ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಈ ಯುಗದ ಶ್ರೇಷ್ಠ ಆಟಗಾರ ಎನಿಸಲು ಕಾರಣ ವಿವರಿಸಿದ ಪಾಕ್ ಮಾಜಿ ಕ್ರಿಕೆಟಿಗ

Pakistan batting great Mohammed Yousuf praises Virat Kohli

ಪಾಕಿಸ್ತಾನ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಮೊಹಮ್ಮದ್ ಯೂಸುಫ್ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ವಿರಾಟ್ ಕೊಹ್ಲಿ ಎಲ್ಲಾ ಮಾದರಿಯಲ್ಲಿಯೂ ಅದ್ಭುತವಾದ ಪ್ರದರ್ಶನವನ್ನು ನೀಡಲು ಬಹುಮುಖ್ಯ ಕಾರಣವೇನೆಂದು ಮೊಹಮ್ಮದ್ ಯೂಸುಫ್ ವಿವರಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್‌ನ ಮಾಜಿ ಆಟಗಾರ ಯೂಸುಫ್ ವಿರಾಟ್ ಕೊಹ್ಲಿಯ ಅಭ್ಯಾಸದ ಬಗ್ಗೆ ವಿಶೇಷ ಮಾತುಗಳನ್ನು ಆಡಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತರಬೇತಿಯಲ್ಲಿ ತನ್ನನ್ನು ತಾನು ಅರ್ಪಿಸಿಕೊಳ್ಳುವ ಕಾರಣದಿಂದಾಗಿಯೇ ಇತರ ಎಲ್ಲಾ ಆಟಗಾರರಿಗಿಂತ ಶ್ರೇಷ್ಠರನ್ನಾಗಿ ಆತ ಗುರುತಿಸಿಕೊಳ್ಳುವಂತಾಗಿದೆ ಎಂದು ಮೊಹಮ್ಮದ್ ಯೂಸುಫ್ ಹೇಳಿದ್ದಾರೆ.

ಟೆಸ್ಟ್‌ ವೃತ್ತಿ ಬದುಕಿನ ಗಾಳಿಸುದ್ದಿಗೆ ಖಾರವಾಗಿ ಪ್ರತಿಕ್ರಿಯಿಸಿದ ಭುವನೇಶ್ವರ್ಟೆಸ್ಟ್‌ ವೃತ್ತಿ ಬದುಕಿನ ಗಾಳಿಸುದ್ದಿಗೆ ಖಾರವಾಗಿ ಪ್ರತಿಕ್ರಿಯಿಸಿದ ಭುವನೇಶ್ವರ್

ಕೊಹ್ಲಿ ಅಭ್ಯಾಸದ ವಿಡಿಯೋ ನೋಡಿದ್ದೇನೆ

ಕೊಹ್ಲಿ ಅಭ್ಯಾಸದ ವಿಡಿಯೋ ನೋಡಿದ್ದೇನೆ

"ನಾನು ಆತ ಅಭ್ಯಾಸ ನಡೆಸುವುದನ್ನು ನೋಡಿಲ್ಲ. ಆದರೆ ಟ್ವಿಟ್ಟರ್ ಹಾಗೂ ಇತರ ಕಡೆಗಳಲ್ಲಿ ಆತ ಅಭ್ಯಾಸ ನಡೆಸುವ ಕೆಲ ವಿಡಿಯೋಗಳನ್ನು ಗಮನಿಸಿದ್ದೇನೆ. ಈಗಿನ ಯುಗದಲ್ಲಿ ಆಧುನಿಕ ಕ್ರಿಕೆಟ್ ಎಂದರೆ ಏನು ಎಂದು ಕೇಳಿದರೆ ಅದು ತರಬೇತಿಯಲ್ಲಿದೆ ಎಂದು ನಾನು ಹೇಳುತ್ತೇನೆ. ವಿರಾಟ್ ಕೊಹ್ಲಿ ರೀತಿ ಫಿಟ್ ಮತ್ತು ವೇಗವನ್ನು ಹೊಂದಿದ್ದರೆ ಅದು ಅವರ ಅದ್ಭುತ ಪ್ರದರ್ಶನಕ್ಕೆ ಕಾರಣವಾಗುತ್ತದೆ" ಎಂದು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಯೂಸುಫ್ ಹೇಳಿದ್ದಾರೆ.

ಈ ಯುಗದ ನಂಬರ್ 1 ಬ್ಯಾಟ್ಸ್‌ಮನ್

ಈ ಯುಗದ ನಂಬರ್ 1 ಬ್ಯಾಟ್ಸ್‌ಮನ್

"ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟಾಗಿ ಕೊಹ್ಲಿ 70 ಶತಕಗಳನ್ನು ಹೊಂದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 12000ಕ್ಕೂ ಅಧಿಕ ರನ್ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ 10000 ರನ್‌ಗಳ ಸನಿಹದಲ್ಲಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿಯೂ ಆತ ಶ್ರೇಷ್ಠ ಅಂಕಿಅಂಶಗಳನ್ನು ಹೊಂದಿದ್ದಾರೆ. ಮೂರು ಮಾದರಿಯಲ್ಲೂ ಉತ್ಕೃಷ್ಠ ಮಟ್ಟದ ಆಟವನ್ನು ಪ್ರದರ್ಶಿಸಿದ್ದಾರೆ. ಈಗಿನ ಯುಗದಲ್ಲಿ ಆತನೇ ನಂಬರ್ 1" ಎಂದು ಯೂಸುಫ್ ಬಣ್ಣಿಸಿದ್ದಾರೆ.

ಹಿಂದಿನ ಯುಗದೊಂದಿಗೆ ತುಲನೆ ಸೂಕ್ತವಲ್ಲ

ಹಿಂದಿನ ಯುಗದೊಂದಿಗೆ ತುಲನೆ ಸೂಕ್ತವಲ್ಲ

ಇನ್ನು ಇದೇ ಸಂದರ್ಭದಲ್ಲಿ ಹಿಂದಿನ ಆಟಗಾರೊಂದಿಗೆ ಹೋಲಿಕೆ ಮಾಡುವ ವಿಚಾರಕ್ಕೆ ಯೂಸುಫ್ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆ. "ನಾನು ಈಗಾಗಲೇ ಹೇಳಿದಂತೆ ಹಿಂದಿನ ಯುಗದ ಆಟಗಾರರೊಂದಿಗೆ ತುಲನೆಯನ್ನು ಮಾಡುವುದು ಸೂಕ್ತವಲ್ಲ. ಆದನ್ನು ಹೊರತು ಪಡಿಸಿ ಆತನ ಪ್ರದರ್ಶನ ಅತ್ಯದ್ಭುತ" ಎಂದು ಮೊಹಮ್ಮದ್ ಯೂಸುಫ್ ಹೇಳಿದ್ದಾರೆ.

ಪಾಕ್ ಪರ ಯೂಸುಫ್ ಸಾಧನೆ

ಪಾಕ್ ಪರ ಯೂಸುಫ್ ಸಾಧನೆ

ಪಾಕಿಸ್ತಾನ ಕ್ರಿಕೆಟ್ ತಂಡದ ಪರವಾಗಿ ಮೊಹಮ್ಮದ್ ಯೂಸುಪ್ 288 ಏಕದಿನ ಪಂದ್ಯಗಳಲ್ಲಿ ಆಡಿದ್ದು 9720 ರನ್‌ಗಳಿಸಿದ್ದಾರೆ. ಇನ್ನು ಟೆಸ್ಟ್ ಮಾದರಿಯಲ್ಲಿ 90 ಟೆಸ್ಟ್ ಪಂದ್ಯಗಳಲ್ಲಿ ಪಾಕ್ ತಮಡದ ಪರವಾಗಿ ಕಣಕ್ಕಿಳಿದಿದ್ದು 7530 ರನ್‌ಗಳಿಸಿದ್ದಾರೆ.

Story first published: Sunday, May 16, 2021, 13:44 [IST]
Other articles published on May 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X