Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಲ್‌ಪಿಎಲ್: ಪಾಕ್ ವೇಗಿ ಸೊಹೈಲ್ ತನ್ವೀರ್‌ಗೆ ಕೊರೊನಾ ಪಾಸಿಟಿವ್

Pakistan pacer Sohail Tanvir test positive for Covid-19 ahead of LPL

ಕೊಲಂಬೋ: ನವೆಂಬರ್ 26ರಿಂದ ಆರಂಭಗೊಳ್ಳಲಿರುವ ಲಂಕಾ ಪ್ರೀಮಿಯರ್ ಲೀಗ್‌ (ಎಲ್‌ಪಿಎಲ್‌) ಟಿ20 ಟೂರ್ನಿಗೂ ಮುನ್ನ ಪಾಕಿಸ್ತಾನದ ವೇಗಿ ಸೊಹೈಲ್ ತನ್ವೀರ್ ಮತ್ತು ಕೆನಡಾದ ಬ್ಯಾಟ್ಸ್‌ಮನ್ ರವೀಂದ್ರಪಾಲ್‌ ಸಿಂಗ್‌ಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ.

ಕ್ಯಾಂಟಿ ಟಸ್ಕರ್ಸ್ ತಂಡದಲ್ಲಿರುವ ಸೊಹೈಲ್ ತನ್ವೀರ್ ಮತ್ತು ಕೊಲಂಬೋ ಕಿಂಗ್ಸ್ ತಂಡದಲ್ಲಿರುವ ಸಿಂಗ್‌ ಕೊರೊನಾ ಸೋಂಕಿಗೀಡಾಗಿರುವುದಾಗಿ ಇಎಸ್‌ಪಿಎನ್ ಕ್ರಿಕ್‌ ಇನ್ಫೋ ವರದಿ ಹೇಳಿದೆ. ಟಿ20 ಸಲುವಾಗಿ ಶ್ರೀಲಂಕಾಕ್ಕೆ ಬಂದ ಮೇಲೆ ಇಬ್ಬರಿಗೂ ಕೊರೊನಾ ತಗುಲಿದೆ.

ಲಂಕಾ ಪ್ರೀಮಿಯರ್ ಲೀಗ್ ನವೆಂಬರ್ 26ರಿಂದ ಡಿಸೆಂಬರ್ 16ರ ವರೆಗೆ ನಡೆಯಲಿದೆ. ಹಂಬಂಟೋಟಾದಲ್ಲಿನ ಮಹಿಂದ ರಾಜಪಕ್ಸ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೂರ್ನಿಯ ಪಂದ್ಯಗಳು ನಡೆಯಲಿದೆ. ಒಟ್ಟು 5 ತಂಡಗಳು ಟೂರ್ನಿಯಲ್ಲಿ ಸ್ಪರ್ಧಿಸಲಿವೆ.

ಕೊಲಂಬೋ, ಕ್ಯಾಂಡಿ, ಗ್ಯಾಲೆ, ದಂಬುಲ್ಲ, ಜಾಫ್ನಾ ಹೆಸರಿನ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದ್ದು, ಒಟ್ಟು 23 ಪಂದ್ಯಗಳು 15 ದಿನಗಳ ಕಾಲ ನಡೆಯಲಿವೆ. ಆರಂಭಿಕ ಪಂದ್ಯದಲ್ಲಿ ಕೊಲಂಬೋ ತಂಡ ಕ್ಯಾಂಡಿಯ ಸವಾಲು ಸ್ವೀಕರಿಸಲಿದೆ. ಶಾಹಿದ್ ಅಫ್ರಿದಿ, ಶೋಯೆಬ್ ಮಲಿಕ್, ಇರ್ಫಾನ್ ಪಠಾಣ್, ಏಂಜಲೋ ಮ್ಯಾಥ್ಯೂಸ್ ಇತ್ಯಾದಿ ಸ್ಟಾರ್‌ಗಳು ಟೂರ್ನಿಯಲ್ಲಿ ಆಡಲಿದ್ದಾರೆ.

Story first published: Saturday, November 21, 2020, 9:47 [IST]
Other articles published on Nov 21, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+