For Quick Alerts
ALLOW NOTIFICATIONS  
For Daily Alerts
 

ಪಿಎಸ್‌ಎಲ್‌ನಲ್ಲಿ ಆಡಲು ವಿರಾಟ್ ಕೊಹ್ಲಿಗೆ ಆಹ್ವಾನ ನೀಡಿದ ಪಾಕ್ ಮಾಜಿ ದಿಗ್ಗಜ

ಭಾರತ ಕ್ರಿಕೆಟ್ ತಂಡ ಹಾಗೂ ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇತ್ತೀಚೆಗೆ ನೆರೆಯ ಪಾಕಿಸ್ತಾನಕ್ಕೆ ಭೇಟಿ ನೀಡುವ ಬಯಕೆಯನ್ನು ವ್ಯಕ್ತಪಡಿಸುವ ಮೂಲಕ ಸುದ್ದಿಯಾಗಿದ್ದರು. ಇದು ಸಾಮಾಜಿಕ ಮಾಧ್ಯಮ ಹಾಗೂ ಕ್ರಿಕೆಟ್ ವಲಯದಲ್ಲಿ ಗಮನಾರ್ಹ ಸೆಳೆತ ಗಳಿಸಿತ್ತು.

ಕ್ರಿಕೆಟ್‌ನಲ್ಲಿ ಗಡಿಯಾಚೆಗಿನ ಒಡನಾಟವನ್ನು ತೋರಿಸುವ ವಿರಾಟ್ ಕೊಹ್ಲಿಯ ಮಾತನ್ನು ಪಾಕಿಸ್ತಾನದ ಅವರ ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

ಸೂಪರ್‌ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೇಳಿಕೆಗೆ ಇದೀಗ ಪಾಕಿಸ್ತಾನದ ಮಾಜಿ ದಿಗ್ಗಜ ಬ್ಯಾಟರ್ ಶಾಹಿದ್ ಅಫ್ರಿದಿ ಪ್ರತಿಕ್ರಿಯಿಸಿದ್ದು, ಕೊಹ್ಲಿ ತಮ್ಮ ದೇಶದ ರಾಯಭಾರಿಯಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ.

Pakistan Former Cricketer Shahid Afridi Invites Virat Kohli to Play in PSL

ಸಮಕಾಲೀನ ಕ್ರಿಕೆಟ್ ಲೆಜೆಂಡ್ ವಿರಾಟ್ ಕೊಹ್ಲಿಯಿಂದ ಇಂತಹ ಹೇಳಿಕೆಯನ್ನು ನಾನು ನಿರೀಕ್ಷಿಸಿದ್ದೆ ಎಂದು ಹೇಳುವ ಮೂಲಕ ಶಾಹಿದ್ ಅಫ್ರಿದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಹ್ಲಿಗೆ ಧನ್ಯವಾದ ಅರ್ಪಿಸಿದ ಪಾಕ್ ಮಾಜಿ ಆಲ್‌ರೌಂಡರ್, ಪಾಕಿಸ್ತಾನಕ್ಕೆ ಬಂದು ಪಿಎಸ್‌ಎಲ್‌ನಲ್ಲಿ ಅಥವಾ ಭಾರತ ತಂಡದೊಂದಿಗೆ ಬಂದು ಆಡುವಂತೆ ಆಹ್ವಾನವನ್ನು ನೀಡಿದರು. ಕೊಹ್ಲಿ ತಮ್ಮ ಭಾರತ ತಂಡದೊಂದಿಗೆ ಭೇಟಿ ನೀಡಿದರೆ ಅದು ಉತ್ತಮವಾಗಿರುತ್ತದೆ ಎಂದು ಹೇಳಿದರು.

""ವಿರಾಟ್ ಕೊಹ್ಲಿ ಹೇಳಿಕೆಯಿಂದ ಖುಷಿಯಾಗಿದೆ. ಅವರಂತಹ ಕ್ರಿಕೆಟಿಗರು ತಮ್ಮ ದೇಶದ ರಾಯಭಾರಿಗಳು ಎಂದು ತೋರಿಸಿದೆ. ನಾನು ಕೊಹ್ಲಿಯಿಂದ ಅದೇ ರೀತಿಯ ಹೇಳಿಕೆಯನ್ನು ನಿರೀಕ್ಷಿಸಿದ್ದೆ. ತುಂಬಾ ಧನ್ಯವಾದಗಳು ವಿರಾಟ್. ನೀವು ಪಾಕಿಸ್ತಾನಕ್ಕೆ ಬಂದು ಪಿಎಸ್‌ಎಲ್‌ನಲ್ಲಿ ಅಥವಾ ಭಾರತ ತಂಡದೊಂದಿಗೆ ಆಡಲು ನಾವು ಕಾಯುತ್ತಿದ್ದೇವೆ. ನೀವು ಭಾರತ ತಂಡದೊಂದಿಗೆ ಬಂದರೆ ಅದು ಇನ್ನೂ ಒಳ್ಳೆಯದು,'' ಎಂದು ಶಾಹಿದ್ ಅಫ್ರಿದಿ ಹೇಳಿದ್ದನ್ನು ಒಡಿಶಾ ಟಿವಿ ವರದಿ ಮಾಡಿದೆ.

ಗಡಿ ಬಿಕ್ಕಟ್ಟು, ರಾಜತಾಂತ್ರಿಕ ಸಮಸ್ಯೆಗಳು ಮತ್ತು ಭಯೋತ್ಪಾದಕ ಘಟನೆಗಳಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧವು ದಶಕದಿಂದ ಹದಗೆಟ್ಟಿದೆ. ಪರಿಣಾಮವಾಗಿ, ಎರಡು ತಂಡಗಳು ಐಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತವೆ.

ಅಮಾನತುಗೊಂಡಿರುವ ದ್ವಿಪಕ್ಷೀಯ ಸರಣಿಗಳನ್ನು ಪುನರಾರಂಭಿಸುವ ಗುರಿಯೊಂದಿಗೆ ತಮ್ಮ ಕ್ರಿಕೆಟ್ ತಂಡಕ್ಕೆ ಪಾಕಿಸ್ತಾನದಲ್ಲಿ ಆಡಲು ಭಾರತ ಸರ್ಕಾರ ಅನುಮತಿ ನೀಡಬೇಕೆಂದು ಶಾಹಿದ್ ಆಫ್ರಿದಿ ಬಹಳ ಹಿಂದೆಯೇ ಹೇಳಿದ್ದರು.

Pakistan Former Cricketer Shahid Afridi Invites Virat Kohli to Play in PSL

ಇದಕ್ಕೂ ಮೊದಲು, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಪಾಕಿಸ್ತಾನದ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲು ಆಸಕ್ತಿಯನ್ನು ವ್ಯಕ್ತಪಡಿಸಿದ್ದರು. ಉಭಯ ರಾಷ್ಟ್ರಗಳ ನಡುವೆ ಹೆಚ್ಚಿನ ಕ್ರಿಕೆಟ್ ಮುಖಾಮುಖಿಗಳ ಹಂಚಿಕೆಯ ಉತ್ಸುಕತೆಯನ್ನು ತೋರಿಸಿದರು.

ಮುಂಬರುವ 2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿಗಳು ಮುಖಾಮುಖಿಯಾಗಲು ಸಜ್ಜಾಗಿವೆ. ಈ ಪಂದ್ಯವನ್ನು ಉಭಯ ದೇಶಗಳ ಅಭಿಮಾನಿಗಳು ಸೇರಿದಂತೆ ವಿಶ್ವದಾದ್ಯಂತದ ಕ್ರಿಕೆಟ್ ಪ್ರೇಮಿಗಳು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ.

ಸಿಎಸ್‌ಕೆ ಸೋಲಿಸಿ ಪ್ಲೇಆಫ್‌ಗೆ ಅರ್ಹತೆ ಪಡೆದ ಬಳಿಕ ವಿರಾಟ್ ಕೊಹ್ಲಿ ಕಣ್ಣೀರು

ಸದ್ಯ ನಡೆಯುತ್ತಿರುವ ಐಪಿಎಲ್ 2024ರಲ್ಲಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 27 ರನ್‌ಗಳ ಗೆಲುವು ಸಾಧಿಸಿತು.

ಈ ಮೂಲಕ ಆರ್‌ಸಿಬಿ ಐಪಿಎಲ್ 2024ರ ಪ್ಲೇಆಫ್‌ನಲ್ಲಿ ಯಶಸ್ವಿಯಾಗಿ ಸ್ಥಾನವನ್ನು ಪಡೆದುಕೊಂಡಿತು. ಸಿಎಸ್‌ಕೆ ವಿರುದ್ಧ ಆರ್‌ಸಿಬಿ 201 ರನ್‌ಗಳ ಗುರಿಯನ್ನು ಉಳಿಸಿಕೊಳ್ಳಬೇಕಾಗಿತ್ತು ಮತ್ತು ರೋಚಕ ಹಣಾಹಣಿಯಲ್ಲಿ ಸಿಎಸ್‌ಕೆ ತಂಡವನ್ನು 191 ನಿಯಂತ್ರಿಸಿ 27 ರನ್‌ಗಳಿಂದ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಕೇವಲ 15 ದಿನಗಳಲ್ಲಿ 10ನೇ ಸ್ಥಾನದಿಂದ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಆರ್‌ಸಿಬಿ ಅದ್ಭುತ ಪುನರಾಗಮನ ಮಾಡಿ, ಐತಿಹಾಸಿಕವಾಗಿ ಸತತವಾಗಿ 6 ಗೆಲುವು ಪಡೆಯಿತು. ಪಂದ್ಯದ ನಂತರ ಮೈದಾನದಲ್ಲೇ ಕಣ್ಣೀರಾದ ವಿರಾಟ್ ಕೊಹ್ಲಿಗೆ ಈ ಗೆಲುವು ಭಾವನಾತ್ಮಕ ಕ್ಷಣವಾದಂತೆ ಕಂಡುಬಂತು.

Story first published: Monday, May 20, 2024, 7:02 [IST]
Other articles published on May 20, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+