For Quick Alerts
ALLOW NOTIFICATIONS  
For Daily Alerts
 

AUS vs SA: 2023ರ ವಿಶ್ವಕಪ್ ಫೈನಲ್ ತಲುಪುವ 2ನೇ ತಂಡದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಜ್ಯೋತಿಷಿ

2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಎರಡನೇ ಸೆಮಿಫೈನಲ್ ಪಂದ್ಯವು ಗುರುವಾರ, ನವೆಂಬರ್ 16ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳ ಮಧ್ಯೆ ನಡೆಯುತ್ತಿದೆ.

ಭಾನುವಾರ, ನವೆಂಬರ್ 19ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಭಾರತ ತಂಡವನ್ನು ಯಾರು ಎದುರಿಸಲಿದ್ದಾರೆ ಎಂಬ ಕಾರಣದಿಂದ, ಈ ಹಣಾಹಣಿಯಲ್ಲಿ ಭಾರತೀಯ ಅಭಿಮಾನಿಗಳು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.

Pandit Jagannath Gurujis Predicts Indias Opponent in the ICC World Cup 2023 Final

ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ಎರಡನೇ ಸಮಿಫೈನಲ್ ಪಂದ್ಯವನ್ನು ಗೆಲ್ಲುತ್ತದೆಯೇ ಅಥವಾ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ಮೇಲುಗೈ ಸಾಧಿಸಲಿದೆಯೇ ಎಂಬುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

2023ರ ಏಕದಿನ ವಿಶ್ವಕಪ್‌ನ ಲೀಗ್ ಹಂತದ 10ನೇ ಪಂದ್ಯದಲ್ಲಿ ಈ ಎರಡು ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾದಾಗ, ಲಕ್ನೋದಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ 134 ರನ್‌ಗಳ ಗೆಲುವು ಸಾಧಿಸಿತ್ತು.

1
1-2023

ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ ಅವರು ಕ್ರಿಕೆಟ್ ಮೈದಾನದಲ್ಲಿನ ಹೈ-ವೋಲ್ಟೇಜ್ ಪಂದ್ಯದ ಕುರಿತು ಭವಿಷ್ಯ ನುಡಿದಿದ್ದಾರೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಎರಡೂ ತಂಡಗಳು ಫೈನಲ್‌ಗೆ ಪ್ರವೇಶ ಪಡೆಯಲು ತಮ್ಮ ಎಲ್ಲವನ್ನು ಧಾರೆ ಎರೆಯಲಿವೆ.

ಪಂಡಿತ್ ಜಗನ್ನಾಥ್ ಗುರೂಜಿ ಸೂಚಿಸಿದಂತೆ, ಪಂದ್ಯವು ರೋಚಕವಾಗಿರುತ್ತದೆ ಮತ್ತು ಉಭಯ ತಂಡಗಳು ವೈಭವಕ್ಕಾಗಿ ಸ್ಪರ್ಧಿಸುವುದರಿಂದ ಉದ್ವೇಗವು ಸ್ಪಷ್ಟವಾಗಿರುತ್ತದೆ.

ದಕ್ಷಿಣ ಆಫ್ರಿಕಾ vs ಆಸ್ಟ್ರೇಲಿಯಾ: ಗೆಲುವು ಯಾರಿಗೆ? ಜ್ಯೋತಿಷಿ ಭವಿಷ್ಯವೇನು?

ಜ್ಯೋತಿಷ್ಯದ ಒಳನೋಟಗಳ ಪ್ರಕಾರ, ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅಸಾಧಾರಣ ಮತ್ತು ಅದ್ಭುತವಾದ ಜಾತಕವನ್ನು ಹೊಂದಿದ್ದಾರೆ. ಇದು ಅವರ ತಂಡವನ್ನು ವಿಜಯದತ್ತ ಕೊಂಡೊಯ್ಯುವ ಪ್ರಬಲ ಸಾಮರ್ಥ್ಯವನ್ನು ಸೂಚಿಸುತ್ತದೆ.

Pandit Jagannath Gurujis Predicts Indias Opponent in the ICC World Cup 2023 Final

ಆದಾಗ್ಯೂ, ದಕ್ಷಿಣ ಆಫ್ರಿಕಾ ತಂಡದ ನಾಯಕತ್ವದ ಪರಿಸ್ಥಿತಿಯು ಭವಿಷ್ಯವನ್ನು ಸಂಕೀರ್ಣಗೊಳಿಸುತ್ತದೆ ಎಂದು ಪಂಡಿತ್ ಜಗನ್ನಾಥ್ ಗುರೂಜಿ ಹೇಳಿದ್ದಾರೆ.

"ಟೆಂಬಾ ಬವುಮಾ ನಾಯಕನಾಗಿದ್ದರೆ, ಅವರ ಜಾತಕವು ಪ್ಯಾಟ್ ಕಮ್ಮಿನ್ಸ್‌ಗಿಂತ ಪ್ರಕಾಶಮಾನವಾಗಿ ಹೊಳೆಯುತ್ತದೆ. ಇದು ಹರಿಣ ಪಡೆಗೆ ಸಂಭಾವ್ಯ ಗೆಲುವು ಸೂಚಿಸುತ್ತದೆ. ಏಡನ್ ಮಾರ್ಕ್ರಾಮ್ ಮುನ್ನಡೆಸಿದರೆ, ಆಸ್ಟ್ರೇಲಿಯಾದ ಪರವಾಗಿ ಜಾತಕಗಳು ಬದಲಾಗಲಿವೆ. ಕಮ್ಮಿನ್ಸ್ ಅವರ ಜಾತಕವು ಹೆಚ್ಚು ಅನುಕೂಲಕರವಾಗಿ ಕಾಣುತ್ತದೆ. ಇದು ಸಂಭಾವ್ಯ ಆಸ್ಟ್ರೇಲಿಯಾ ತಂಡದ ಗೆಲುವಿನ ಸುಳಿವು ನೀಡುತ್ತದೆ," ಎಂದು ಪಂಡಿತ್ ಜಗನ್ನಾಥ್ ಗುರೂಜಿ ತಿಳಿಸಿದ್ದಾರೆ.

ಐಸಿಸಿ ವಿಶ್ವಕಪ್ 2023: ಇಲ್ಲಿಯವರೆಗೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಪ್ರಯಾಣ ಹೇಗಿದೆ?

2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಟೆಂಬಾ ಬವುಮಾ ಪಡೆಯು ಉತ್ತಮ ಅಭಿಯಾನವನ್ನು ಹೊಂದಿತ್ತು. ತಮ್ಮ ಒಂಬತ್ತು ಲೀಗ್ ಪಂದ್ಯಗಳಲ್ಲಿ ಏಳನ್ನು ಗೆದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಮುಗಿಸಿತು.

ಮತ್ತೊಂದೆಡೆ, ಆಸ್ಟ್ರೇಲಿಯಾ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಸೋತ ನಂತರ, ಪಂದ್ಯಾವಳಿಯಲ್ಲಿ ಕಳಪೆ ಆರಂಭವನ್ನು ಹೊಂದಿತ್ತು. ಆದಾಗ್ಯೂ, ಪ್ಯಾಟ್ ಕಮ್ಮಿನ್ಸ್ ಪಡೆ ನಂತರ ವೇಗವನ್ನು ಪಡೆದು ಉಳಿದ ಏಳು ಪಂದ್ಯಗಳ ಗೆಲುವಿನ ಸರಣಿ ಸರಮಾಲೆ ಹಾಕಿಕೊಂಡಿತು.

Story first published: Thursday, November 16, 2023, 15:36 [IST]
Other articles published on Nov 16, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+