For Quick Alerts
ALLOW NOTIFICATIONS  
For Daily Alerts
 

ಟಿ20Iನಲ್ಲಿ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆ ಮುರಿದ ಬಾಬರ್ ಅಜಂ

Pakistan skipper Babar Azam become fastest man to reach 2000 T20I runs

ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ 14ನೇ ಆವೃತ್ತಿಯಲ್ಲಿ ಅಭಿಮಾನಿಗಳು ತಲ್ಲೀನರಾಗಿದ್ದರೆ ಅತ್ತ ಪಾಕಿಸ್ತಾನ ಜಿಂಬಾಬ್ವೆ ವಿರುದ್ಧ ಟಿ20 ಸರಣಿಯಲ್ಲಿ ನಿರ್ಣಾಯಕ ಪಂದ್ಯದಲ್ಲಿ ಸೆಣಿಸುತ್ತಿದೆ. 3 ಪಂದ್ಯಗಳ ಟಿ20 ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ವಿಶ್ವದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 2000 ರನ್‌ಗಳಿಸಿದ ದಾಖಲೆಯನ್ನು ಬಾಬರ್ ಅಜಂ ತನ್ನದಾಗಿಸಿಕೊಂಡಿದ್ದಾರೆ. ಈ ಮೈಲಿಗಲ್ಲನ್ನು ದಾಟಲು ಬಾಬರ್ ಅಜಂ 52 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗಿಂತ 4 ಇನ್ನಿಂಗ್ಸ್ ಕಡಿಮೆ ಬಳಸಿ ಈ ಮೈಲಿಗಲ್ಲನ್ನು ದಾಟಿದ್ದಾರೆ ಬಾಬರ್ ಅಜಂ.

ವಿರಾಟ್ ಕೊಹ್ಲಿ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 84 ಇನ್ನಿಂಗ್ಸ್‌ಗಳಲ್ಲಿ 3159 ರನ್‌ಗಳಿಸಿದ್ದಾರೆ. ಟಿ20Iನಲ್ಲಿ 2000 ರನ್‌ಗೂ ಅಧಿಕ ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಈಗ ಬಾಬರ್ ಅಜಂ 11ನೇ ಆಟಗಾರನಾಗಿ ಸೇರಿಕೊಂಡಿದ್ದಾರೆ. ಈ ಸಾಧನೆ ಮಾಡಿದ ಪಾಕಿಸ್ತಾನದ ಮೂರನೇ ಆಟಗಾರನಾಗಿದ್ದಾರೆ.

ಟಿ20ಐನಲ್ಲಿ ಅತಿ ವೇಗವಾಗಿ 2000 ರನ್‌ಗಳಿಸಿದ ಆಟಗಾರರ ಪಟ್ಟಿ
ಬಾಬರ್ ಅಜಮ್ - 52 ಇನ್ನಿಂಗ್ಸ್
ವಿರಾಟ್ ಕೊಹ್ಲಿ - 56 ಇನ್ನಿಂಗ್ಸ್
ಆರೋನ್ ಫಿಂಚ್ - 62 ಇನ್ನಿಂಗ್ಸ್
ಬ್ರೆಂಡನ್ ಮೆಕಲಮ್ - 66 ಇನ್ನಿಂಗ್ಸ್
ಮಾರ್ಟಿನ್ ಗುಪ್ಟಿಲ್ - 68 ಇನ್ನಿಂಗ್ಸ್

ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಬಾಬರ್ ಅಜಂ 17ನೇ ಅಂತಾರಾಷ್ಟ್ರೀಯ ಟಿ20 ಅರ್ಧ ಶತಕವನ್ನು ದಾಖಲಿಸಿದರು. ಬಾಬರ್ ಅಜಂ ಹಾಗೂ ರಿಜ್ವಾನ್ ಅರ್ಧ ಶತಕದ ನೆರವಿನಿಂದ ಪಾಕಿಸ್ತಾನ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ 165 ರನ್‌ಗಳಿಸಿದೆ.

Story first published: Monday, April 26, 2021, 9:40 [IST]
Other articles published on Apr 26, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+