ಗೆಳತಿ ರಾಗಿಣಿ ಜೊತೆ ವೇಗಿ ವರುಣ್ ಮದುವೆ
ಜಮ್ಶೇಡ್ ಪುರ್, ಫೆ. 02: ಬಹುಕಾಲದ ಗೆಳತಿಯರನ್ನು ಕ್ರಿಕೆಟರ್ ಗಳು ವರಿಸುವ ಪರಿಪಾಠ ಮುಂದುವರೆದಿದೆ. ರೋಹಿತ್ ಶರ್ಮ ಅವರು ಗೆಳತಿ ರಿತಿಕಾ ಸಜ್ಡಾ ಅವರನ್ನು ಮದುವೆಯಾದ ಬಳಿಕ ಈಗ ವೇಗಿ ವರುಣ್ ಅರೋನ್ ಅವರು ತಮ್ಮ ಗೆಳತಿ ರಾಗಿಣಿ ಕೈ ಹಿಡಿದಿದ್ದಾರೆ.
ಬಾಲ್ಯದ ಗೆಳತಿ ರಾಗಿಣಿ ಅವರ ಜೊತೆ ವರುಣ್ ಅರೋನ್ ಅವರು ಜಮ್ಶೇಡ್ ಪುರ್ ದಲ್ಲಿ ಸೋಮವಾರ ಮದುವೆ ನೋಂದಣಿ ಮಾಡಿಸಿದ್ದಾರೆ. ಗುರುವಾರ(ಫೆಬ್ರವರಿ 04)ದಂದು ಕ್ರೈಸ್ತ ಸಂಪ್ರದಾಯದ ಪ್ರಕಾರ ಇಬ್ಬರು ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ. [ಚಿತ್ರಗಳು: ರೋಹಿತ್ ಶರ್ಮ- ರಿತಿಕಾ ಮದುವೆ ಸಂಭ್ರಮ]

ಲಯೋಲಾ ಶಾಲೆಯಲ್ಲಿ ಓದುತ್ತಿರುವಾಗಿನಿಂದಲೂ ಅರೋನ್ ಹಾಗೂ ರಾಗಿಣಿ ಇಬ್ಬರಲ್ಲೂ ಆಪ್ತ ಗೆಳೆತನ ಇತ್ತು. ಸೋಮವಾರ ಇಬ್ಬರು ಮನೆಯವರ ಒಪ್ಪಿಗೆ ಪಡೆದು ಮದುವೆ ನೋಂದಣಿ ಪ್ರಕ್ರಿಯೆ ಮುಗಿಸಿದ್ದಾರೆ.[ಫೆಬ್ರವರಿಯಲ್ಲಿ ಇರ್ಫಾನ್ ಪಠಾಣ್ ಗೆ ಶಾದಿ ಭಾಗ್ಯ]
26ವರ್ಷ ವಯಸ್ಸಿನ ವರುಣ್ ಅರೋನ್ ಅವರು ಜಾರ್ಖಂಡ್ ರಣಜಿ ತಂಡದ ನಾಯಕರಾಗಿದ್ದಾರೆ. ಏಕದಿನ ಪಂದ್ಯದಲ್ಲಿ ಎಂಎಸ್ ಧೋನಿ ಅವರು ಕೂಡಾ ಅರೋನ್ ನಾಯಕತ್ವದಲ್ಲಿ ಬೆಂಗಳೂರಿನಲ್ಲಿ ಆಡಿದ್ದರು. ಈಗ ಮತ್ತೊಮ್ಮೆ ಬೆಂಗಳೂರಿನಲ್ಲಿ ಫೆಬ್ರವತರಿ 3-7ರ ತನಕ ಮುಂಬೈ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದೆ.[ಮದ್ವೆ ಡೇಟ್ ಫಿಕ್ಸ್ ಮಾಡಿಕೊಡಿ ಎಂದ ಯುವರಾಜ್]
ಹರ್ಭಜನ್ ಸಿಂಗ್ ಮದುವೆ ಸಂಭ್ರಮದ ನಂತರ ರೋಹಿತ್ ಶರ್ಮ ಅವರು ತಮ್ಮ ಗೆಳತಿಯನ್ನು ವರಿಸಿದ್ದರು. ಯುವರಾಜ್ ಸಿಂಗ್ ಅವರು ಕೂಡಾ ಹಜೇಲ್ ಕೀಚ್ ಜೊತೆ ನವೆಂಬರ್ -ಡಿಸೆಂಬರ್ ನಲ್ಲಿ ಮದುವೆಯಾಗುವುದಾಗಿ ಘೋಷಿಸಿದ್ದಾರೆ.ಫೆಬ್ರವರಿಯಲ್ಲಿ ಇರ್ಫಾನ್ ಪಠಾಣ್ ಗೆ ಶಾದಿ ಭಾಗ್ಯ ಸಿಗಲಿದೆ ಎಂಬ ಸುದ್ದಿಯೂ ಇದೆ. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications