Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗಂಗೂಲಿ ಐಸಿಸಿ ಅಧ್ಯಕ್ಷನಾಗಲಿ ಎಂದ ಪಾಕಿಸ್ತಾನದ ಮಾಜಿ ಸ್ಪಿನ್ನರ್

Pakistan Spinner Danish Kaneria Pins Hope On Sourav Ganguly Becoming Icc President

ಗ್ರೇಮ್ ಸ್ಮಿತ್ ಬಳಿಕ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಕೂಡ ಸೌರವ್ ಗಂಗೂಲಿ ಐಸಿಸಿ ಅಧ್ಯಕ್ಷರಾಗಲಿ ಎಂದು ಬಯಸಿ ಹೇಳಿಕೆಯನ್ನು ನೀಡಿದ್ದಾರೆ. ಆಡಳಿತಾತ್ಮಕ ದೃಷ್ಟಿಯಿಂದ ಸೌರವ್ ಗಂಗೂಲಿ ಐಸಿಸಿ ಅಧ್ಯಕ್ಷರಾದರೆ ಕ್ರಿಕೆಟ್‌ಗೆ ಸಾಕಷ್ಟು ಒಳಿತಾಗುತ್ತದೆ ಎಂದು ದಾನಿಶ್ ಕನೇರಿಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೌರವ್ ಗಂಗೂಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಯನ್ನು ಮುನ್ನಡೆಸಲು ಯೋಗ್ಯರಾಗಿದ್ದು, ಆ ಹುದ್ದೆಯನ್ನು ಅಲಂಕರಿಸಲು ಆಯಾ ಕ್ರಿಕೆಟ್ ಮಂಡಳಿಗಳು ಬೆಂಬಲಿಸದಿರಲು ಯಾವುದೇ ಕಾರಣವಿಲ್ಲ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಭಾನುವಾರ ಹೇಳಿದ್ದಾರೆ.

ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಿದ ಆರೋಪದಿಂದಾಗಿ ಜೀವನ ಪರ್ಯಂತ ನಿಷೇಧಕ್ಕೆ ಕನೆರೊಯಾ ಗುರಿಯಾಗಿದ್ದಾರೆ. ಹೀಗಾಗಿ ಸೌರವ್ ಗಂಗೂಲಿ ಐಸಿಸಿಯ ಅಧ್ಯಕ್ಷರಾದರೆ ನಾನು ಇದರ ವಿರುದ್ಧ ಐಸಿಸಿಗೆ ಮೇಲ್ಮನವಿಯನ್ನು ಸಲ್ಲಿಸುತ್ತೇನೆ ಎಂದೂ ಅವರು ಹೇಳಿದ್ದಾರೆ. ಈ ಹಿಂದೆ ಕನೆರಿಯಾ ಐಸಿಸಿಗೆ ಮೇಲ್ಮನವಿಯನ್ನು ಸಲ್ಲಿಸಿದ್ದಾಗ ಅದನ್ನು ಐಸಿಸಿ ತಿರಸ್ಕರಿಸಿತ್ತು.

ಗಂಗೂಲಿ ಅವರು ಐಸಿಸಿಯನ್ನು ಮುನ್ನಡೆಸಲು ಬೇಕಾದ ಅರ್ಹತೆಯನ್ನು ಹೊಂದಿದ್ದಾರೆ. ಈಗ ಅವರು ಬಿಸಿಸಿಐನ ಅಧ್ಯಕ್ಷರಾಗಿದ್ದಾರೆ. ಐಸಿಸಿಯ ಮುಖ್ಯಸ್ಥರಾದರೆ ಅವರು ಕ್ರಿಕೆಟನ್ನು ಮತ್ತಷ್ಟು ಎತ್ತರಕ್ಕೆ ಏರಿಸುತ್ತಾರೆ ಎಂಬ ನಂಬಿಕೆ ನನಗೆ ಇದೆ ಎಂದು ದಾನಿಶ್ ಕನೆರಿಯಾ ಹೇಳಿದ್ದಾರೆ.

ಮುಂದಿವರಿದು ಮಾತನಾಡಿದ ಕನೆರಿಯಾ, ಐಸಿಸಿಯ ಅಧ್ಯಕ್ಷನಾಗಲು ಸೌರವ್ ಗಂಗೂಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಬೆಂಬಲವೂ ಬೇಕಿಲ್ಲ. ಐಸಿಸಿ ಅಧ್ಯಕ್ಷನಾಗಲು ಬಲವಾದ ಕಾರಣವನ್ನು ಗಂಗೂಲಿ ಹೊಂದಿದ್ದಾರೆ. ಹೀಗಾಗಿ ಪಿಸಿಬಿಯ ಬೆಂಗಲ ಗಂಗೂಲಿಗೆ ಬೇಕು ಎಂದು ತನಗೆ ಅನಿಸುತ್ತಿಲ್ಲ ಎಂದು ದಾನಿಶ್ ಕನೆರಿಯಾ ಹೇಳಿಕೆಯನ್ನು ನೀಡಿದ್ದಾರೆ

Story first published: Monday, June 8, 2020, 13:52 [IST]
Other articles published on Jun 8, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+