ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟೆಸ್ಟ್ ಗುವಾಹಟಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಶುಭಮನ್ ಗಿಲ್ ಗಾಯಕ್ಕೆ ತುತ್ತಾಗಿದ್ದರಿಂದ ತಂಡವನ್ನು ರಿಷಭ್ ಪಂತ್ ಮುನ್ನಡೆಸುತ್ತಿದ್ದಾರೆ. ಈ ಪಂದ್ಯದಲ್ಲಿ ರಿಷಭ್ ಪಂತ್, ಚೈನಾಮನ್ ಸ್ಪಿನ್ ಬೌಲರ್ ಕುಲ್‌ದೀಪ್ ಯಾದವ್ ಅವರ ಮೇಲೆ ಕೋಪಗೊಂಡರು. ಟೀಮ್ ಇಂಡಿಯಾ ಆಟಗಾರರು ಮಾಡಿದ ಆ ಒಂದು ತಪ್ಪಿಗೆ ಅಂಪೈರ್ ವಾರ್ನಿಂಗ್ ಸಹ ನೀಡಿದರು. ಭಾರತದ ಆಟಗಾರರು ಮಾಡಿದ ತಪ್ಪೇನು?
ಭಾನುವಾರ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಎರಡನೇ ಟೆಸ್ಟ್ ಎರಡನೇ ದಿನದ ಆಟ ನಡೆಯುತ್ತಿದೆ. ಈ ವೇಳೆ ಇನಿಂಗ್ಸ್‌ನ 88ನೇ ಓವರ್ ಬೌಲ್ ಮಾಡಲು ಕುಲ್‌ದೀಪ್ ಯಾದವ್ ಬಂದರು. ಈ ಓವರ್ ಪ್ರಾರಂಭಿಸಲು ಇವರು ನಿಗದಿಪಡಿಸಿದ ಸಮಯವನ್ನು (60 ಸೆಕೆಂಡುಗಳು) ಮೀರಿದರು. ಕುಲ್‌ದೀಪ್ ಫೀಲ್ಡ್ ಸೆಟ್ ಮಾಡುತ್ತಿರುವಾಗ ರಿಷಭ್ ಪಂತ್ "ನೀವು ಮನೆಯಲ್ಲಿ ಆಡುತ್ತಿಲ್ಲ" ಎಂದು ಕೂಗಿದರು.

ರಿಷಭ್ ಪಂತ್ ಅವರು "ನೀವು ಮನೆಯಲ್ಲಿ ಆಡುತ್ತಿಲ್ಲ" ಒಂದು ಚೆಂಡನ್ನು ಬೇಗನೆ ಬೌಲ್ ಮಾಡುವಂತೆ ಸೂಚಿಸಿದರು. ಅಲ್ಲದೆ ಟೈಮರ್ ಆನ್ ಆಗಿದೆ ಎಂದು ಪಂತ್, ಕುಲ್‌ದೀಪ್ ಯಾದವ್ ಅವರಿಗೆ ನೆನಪಿಸಿದರು. ಬಳಿಕ ಫೀಲ್ಡ್ ಅಂಪೈರ್ ಎರಡನೇ ಎಚ್ಚರಿಕೆ ನೀಡಿದರು. ಕೊನೆಯ 8 ಓವರ್‌ಗಳಲ್ಲಿ ಟೀಮ್ ಇಂಡಿಯಾ ಐಸಿಸಿ ಸ್ಟಾಪ್‌ಕ್ಲಾಕ್ ನಿಯಮವನ್ನು ಎರಡನೇ ಬಾರಿ ಮೀರಿದೆ. ಮುಂದಿನ 80 ಓವರ್‌ಗಳಲ್ಲಿ ಇಂತಹದ್ದೇ ತಪ್ಪು ಮರುಕಳಿಸಿದರೆ, ದಕ್ಷಿಣ ಆಫ್ರಿಕಾಕ್ಕೆ 5 ರನ್ ನೀಡಲಾಗುತ್ತದೆ.
ಐಸಿಸಿ ನಿಯಮದ ಪ್ರಕಾರ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ಓವರ್ ಮುಗಿದು ಇನ್ನೊಂದು ಓವರ್ 60 ಸೆಕೆಂಡ್‌ಗಳ ಒಳಗೆ ಆರಂಭವಾಗಬೇಕು. ಇದಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಂಡಲ್ಲಿ ಅಂಪೈರ್ ವಾರ್ನಿಂಗ್ ನೀಡುತ್ತಾರೆ. ಒಂದು ವೇಳೆ ಈ ರೀತಿಯ ವಾರ್ನಿಂಗ್ 80 ಓವರ್‌ಗಳಲ್ಲಿ 2 ಬಾರಿ ಸಿಕ್ಕಲ್ಲಿ, ಮುಂದೆ ಇಂತಹದ್ದೇ ತಪ್ಪು ಆದಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ 5 ರನ್ ನೀಡಲಾಗುತ್ತದೆ.
ಐಸಿಸಿ ಈ ನಿಯಮವನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ವ್ಯರ್ಥವಾಗುವ ಸಮಯವನ್ನು ತಡೆಯುವುದು ಆಗಿದೆ. ಈ ಮೂಲಕ ಫೀಲ್ಡಿಂಗ್ ಮಾಡುವ ತಂಡ ಫೀಲ್ಡ್ ಸೆಟ್ ಮಾಡಲು ಅಧಿಕ ಸಮಯ ತೆಗೆದುಕೊಳ್ಳುವುದಿಲ್ಲ. ಇಂತಹದ್ದೇ ನಿಯಮ ಔಟ್‌ಗೂ ಇದೆ. ಒಬ್ಬ ಬ್ಯಾಟರ್ ಔಟ್ ಆದ, ಇನ್ನೊಬ್ಬ ಬ್ಯಾಟರ್ ಬಂದು ಬ್ಯಾಟಿಂಗ್‌ನ್ನು ಮೂರು ನಿಮಿಷಗಳ ಒಳಗೆ ಆರಂಭಿಸಬೇಕು. ಇದಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಂಡಲ್ಲಿ "ಟೈಮ್ಡ್ ಔಟ್" ನಿಯಮದ ಅಡಿಯಲ್ಲಿ ಔಟ್‌ಗಾಗಿ ಫೀಲ್ಡಿಂಗ್ ಮಾಡುವ ತಂಡ ಮನವಿ ಸಲ್ಲಿಸಿದರೆ, ಔಟ್ ಎಂದು ಘೋಷಿಸಲಾಗುತ್ತದೆ.
ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟೆಸ್ಟ್ ಗುವಾಹಟಿಯಲ್ಲಿ ನಡೆಯುತ್ತಿದ್ದು ಈ ಟೆಸ್ಟ್ ಪಂದ್ಯವನ್ನು ಗೆಲ್ಲುವುದು ರಿಷಭ್ ಪಂತ್ ಪಡೆಗೆ ಅನಿವಾರ್ಯವಾಗಿದೆ.