KL Rahul: ಸೆಮೀಸ್ ಪಂದ್ಯಕ್ಕೆ ಕನ್ನಡಿಗ ರಾಹುಲ್ ಔಟ್, ಪಂತ್ ಇನ್?
ಚಾಂಪಿಯನ್ಸ್ ಟ್ರೋಫಿ ಆರಂಭವಾಗುವ ಮುನ್ನ ಮುಂಚೆ ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್ ಆಗಿ ಯಾರಿಗೆ ಅವಕಾಶ ಸಿಗುತ್ತದೆ ಎಂಬ ಚರ್ಚೆಗಳು ಆರಂಭವಾಗಿದ್ದವು. ಆಗ ಅಂಕಿ ಅಂಶಗಳ ಪ್ರಕಾರ ಕೆಎಲ್ ರಾಹುಲ್ ಅವರಿಗೆ ಮಣೆ ಹಾಕಲಾಗಿತ್ತು. ಈ ವೇಳೆ ರಿಷಭ್ ಪಂತ್ ಕೊಂಚ ಬೇಸರವಾಗಿದ್ದರು. ಆದರೆ ಈಗ ಬರುತ್ತಿರುವ ಸುದ್ದಿಯನ್ನು ನಂಬುವುದಾದರೆ, ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡದಲ್ಲಿ ರಿಷಭ್ ಪಂತ್ ಸ್ಥಾನ ಪಡೆಯಬಹುದು ಎಂದು ಹೇಳಲಾಗುತ್ತಿದೆ.
ಕೆಎಲ್ ರಾಹುಲ್ ವಿಕೆಟ್ ಹಿಂದೆ ಮಾಡುವ ಕಾರ್ಯದಲ್ಲಿ ಕೊಂಚ ವಿಫಲರಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ವೇಳೆ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ರಾಹುಲ್ ಅವರ ಸ್ಥಿರ ಕೀಪಿಂಗ್‌ನ ಪರಿಣಾಮ, ಪ್ರದರ್ಶನದಿಂದ ಇವರಿಗೆ ಪಂದ್ಯ ಬೆಸ್ಟ್ ಫೀಲ್ಡ್ ಆವರ್ಡ್ ನೀಡಿ ಗೌರವಿಸಲಾಗಿತ್ತು. ಕೆಟ್ ಕೀಪರ್-ಬ್ಯಾಟ್ಸ್‌ಮನ್ ತಮ್ಮ ಫಾರ್ಮ್ ಅನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದ ಇವರ ಸ್ಥಾನದ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದೆ.

ಚಾಂಪಿಯನ್ಸ್ ಟ್ರೋಫಿ "ಎ" ಗುಂಪಿನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕೆಎಲ್ ರಾಹುಲ್ ನ್ಯೂಜಿಲೆಂಡ್ ವಿರುದ್ಧ ವಿಕೆಟ್ ಕೀಪರ್ ಆಗಿ ಹಲವು ತಪ್ಪುಗಳನ್ನು ಮಾಡಿದ್ದಾರೆ. ಇವರು ವಿಕೆಟ್ ಕೀಪಿಂಗ್ ಹಿಂದೆ ಮಾಡಿದ ತಪ್ಪುಗಳು ನಾಯಕ ರೋಹಿತ್ ಶರ್ಮಾ ಅವರ ಸಮಸ್ಯೆಯನ್ನು ದ್ವಿಗುಣ ಮಾಡಿವೆ. ಈ ಟೂರ್ನಿಯಲ್ಲಿ ರಾಹುಲ್ ಅವರನ್ನು ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿತ್ತು. ಇನ್ನು ರಿಷಭ್ ಪಂತ್ ಈ ಟೂರ್ನಿಯಲ್ಲಿ ಬ್ಯಾಕ್ ಅಪ್ ವಿಕೆಟ್ ಕೀಪರ್ ಆಗಿ ಕಾಣಿಸಿಕೊಂಡಿದ್ದಾರೆ.
ತಪ್ಪುಗಳನ್ನು ಮಾಡಿ ಕೈ ಸುಟ್ಟುಕೊಂಡಿರುವ ಕೆಎಲ್
ನ್ಯೂಜಿಲೆಂಡ್ ವಿರುದ್ಧ ಮಾಡಿದ ತಪ್ಪಿಗಳು ತಂಡದ ತಲೆ ನೋವು ಹೆಚ್ಚಿಸಿವೆ. ಇದರ ಫಲವಾಗಿಯೇ ಟೀಮ್ ಮ್ಯಾನೇಜ್ಮೆಂಟ್ ಇವರಿಗೆ ವಿಶ್ರಾಂತಿ ನೀಡಿ ರಿಷಭ್ ಪಂತ್ ಅವರಿಗೆ ಅವಕಾಶ ನೀಡುವ ಬಗ್ಗೆ ಯೋಚನೆ ನಡೆಸುವುದಾ ಎಂಬ ಬಗ್ಗೆ ಪ್ರಶ್ನೆಗಳು ಏಳಲು ಆರಂಭಿಸಿವೆ.

ಕಿವೀಸ್ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಕೀಪರ್ ಆಗಿ ರಾಹುಲ್ ಸಾಲು ಸಾಲು ತಪ್ಪುಗಳನ್ನು ಮಾಡಿದ್ದಾರೆ. ಕೇನ್ ವಿಲಿಯಮ್ಸನ್ ಅವರು ಕೇವಲ 1 ರನ್‌ಗಳಿಸಿದ್ದಾಗ ರಾಹುಲ್ ಅವರ ಕ್ಯಾಚ್ ಕೈ ಬಿಟ್ಟರು. ಇದಾದ ಬಳಿಕ ಕೇನ್ ದೊಡ್ಡ ಇನಿಂಗ್ಸ್ ಕಟ್ಟಿ ಭಾರತಕ್ಕೆ ಕಾಟ ನೀಡಿದರು. ಇನ್ನು 26ನೇ ಓವರ್‌ನಲ್ಲೂ ಇಂತಹದ್ದೇ ತಪ್ಪನ್ನು ರಾಹುಲ್ ಪದೇ ಪದೇ ಮಾಡಿದ್ದಾರೆ. ಇವರು ಈ ವೇಳೆ ಟಾಮ್ ಲಾಥಮ್ ಅವರ ಬ್ಯಾಟ್‌ನ ಅಂಚಿಗೆ ಮುತ್ತಿಟ್ಟ ಬಂದ ಚೆಂಡು ವಿಕೆಟ್ ಕೀಪರ್ ಬಳಿ ಹೋಯಿತು. ಆಗ ರಾಹುಲ್ ಆ ಕ್ಯಾಚ್‌ನ್ನು ಕೈ ಚೆಲ್ಲಿದರು. ಈ ಕ್ಯಾಚ್ ಬಿಟ್ಟ ಮೇಲೆ ನಾಯಕ ರೋಹಿತ್ ಶರ್ಮಾ ಅವರ ಪ್ರತಿಕ್ರಿಯೆ ನೋಡಿದರೆ, ಅವರು ಎಷ್ಟು ಸಿಟ್ಟಾಗಿದ್ದರು ಎಂಬುದು ತಿಳಿಯುತ್ತದೆ.
ಇನ್ನು ಮುಂದೆ ನಾಕೌಟ್ ಪಂದ್ಯಗಳು ಆರಂಭವಾಗಲಿವೆ. ಈ ವೇಳೆ ಒಂದೇ ಒಂದು ತಪ್ಪು ತಂಡಕ್ಕೆ ಮಾರಕವಾಗಬಹುದು ಎಂಬ ದೃಷ್ಟಿಯಿಂದ ಟೀಮ್ ಮ್ಯಾನೇಜ್ಮೆಂಟ್ ಈ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications