Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ Ranking: ಪಂತ್ ದಾಖಲೆ ಜಿಗಿತ, ಫಾರೋಕ್ ಸಾಧನೆ ಸರಿಸಮ

Pant jumps 21 places in ICC Test Rankings, equals Farokh Engineer’s feat

ನವದೆಹಲಿ, ಜನವರಿ 8: ಐಸಿಸಿ ಪ್ರಕಟಿತ ಟೆಸ್ಟ್ ಬ್ಯಾಟಿಂಗ್‌ ನೂತನ ರ್ಯಾಂಕಿಂಗ್‌ನಲ್ಲಿ ಭಾರತದ ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್ ದಾಖಲೆಯೆ ಜಿಗಿತ ಕಂಡಿದ್ದಾರೆ. ಪಂತ್ ಸಾಧನೆ ಭಾರತದ ಮಾಜಿ ಆಟಗಾರ ಫಾರೋಕ್ ಇಂಜಿನೀರ್ ಸಾಧನೆಗೆ ಸರಿಸಮವಾಗಿದೆ.

ಮಂಗಳವಾರ (ಜನವರಿ 8) ಐಸಿಸಿ ಪ್ರಕಟಿಸಿರುವ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಪಂತ್ ಒಟ್ಟು 21 ಸ್ಥಾನ ಮೇಲಕ್ಕೇರಿದ್ದಾರೆ. ಅಂದರೆ ಈಗ ಪಂತ್ 17ನೇ ರ್ಯಾಂಕ್ ಗಳಿಸಿದ್ದಾರೆ. ಫಾರೋಕ್ ಅವರೂ ಇದೇ ಸಾಧನೆಯನ್ನು 1973ರಲ್ಲಿ ತೋರಿದ್ದರು.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ 4ನೇ ಪಂದ್ಯದ ವೇಳೆ ಪಂತ್ 159 ರನ್ ಬಾರಿಸಿದ್ದರು. ರ್ಯಾಂಕಿಂಗ್‌ನಲ್ಲಿ ಮೇಲಕ್ಕೇರಲು ಪಂತ್‌ಗೆ ಈ ಶತಕದ ಸಾಧನೆ ನೆರವಾಗಿದೆ. ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ, ಟೆಸ್ಟ್ ರ್ಯಂಕಿಂಗ್‌ನಲ್ಲಿ 19 ಸ್ಥಾನ ಜಿಗಿತ ಕಂಡಿದ್ದಿದು ಗಮನಾರ್ಹವಾಗಿತ್ತು.

ಭಾರತದ ಮತ್ತೊಬ್ಬ ಆಟಗಾರ ಚೇತೇಶ್ವರ ಪೂಜಾರ ಕೂಡ ಹೊಸ ರ್ಯಾಂಕ್ ಪಟ್ಟಿಯಲ್ಲಿ 1 ಸ್ಥಾನ ಸುಧಾರಣೆ ಕಂಡಿದ್ದಾರೆ. ನಾಲ್ಕನೇ ಸ್ಥಾನದಲ್ಲಿದ್ದ ಪೂಜಾರ, ಈಗ 3ನೇ ಸ್ಥಾನ ಆವರಿಸಿಕೊಂಡಿದ್ದಾರೆ. ಭಾರತದ ನಾಯಕ ವಿರಾಟ್ ಕೊಹ್ಲಿ ಅಗ್ರ ಸ್ಥಾನಕ್ಕೆ ಗಟ್ಟಿಯಾಗಿದ್ದಾರೆ.

922 ರೇಟಿಂಗ್ ಪಾಯಿಂಟ್ಸ್ ಗಳಿಸಿರುವ ಕೊಹ್ಲಿ ಮೊದಲ ಸ್ಥಾನದಲ್ಲಿ, ನ್ಯೂಜಿಲ್ಯಾಂಡ್‌ನ ಕೇನ್ ವಿಲಿಯಮ್ಸನ್ 2, ಪೂಜಾರ 3, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 4, ಇಂಗ್ಲೆಂಡ್‌ನ ಜೋ ರೂಟ್ 5ನೇ ಸ್ಥಾನಗಳಲ್ಲಿದ್ದಾರೆ. ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ದಕ್ಷಿಣ ಆಫ್ರಿಕಾದ ಕಾಗಿಸೋ ರಬಾಡಾ, ಜೇಮ್ಸ್ ಆ್ಯಂಡರ್ಸನ್ (ಇಂಗ್ಲೆಂಡ್), ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ), ವರ್ನನ್ ಫಿಲಾಂಡರ್ (ದಕ್ಷಿಣ ಆಫ್ರಿಕಾ), ರವೀಂದ್ರ ಜಡೇಜಾ (ಭಾರತ) ಅಗ್ರ 5ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

Story first published: Tuesday, January 8, 2019, 16:45 [IST]
Other articles published on Jan 8, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+