For Quick Alerts
ALLOW NOTIFICATIONS  
For Daily Alerts
 

ಅಪಾಯದಲ್ಲಿದೆ ವಿರಾಟ್ ಕೊಹ್ಲಿ ದಾಖಲೆ

ಭಾರತ ಹಾಗೂ ಶ್ರೀಲಂಕಾದಲ್ಲಿ ಟಿ20 ವಿಶ್ವಕಪ್ ನಡೆಯುತ್ತಿದೆ. ಈ ಟೂರ್ನಿಯ ಲೀಗ್‌ ಹಂತದ ಪಂದ್ಯಗಳು ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಇನ್ನೇನಿದ್ದರೂ ಮಾಡು ಇಲ್ಲವೇ ಮಡಿ ಪಂದ್ಯಗಳು ಆರಂಭವಾಗಲಿವೆ. ಈ ಟೂರ್ನಿಯಲ್ಲಿ ಬ್ಯಾಟರ್‌ಗಳು ಹಾಗೂ ಬೌಲರ್‌ಗಳು ಅಬ್ಬರದ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಿಂಚುತ್ತಿದ್ದಾರೆ. ಇನ್ನು ಹಲವು ವಿಶ್ವ ದಾಖಲೆಗಳನ್ನು ನಿರ್ಮಿಸಿ ಮಿಂಚಿದ್ದಾರೆ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಒಂದು ದಾಖಲೆಗೆ ಈಗ ಅಪಾಯ ಕಾದಿದೆ.

ಟಿ20 ವಿಶ್ವಕಪ್‌ನಲ್ಲಿ ಬ್ಯಾಟರ್‌ಗಳ ಆರ್ಭಟ ಜೋರಾಗಿದೆ. ಪಾಕಿಸ್ತಾನದ ಭರವಸೆಯ ಆರಂಭಿಕ ಬ್ಯಾಟರ್‌ ಸಹಿಬ್‌ಜಾದ್ ಫರ್ಹಾನ್ ಅವರು ನಮೀಬಿಯಾ ವಿರುದ್ಧ ಅಬ್ಬರಿಸಿದ್ದರು. ಅಲ್ಲದೆ ಈ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದರು. ಇವರ ಆಟವನ್ನು ಕಂಡು ಅಭಿಮಾನಿಗಳು ಫರ್ಹಾನ್‌ ಕೊಹ್ಲಿ ಅವರ ದಾಖಲೆ ಅಳಿಸಬಹುದು ಎಂಬ ಲೆಕ್ಕಾಚಾರವನ್ನು ಆರಂಭಿಸಿದ್ದಾರೆ.

Pakistans Sahibzada Farhan

ಫರ್ಹಾನ್‌ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಪಾಕ್‌ ಪರ ಶತಕ ಬಾರಿಸಿ ಅಬ್ಬರಿಸಿದರು. ಇವರು 58 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 100 ರನ್‌ ಬಾರಿಸಿದ್ದಾರೆ. ಈ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿದ ಬ್ಯಾಟರ್ ಆಗಿದ್ದಾರೆ.

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಸಾಹಿಬ್‌ಜಾದ ಫರ್ಹಾನ್‌ ಆಡಿದ 4 ಇನಿಂಗ್ಸ್‌ಗಳಲ್ಲಿ 73ರ ಸರಾಸರಿಯಲ್ಲಿ 220 ರನ್‌ ಸಿಡಿಸಿದ್ದಾರೆ. ಇದೇ ಫಾರ್ಮ್‌ನ್ನು ಇವರು ಮುಂದುವರೆಸಿದರೆ, ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಅಳಿಸಿ ಹಾಕಬಹುದು.

ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಟಾಪ್‌ 5 ಬ್ಯಾಟರ್ಸ್‌

ಸಹಬ್‌ಜಾದ ಫರ್ಹಾನ್, ಪಾಕಿಸ್ತಾನ, 4 ಪಂದ್ಯ, 220 ರನ್
ಐಡನ್ ಮಾರ್ಕ್ರಾಮ್‌, ದಕ್ಷಿಣ ಆಫ್ರಿಕಾ, 4 ಪಂದ್ಯ, 178 ರನ್‌
ಇಶಾನ್‌ ಕಿಶನ್‌, ಭಾರತ, 4 ಪಂದ್ಯ, 178 ರನ್
ಟಿಮ್ ಸಿಫರ್ಟ್‌, ನ್ಯೂಜಿಲೆಂಡ್‌, 4 ಪಂದ್ಯ, 173 ರನ್
ದೀಪೆಂದ್ರ ಸಿಂಗ್‌, ನೇಪಾಳ, 4 ಪಂದ್ಯ, 169 ರನ್

ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ಗಳನ್ನು ಕಲೆ ಹಾಕಿದ ಕೀರ್ತಿ ಟೀಮ್ ಇಂಡಿಯಾ ಸೂಪರ್ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಅವರದ್ದಾಗಿದೆ. ಇವರು 2014ರಲ್ಲಿ 319 ರನ್‌ಗಳನ್ನು ಬಾರಿಸಿದ್ದಾರೆ. ಈ ಮೂಲಕ ಚುಟುಕು ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಹಿರಿಮೆ ಹೊಂದಿದ್ದಾರೆ. ಫರ್ಹಾನ್ ಅವರಿಗೆ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಅಳಿಸಲು ಇನ್ನು 100 ರನ್ ಅವಶ್ಯಕತೆ ಇದೆ.

ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಸ್‌

ವಿರಾಟ್ ಕೊಹ್ಲಿ - 319 ರನ್‌ಗಳು (2014)
ತಿಲಕರತ್ನೆ ದಿಲ್ಶಾನ್ - 317 ರನ್‌ಗಳು (2009)
ಬಾಬರ್ ಅಜಮ್ - 303 ರನ್‌ಗಳು (2021)
ಮಹೇಲ ಜಯವರ್ಧನೆ - 302 ರನ್‌ಗಳು (2010)
ವಿರಾಟ್ ಕೊಹ್ಲಿ - 296 ರನ್‌ಗಳು (2022)

1
2-2026

Story first published: Thursday, February 19, 2026, 14:30 [IST]
Other articles published on Feb 19, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+