹೌಸ್ ಫುಲ್]
ಮಂಡಿನೋವಿನಲ್ಲಿದ್ದ ರೋಹಿತ್ ಶರ್ಮಾ, ಪಾದದ ಸಮಸ್ಯೆ ಎದುರಿಸುತ್ತಿದ್ದ ಭುವನೇಶ್ವರ್ ಕುಮಾರ್ ಹಾಗೂ ಭುಜದ ನೋವಿನಲ್ಲಿದ್ದ ರವೀಂದ್ರ ಜಡೇಜಾ ದೈಹಿಕ ಸಾಮರ್ಥ್ಯ ನಿರೂಪಿಸಿದ್ದಾರೆ. ಆದ್ದರಿಂದ ಅವರು ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯಗಳಲ್ಲಿ ಆಡಲಿದ್ದಾರೆ. [ವಿಶ್ವಕಪ್ : ಹುಬ್ಬೇರಿಸುವಂತ 10 ಅಂಶ]
ಆದರೆ, ಇಶಾಂತ್ ಶರ್ಮಾ ಅವರನ್ನು ತಂಡದಿಂದ ಕೈಬಿಟ್ಟಿರುವ ಕುರಿತು ಬಿಸಿಸಿಐ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications