Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯುವ ಬೌಲರ್‌ಗೆ ಅನುಭವಿ ಬೌಲರ್ ಸವಾಲು: ಭುವಿಗೆ ಪರ್ಪಲ್‌ ಕ್ಯಾಪ್‌

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಈ ಬಾರಿಯ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಈ ವೇಳೆ ಭರವಸೆಯ ಆಟಗಾರರು ಸ್ಥಿರ ಪ್ರದರ್ಶನ ತಂಡದ ಜಯದಲ್ಲಿ ಮಿಂಚುತ್ತಿದೆ. ಆರ್‌ಸಿಬಿ ಬ್ಯಾಟಿಂಗ್ ವಿಭಾಗವನ್ನು ತನ್ನ ಭುಜದ ಮೇಲೆ ಹೊತ್ತುಕೊಂಡಿರುವ ಸ್ವಿಂಗ್‌ ಬೌಲರ್‌ ಭುವನೇಶ್ವರ್ ಕುಮಾರ್ ಕಮಾಲ್ ಮಾಡುತ್ತಿದ್ದಾರೆ. ಇವರು ತಮ್ಮ ಅನುಭವ ಸಂಪೂರ್ಣವಾಗಿ ಬಳಸಿಕೊಂಡು ಆಡಿದ ಭುವಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

ಆರ್‌ಸಿಬಿ ತಂಡದ ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಮೇಲುಗೈ ಸಾಧಿಸಲು ನೆರವಾಗುವ ಬೌಲರ್‌ ಭುವನೇಶ್ವರ್ ಕುಮಾರ್. ತಮ್ಮ ವಯಸ್ಸನ್ನೂ ಲೆಕ್ಕಿಸದೇ ಪ್ರದರ್ಶನ ನೀಡಿರುವ ಭುವಿ ಅಬ್ಬರಿಸುತ್ತಿದ್ದಾರೆ. ಈ ಲೀಗ್‌ನಲ್ಲೂ ಭುವನೇಶ್ವರ್ ಕುಮಾರ್ ಯುವಕರ ಸವಾಲು ಮೆಟ್ಟಿನಿಂತು ಎಲ್ಲರ ಗಮನ ಸೆಳೆದಿದ್ದಾರೆ. ಭಾರತದ ಪರ ಮೂರು ಫಾರ್ಮೆಟ್‌ಗಳನ್ನು ಆಡಿರುವ ಅನುಭವ ಹೊಂದಿರುವ ಭುವಿ, ಐಪಿಎಲ್‌ನ ಯಶಸ್ವಿ ಬೌಲರ್‌. ಇವರು ಸುಮಾರು 4 ವರ್ಷದಿಂದ ತಂಡಕ್ಕೆ ಕಮ್‌ ಬ್ಯಾಕ್‌ ಮಾಡಲು ವಿಫಲರಾಗಿದ್ದಾರೆ.

Bhuvneshwar Kumar

ಗುಜರಾತ್‌ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲೂ ಭುವನೇಶ್ವರ್ ಕಮಾಲ್‌ ಪ್ರದರ್ಶಿಸಿದ್ದಾರೆ. ಆರಂಭಿಕ ಸಾಯಿ ಸುದರ್ಶನ್‌ ಅವರಿಗೆ ಸ್ವಿಂಗ್ ಬೌಲ್ ಎಸೆದ ಭುವಿ, ಸಾಯಿ ಬ್ಯಾಟ್‌ ತಾಗಿದ ಚೆಂಡು ಜಿತೇಶ್‌ ಶರ್ಮಾ ಕೈ ಸೇರಿತು. ಮೊದಲ ವಿಕೆಟ್‌ಗೆ ಸಾಯಿ ಸುದರ್ಶನ್‌ ಹಾಗೂ ಶುಭಮನ್‌ ಗಿಲ್ ಜೋಡಿ ಮೊದಲ ವಿಕೆಟ್‌ಗೆ 42 ರನ್‌ ಸೇರಿಸಿತು. ಇನ್ನು ಇನಿಂಗ್ಸ್‌ನ ಐದನೇ ಓವರ್‌ನ ಕೊನೆಯ ಎಸೆತದಲ್ಲಿ ಗುಜರಾತ್ ನಾಯಕ ಶುಭಮನ್‌ ಗಿಲ್ ಅವರಿಗೆ ಖೆಡ್ಡಾ ತೋಡಿದರು. ಭುವಿ ಅವರ ಎಸೆತವನ್ನು ಎಕ್ಸ್‌ಟ್ರಾ ಕವರ್‌ ನಲ್ಲಿ ಬೌಂಡರಿ ಗಿಟ್ಟಿಸಿಕೊಳ್ಳಲು ನೋಡಿದರು. ಆದರೆ ವಿರಾಟ್ ಕೊಹ್ಲಿ ಸೊಗಸಾದ ಕ್ಯಾಚ್ ಪಡೆದರು.

ಭುವಿ ಕಮಾಲ್‌

ಮೊದಲ ಟೈಮ್‌ ಔಟ್ ಬಳಿಕ ಭುವನೇಶ್ವರ್ ಕುಮಾರ್ ಮತ್ತೊಂದು ಓವರ್ ಮಾಡಿದರು. ಈ ಹಂತದಲ್ಲಿ ಅಪಾಯಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದ ಜೋಸ್‌ ಬಟ್ಲರ್‌ ಅವರಿಗೆ ಭುವನೇಶ್ವರ್ ಕುಮಾರ್ ಕಾಡಿದರು. ಓವರ್ ಮೂರನೇ ಎಸೆತದಲ್ಲಿ ಬೋಲ್ಡ್ ಆದರು. ಮಿಡಲ್ ಹಾಗೂ ಲೆಗ್‌ ಸ್ಟಂಪ್‌ ಮೇಲೆ ಇದ್ದ ಚೆಂಡನ್ನು ಬಾರಿಸಲು ಹೋದ ಬಟ್ಲರ್‌ ಔಟ್ ಆದರು. ಭುವನೇಶ್ವರ್ ಕುಮಾರ್ ಗುಜರಾತ್ ಟೈಟಾನ್ಸ್ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳಿಗೆ ಕಾಡಿದರು.

19ನೇ ಆವೃತ್ತಿಯ ಐಪಿಎಲ್‌ನಲ್ಲಿ ಭುವನೇಶ್ವರ್ ಕುಮಾರ್ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಭುವನೇಶ್ವರ್ ಕುಮಾರ್ ಅಗ್ರ ಸ್ಥಾನದಲ್ಲಿದ್ದಾರೆ. 36 ವರ್ಷದ ಭುವಿ ಆಡಿದ 9 ಪಂದ್ಯಗಳಲ್ಲಿ 17 ವಿಕೆಟ್‌ ಪಡೆದು, ಹೆಚ್ಚು ವಿಕೆಟ್‌ ಪಡೆದ ಸಾಧಕರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.

ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್ಸ್‌

ಭುವನೇಶ್ವರ್ ಕುಮಾರ್ (ಆರ್‌ಸಿಬಿ), 9 ಪಂದ್ಯ, 17 ವಿಕೆಟ್‌
ಇಶಾನ್‌ ಮಲಿಂಗ್ (ಎಸ್‌ಆರ್‌ಎಚ್‌), 9 ಪಂದ್ಯ, 15 ವಿಕೆಟ್‌
ಜೋಫ್ರಾ ಆರ್ಚರ್ (ಆರ್‌ಆರ್‌), 9 ಪಂದ್ಯ, 14 ವಿಕೆಟ್‌
ಅನ್ಶುಲ್ ಕಾಂಬೋಜ್ (ಸಿಎಸ್‌ಕೆ), 8 ಪಂದ್ಯ, 14 ವಿಕೆಟ್‌
ಕಗಿಸೊ ರಬಾಡ (ಜಿಟಿ), 9 ಪಂದ್ಯ, 14 ವಿಕೆಟ್‌

Story first published: Thursday, April 30, 2026, 22:54 [IST]
Other articles published on Apr 30, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+