Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೈಲ್ ಜೆಮಿಸನ್ ಈಗ 'ನ್ಯೂಜಿಲೆಂಡ್ ವರ್ಷದ ಕ್ರಿಕೆಟಿಗ'

Pacer Kyle Jamieson won New Zealands Cricketer Of The Year title

ನ್ಯೂಜಿಲೆಂಡ್ ತಂಡ ಹಲವು ದಿನಗಳ ಹಿಂದೆಯೇ ಇಂಗ್ಲೆಂಡ್ ತಲುಪಿದ್ದು ಜೂನ್ 18ರಿಂದ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಸೆಣಸಾಡಲಿದೆ.

ಇದಕ್ಕೂ ಮೊದಲು ಇಂಗ್ಲೆಂಡ್ ವಿರುದ್ಧ ಜೂನ್ 2ರಿಂದ ಆರಂಭವಾಗಲಿರುವ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ನ್ಯೂಜಿಲೆಂಡ್ ತಂಡ ಆಡಲಿದೆ. ಈ ನಡುವೆ ನ್ಯೂಜಿಲೆಂಡ್ ತಂಡದ ಪ್ರಮುಖ ಆಟಗಾರ ಕೈಲ್ ಜೆಮಿಸನ್ ಸೋಮವಾರದಂದು ನ್ಯೂಜಿಲೆಂಡ್ ತಂಡದ ವರ್ಷದ ಕ್ರಿಕೆಟಿಗ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ನ್ಯೂಜಿಲೆಂಡ್ ತಂಡದ ಆಟಗಾರರು ಮತ್ತು ಸಿಬ್ಬಂದಿ ವರ್ಗದವರೆಲ್ಲರೂ ಮತ ಹಾಕುವ ಮೂಲಕ ಓರ್ವ ಆಟಗಾರನನ್ನು ವರ್ಷದ ಕ್ರಿಕೆಟಿಗ ಎಂದು ಆಯ್ಕೆ ಮಾಡಲಾಗುತ್ತಾರೆ. ಹೀಗೆ ಕೈಲ್ ಜೆಮಿಸನ್ ಹೆಚ್ಚಿನ ಮತಗಳನ್ನು ಪಡೆಯುವುದರ ಮೂಲಕ ಈ ವರ್ಷದ ಕ್ರಿಕೆಟಿಗ ಎಂದು ಆಯ್ಕೆಯಾಗಿದ್ದಾರೆ. ಈ ನ್ಯೂಜಿಲೆಂಡ್ ವರ್ಷದ ಕ್ರಿಕೆಟಿಗ ಎಂಬ ಶೀರ್ಷಿಕೆಯನ್ನು ಮೊದಲ ಬಾರಿಗೆ ಬ್ರೆಂಡನ್ ಮೆಕಲಮ್ 2012ರಲ್ಲಿ ಪಡೆದಿದ್ದರು.

Story first published: Wednesday, June 2, 2021, 9:48 [IST]
Other articles published on Jun 2, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+