Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅದ್ಭುತ ಕ್ಯಾಚ್‌ನಿಂದ ವಿಲಿಯಮ್ಸನ್ ವಿಕೆಟ್ ಮುರಿದ ಹಾರ್ದಿಕ್: ವೈರಲ್ ವಿಡಿಯೋ

Pandya takes a stunning catch to dismiss Williamson - Watch

ಮೌಂಟ್‌ಮೌಂಗನ್ಯುಯಿ, ಜನವರಿ 28: ಬಿಸಿಸಿಐ ಅಮಾನತು ಹಿಂಪಡೆದಿರುವುದರಿಂದ ಸೋಮವಾರ (ಜನವರಿ 28) ನ್ಯೂಜಿಲ್ಯಾಂಡ್-ಭಾರತ ನಡುವಿನ 3ನೇ ಏಕದಿನಕ್ಕಾಗಿ ಭಾರತ ತಂಡ ಸೇರಿಕೊಂಡಿರುವ ಆಲ್‌ ರೌಂಡರ್ ಹಾರ್ದಿಕ್, ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.

ಪಂದ್ಯದ Live Score ಇಲ್ಲಿದೆ. ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
44082

ಮೌಂಟ್‌ಮೌಂಗನ್ಯುಯಿಯ ಬೇ ಓವಲ್ ಸ್ಟೇಡಿಯನಲ್ಲಿ ನಡೆದ ಸೋಮವಾರ ಪಂದ್ಯದಲ್ಲಿ ವಿಜಯ್ ಶಂಕರ್ ಬದಲಿಗೆ ಭಾರತ ತಂಡದ ಪರ ಕಣಕ್ಕಿಳಿದಿದ್ದ ಹಾರ್ದಿಕ್, ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಅದ್ಭುತ ಕ್ಯಾಚ್ ಮೂಲಕ ಪೆವಿಲಿಯನ್‌ಗೆ ಕಳುಹಿಸಿದರು.

3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದ ವಿಲಿಮ್ಸನ್ ಅವರು, ಯುಜುವೇಂದ್ರ ಚಾಹಲ್ ಅವರ 16.2ನೇ ಓವರ್‌ನ ಎಸೆತಕ್ಕೆ ಬ್ಯಾಟ್ ಬೀಸಿದರು. ಚೆಂಡು ಪಾಂಡ್ಯ ನಿಂತಲ್ಲಿಗೆ ಮೇಲ್ಭಾಗದಿಂದ ಹಾದು ಹೋಗುವುದರಲ್ಲಿತ್ತು. ಆದರೆ ಅಷ್ಟೇ ವೇಗವಾಗಿ ಜಿಗಿದ ಪಾಂಡ್ಯ ಚೆಂಡನ್ನು ಕ್ಯಾಚ್ ಮಾಡಿದ್ದರು. ಹೀಗಾಗಿ ಕೇನ್ 28 ರನ್ನಿಗೆ ನಿರ್ಗಮಿಸಬೇಕಾಯ್ತು.

Story first published: Monday, January 28, 2019, 11:16 [IST]
Other articles published on Jan 28, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+