Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌ನಿಂದ ಪಂತ್ ಹೊರಗಿಟ್ಟಿದ್ದು ಅಚ್ಚರಿ ಮೂಡಿಸಿದೆ: ಸುನಿಲ್ ಗವಾಸ್ಕರ್

Pant misses out ICC World Cup Team- Gavaskar react

ನವದೆಹಲಿ, ಏಪ್ರಿಲ್ 15: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು 2019ರ ಭಾರತದ ವಿಶ್ವಕಪ್ ತಂಡದಿಂದ ಯುವ ಕ್ರಿಕೆಟಿಗ ಪಂತ್ ಅವರನ್ನು ಹೊರಗಿಟ್ಟಿದ್ದಕ್ಕಾಗಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ತಂಡದಲ್ಲಿ ಪಂತ್ ಅವರನ್ನು ನಿರೀಕ್ಷಿಸಿದ್ದೆ ಎಂದು ಗವಾಸ್ಕರ್ ಹೇಳಿಕೊಂಡಿದ್ದಾರೆ.

ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಬಿಸಿಸಿಐ ಸೋಮವಾರ (ಏಪ್ರಿಲ್ 15) ಪ್ರಕಟಿಸಿರುವ 15 ಜನರಿರುವ ಭಾರತ ವಿಶ್ವಕಪ್ ತಂಡದಲ್ಲಿ 21ರ ಹರೆಯವ ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ಪಂತ್‌ಗೆ ಸ್ಥಾನ ನೀಡಿಲ್ಲ. ಧೋನಿ ಬಳಿಕ 2ನೇ ವಿಕೆಟ್ ಕೀಪರ್‌ ಆಗಿ 33ರ ಹರೆಯದ ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡಿಲಾಗಿದೆ.

'ತಂಡದಿಂದ ಪಂತ್ ಕೈ ಬಿಟ್ಟಿದ್ದು ಕೊಂಚ ಅಚ್ಚರಿ ಮೂಡಿಸಿತು. ಐಪಿಎಲ್ ಹೊರತುಪಡಿಸಿಯೂ ಪಂತ್ ಬ್ಯಾಟಿಂಗ್‌ನಲ್ಲಿ ಚೆನ್ನಾಗಿದ್ದರು. ವಿಕೆಟ್‌ ಕೀಪಿಂಗ್‌ನಲ್ಲೂ ಸುಧಾರಣೆ ಕಾಣುತ್ತಿದ್ದರು. ಪಂತ್ ಅವರಿಂದ ತಂಡದಲ್ಲಿ ಎಡಗೈ ಬ್ಯಾಟಿಂಗ್‌ಗೆ ಒಂದು ಅವಕಾಶವೂ ಇತ್ತು. ಇದರಿಂದ ತಂಡಕ್ಕೆ ಅನುಕೂಲವಿತ್ತು' ಎಂದು ಸುನಿಲ್ ತಿಳಿಸಿದ್ದಾರೆ.

ರಿಷಬ್ ಪಂತ್ ಹೊರತು ಪಡಿಸಿ ಉಳಿದಂತೆ ತಂಡ ಬಹುತೇಕ ನಿರೀಕ್ಷಿತವಾಗಿಯೇ ಇತ್ತು. ವಿಜಯ್ ಶಂಕರ್, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ತಂಡದಲ್ಲಿದ್ದರು. ಈಗಿನ ಐಪಿಎಲ್ ಸಾಧನೆ ತೆಗೆದುಕೊಂಡರೂ ದಿನೇಶ್ ಕಾರ್ತಿಕ್ 111 ರನ್ ಗಳಿಸಿದ್ದರೆ, ಪಂತ್ 245 ರನ್ ಕಲೆ ಹಾಕಿದ್ದರು. ಬಹುಶಃ ಪಂತ್‌ಗೆ ಇನ್ನೂ ಅವಕಾಶವಿರುವುದರಿಂದ ಮತ್ತು ದಿನೇಶ್ ಕಾರ್ತಿಕ್‌ ಅನುಭವಿಯಾಗಿರುವುದರಿಂದ ಅವರಿಗೆ ಬಿಸಿಸಿಐ ಮಣೆ ಹಾಕಿದೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿವೆ.

Story first published: Monday, April 15, 2019, 18:17 [IST]
Other articles published on Apr 15, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+