ಇಮ್ರಾನ್ ಖಾನ್ ಪರ ಬ್ಯಾಟ್ ಮಾಡಿದ ಗವಾಸ್ಕರ್, ಕಪಿಲ್ ದೇವ್: ಸರ್ಕಾರದ ಮುಂದೆ 3 ಬೇಡಿಕೆ
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಸದ್ಯ ಜೈಲಿನಲ್ಲಿದ್ದಾರೆ. ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಅವರ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಸುದ್ದಿಗಳು ಹೊರಬಂದಿವೆ. ಇವರ ಚೇತರಿಕೆಗಾಗಿ ಪ್ರಪಂಚದಾದ್ಯಂತ ಕ್ರಿಕೆಟ್ ಆಟಗಾರರು ಒಗ್ಗೂಡಿದ್ದಾರೆ. ಭಾರತದ ಸ್ಟಾರ್ ಬ್ಯಾಟರ್ ಸುನಿಲ್ ಗವಾಸ್ಕರ್ ಹಾಗೂ ಕಪೀಲ್ ದೇವ್ ಇಮ್ರಾನ್ ಖಾನ್ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಪಾಕ್ ಮಾಜಿ ಪ್ರಧಾನಿ ಹಾಗೂ ವಿಶ್ವಕಪ್ ವಿಜೇತ ತಂಡದ ನಾಯಕ ಇಮ್ರಾನ್ ಖಾನ್ ಅವರ ಬೆಂಬಲಕ್ಕೆ ದಿಗ್ಗಜರು ನಿಂತಿದ್ದಾರೆ. ಅಲ್ಲದೆ ನ್ಯಾಯಯುತ ಚಿಕಿತ್ಸೆಗಾಗಿ ಈ ಮಾಜಿ ಆಟಗಾರರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇಮ್ರಾನ್ ಖಾನ್ ಅವರಿಗೆ ಉತ್ತಮ ಚಿಕಿತ್ಸೆ ನೀಡಬೇಕು ಎಂದು ವಿಶ್ವದಾದ್ಯಂತದ ಮಾಜಿ ಕ್ರಿಕೆಟಿಗರು ಒಗ್ಗೂಡಿ ಒತ್ತಾಯಿಸಿದ್ದಾರೆ.

ದೀರ್ಘಕಾಲದ ತಮ್ಮ ಎದುರಾಳಿ ಬೌಲರ್ ಇಮ್ರಾನ್ ಖಾನ್ ಅವರ ಆರೋಗ್ಯದ ಸುಧಾರಣೆಯ ಬಗ್ಗೆ ಗವಾಸ್ಕರ್ ಹೇಳಿಕೆ ನೀಡಿದ್ದಾರೆ. ಇವರಿಗೆ ಉತ್ತಮ ಚಿಕಿತ್ಸೆಯ ಅವಶ್ಯಕತೆ ಇದೆ. ನಾವು ಮೈದಾನದಲ್ಲಿ ಪ್ರತಿಸ್ಪರ್ಧಿಗಳು ಆದರೆ ಮೈದಾನದ ಹೊರಗೆ ನಾವೆಲ್ಲಾ ಸ್ನೇಹಿತರು ಎಂದು ತಿಳಿಸಿದ್ದಾರೆ.
ದಿಗ್ಗಜರ ಬೇಡಿಕೆ ಏನು?
ಪಾಕಿಸ್ತಾನದ ಮಾಜಿ ನಾಯಕ ಮತ್ತು ವಿಶ್ವ ಕ್ರಿಕೆಟ್‌ನ ದಂತಕಥೆ ಇಮ್ರಾನ್ ಖಾನ್ ಅವರ ಚಿಕಿತ್ಸೆಗೆ ನಾವು ಪತ್ರದಲ್ಲಿ ಸಹಿ ಹಾಕಿದ್ದೇವೆ. ಇವರು ಕ್ರಿಕೆಟ್ ಆಟಕ್ಕೆ ನೀಡಿದ ಕೊಡುಗೆಯನ್ನು ಪ್ರಶಂಸಿಸಲಾಗುತ್ತಿದೆ. ಪಾಕಿಸ್ತಾನ ಚೊಚ್ಚಲ ವಿಶ್ವಕಪ್ ಗೆಲ್ಲುವಲ್ಲಿ ಇಮ್ರಾನ್ ಖಾನ್ ಅವರ ಕೊಡುಗೆ ಅಪಾರ. ಇವರ ಧೈರ್ಯ, ಸಾಹಸ, ನಾಯಕತ್ವದ ಗುಣಗಳು, ಕ್ರೀಡಾ ಮನೋಭಾವ ಹಲವು ಪೀಳಿಗೆಗೆ ಸ್ಪೂರ್ತಿ ಎಂದು ಕಪಿಲ್ ದೇವ್ ತಿಳಿಸಿದ್ದಾರೆ.
ಒಬ್ಬ ಕ್ರಿಕೆಟ್ ಆಟಗಾರನಾಗಿ ಇಮ್ರಾನ್ ಖಾನ್ ಯಶಸ್ಸು ಸಾಧಿಸಿದಂತೆ, ಒಬ್ಬ ರಾಜಕೀಯ ನಾಯಕನಾಗಿಯೂ ದೊಡ್ಡ ಸಾಧನೆ ಮಾಡಿದ್ದಾರೆ ಎಂದು ಕಪಿಲ್ ದೇವ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಪಾಕಿಸ್ತಾನದ ಮಾಜಿ ನಾಯಕನ ಆರೋಗ್ಯ ಮತ್ತು ಕಾನೂನು ಸ್ಥಿತಿ ಹದಗೆಡುತ್ತಿದ್ದು, ಉತ್ತಮ ಚಿಕಿತ್ಸೆ ನೀಡಬೇಕು ಎಂದು ಪಾಕ್ ಸರ್ಕಾರಕ್ಕೆ ಬರೆದ ಪತ್ರಕ್ಕೆ ಆಸ್ಟ್ರೇಲಿಯಾದ ದಿಗ್ಗಜ ಗ್ರೆಗ್ ಚಾಪೆಲ್ ಸಹ-ಸಹಿ ಮಾಡಿದ್ದಾರೆ. ಮಾಜಿ ನಾಯಕರು ಪಾಕಿಸ್ತಾನ ಸರ್ಕಾರಕ್ಕೆ ಇಮೇಲ್ ಮಾಡಿ, ಇಮ್ರಾನ್ ಖಾನ್ ಪಾಕಿಸ್ತಾನದಲ್ಲಿ ಮಾತ್ರವಲ್ಲದೆ ವಿಶ್ವ ಕ್ರಿಕೆಟ್‌ನಲ್ಲೂ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಅವರ ಆರೋಗ್ಯವು ಜೈಲಿನಲ್ಲಿ ಗಮನಾರ್ಹವಾಗಿ ಹದಗೆಡುತ್ತಿದೆ ಅವರಿಗೆ ಉತ್ತಮ ಚಿಕಿತ್ಸೆಗಾಗಿ ನಾಯಕರು ಧ್ವನಿ ಎತ್ತಿದ್ದಾರೆ.
ಮಾಜಿ ನಾಯಕ ಇಮ್ರಾನ್ ಖಾನ್ ಪರ ಮಾಜಿ ನಾಯಕರು 3 ಬೇಡಿಕೆ ಇಟ್ಟಿದ್ದಾರೆ.
- - ಇಮ್ರಾನ್ ಖಾನ್ ಅವರಿಗೆ ತಕ್ಷಣ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಬೇಕು. ಅವರಿಗೆ ಅವರ ಆಯ್ಕೆಯ ತಜ್ಞ ವೈದ್ಯರನ್ನು ಒದಗಿಸಬೇಕು.
- - ಇಮ್ರಾನ್ ಖಾನ್ ಅವರಿಗೆ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಭೇಟಿಗೆ ಅವಕಾಶ ನೀಡಬೇಕು. ಅವರಿಗೆ ಮಾನವೀಯ ಮತ್ತು ಗೌರವಾನ್ವಿತ ಜೈಲು ಶಿಕ್ಷೆಯನ್ನು ನೀಡಬೇಕು.
- - ಇಮ್ರಾನ್ ಖಾನ್ ಅವರಿಗೆ ಕಾನೂನು ಹೋರಾಟ ನಡೆಸಲು ಅವಕಾಶ ನೀಡಬೇಕು ಎಂದು ಮಾಜಿ ನಾಯಕರು ಬೇಡಿಕೆ ಇಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications