Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿಮ್ ಪೈನೆ ಮಕ್ಕಳನ್ನು ನೋಡಿಕೊಳ್ಳೋ ಸವಾಲು ಸ್ವೀಕರಿಸಿದ್ದಾರಾ ಪಂತ್?!

Pant tagged ‘best babysitter’ by Tim Paine’s wife Bonnie Paine

ನವದೆಹಲಿ, ಜನವರಿ 1: ಭಾರತ-ಆಸ್ಟ್ರೇಲಿಯಾ 3ನೇ ಟೆಸ್ಟ್ ವೇಳೆ ಆಸ್ಟ್ರೇಲಿಯಾ ನಾಯಕ ಟಿಮ್ ಪೈನೆ ರಿಷಬ್ ಪಂತ್ ಅವರನ್ನು, ಪಂತ್ ಅವರು ಪೈನೆ ಅವರನ್ನು ತಮಾಷೆ ಮಾಡಿದ್ದು ನಡೆದಿತ್ತು. ಇಬ್ಬರ ನಡುವಿನ ಅಂದಿನ ತಮಾಷೆಗೆ ಹೋಲಿಕೆಯಾಗುವಾಗುವಂತ ಚಿತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಬಾಕ್ಸಿಂಗ್‌ ಡೇ ಟೆಸ್ಟ್ ನಲ್ಲಿ ಟಿಮ್ ಪೈನೆ, ರಿಷಬ್ ಪಂತ್ ಅವರ ಕಾಲೆಳೆದಿದ್ದರು. ಆಸೀಸ್ ವಿರುದ್ಧದ ಏಕದಿನ ಸರಣಿಗೆ ಎಂಎಸ್‌ ಧೋನಿ ವಾಪಸ್ಸಾಗಿದ್ದಾರೆ. ಹೀಗಾಗಿ ಟೆಸ್ಟ್ ಸರಣಿ ಮುಗಿದ ಬಳಿಕ ಬಿಗ್ ಬ್ಯಾಷ್ ಲೀಗ್‌ನಲ್ಲಿ ಹೊಬರ್ಟ್ ಹರಿಕೇನ್ಸ್ ಪರ ಆಡು. ನನ್ನ ಮನೆಗೂ ಬಾ. ನಾನೂ ನನ್ನ ಹೆಂಡತಿ ಸಿನಿಮಾಕ್ಕೆ ಹೋದಾಗ ಮನೆಯಲ್ಲಿ ನನ್ನ ಮಕ್ಕಳನ್ನು ನೋಡಿಕೊಂಡಿರು ಎಂದು ಕಿಚಾಯಿಸಿದ್ದರು.

ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಧೋನಿಗೆ ಅವಕಾಶ ನೀಡಲಾಗಿದೆ. ಆದರೆ ರಿಷಬ್ ಪಂತ್‌ಗೆ ಸ್ಥಾನ ನೀಡಲಾಗಿಲ್ಲ. ಇದೇ ಕಾರಣಕ್ಕೆ ಮೂರನೇ ಟೆಸ್ಟ್ ನಲ್ಲಿ ಭಾರತದ ಇನ್ನಿಂಗ್ಸ್‌ ವೇಳೆ ಪಂತ್‌ ಬ್ಯಾಟಿಂಗ್‌ ಮಾಡುತ್ತಿದ್ದಾಗ ಕೀಪಿಂಗ್‌ ಮಾಡುತ್ತಿದ್ದ ಟಿಮ್ ತಮಾಷೆ ಮಾಡಿದ್ದರು.

ಪೈನೆ ಹೆಂಡತಿ, ಮಕ್ಕಳ ಜೊತೆ ಪಂತ್!

ಪೈನೆ ಹೆಂಡತಿ, ಮಕ್ಕಳ ಜೊತೆ ಪಂತ್!

ಪೈನೆ ಸಾಲನ್ನು ಪಂತ್ ಸ್ವೀಕರಿಸಿದ್ದಾರೆ ಎಂಬರ್ಥ ಕೊಡುವ ಚಿತ್ರವೀಗ ಜಾಲತಾಣದಲ್ಲಿ ಓಡಾಡುತ್ತಿದೆ. ಚಿತ್ರದಲ್ಲಿ ಪಂತ್ ಇದ್ದಾರೆ. ಟಿಮ್ ಪೈನೆ ಹೆಂಡತಿ, ಮಕ್ಕಳಿದ್ದಾರೆ. ಪಂತ್ ಅವರು ಪೈನೆ ಮಕ್ಕಳನ್ನು ಹಿಡಿದುಕೊಂಡಿದ್ದಾರೆ ಕೂಡ!

ಫೋಟೋ ಸೆರೆಯಾಗಿದ್ದು

ಫೋಟೋ ಸೆರೆಯಾಗಿದ್ದು

ಇತ್ತಂಡಗಳ ನಡುವಣ ನಾಲ್ಕನೇ ಟೆಸ್ಟ್ ಅಂಗವಾಗಿ ಭಾನುವಾರ (ಡಿಸೆಂಬರ್ 30) ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರ ಸಿಡ್ನಿ ನಿವಾಸದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಎರಡೂ ತಂಡಗಳ ಆಟಗಾರರು ಪಾಲ್ಗೊಂಡಿದ್ದರು. ಈ ವೇಳೆ ಪಂತ್, ಪೈನೆ ಮಕ್ಕಳನ್ನು ಕೈಗೆತ್ತಿಕೊಂಡು ಬೊನೀ ಪೈನೆ ಜೊತೆ ನಿಂತಿರುವ ಫೋಟೋ ಸೆರೆಯಾಗಿತ್ತು

ಬೆಸ್ಟ್ ಬೇಬಿಸಿಟ್ಟರ್

ಬೆಸ್ಟ್ ಬೇಬಿಸಿಟ್ಟರ್

ಇದೇ ಫೋಟೋವನ್ನು ಮುಂದಿಟ್ಟುಕೊಂಡು ಈಗ ಪಂತ್ ತಮಾಷೆಗೀಡಾಗುತ್ತಿದ್ದಾರೆ. ಭಾರತ ತಂಡ ಮತ್ತದರ ಆಟಗಾರರು ಅಚ್ಚುಮೆಚ್ಚು ಅನ್ನಿಸಲು ಇದೂ ಒಂದು ಕಾರಣ. ಪಂತ್ ಒಬ್ಬ ಬೆಸ್ಟ್ ಬೇಬಿಸಿಟ್ಟರ್ ಎಂದೆಲ್ಲ ಸಾಲುಗಳು ಫೋಟೋದೊಂದಿಗೆ ಹರಿದಾಡುತ್ತಿದೆ.

ಕಾಮೆಂಟರಿ ಕಿರಿಕ್

ಕಾಮೆಂಟರಿ ಕಿರಿಕ್

ಕೀಪಿಂಗ್‌ ಮಾಡುತ್ತ ಕಾಮೆಂಟರಿ ತಮಾಷೆ ಮಾಡೋದನ್ನು ಪಂತ್ ಮೊದಲು ಆರಂಭಿಸಿದ್ದರು. ಆರಂಭಿಕ ಟೆಸ್ಟ್ ನಲ್ಲಿ ಪ್ಯಾಟ್‌ ಕಮಿನ್ಸ್‌ ಅವರನ್ನು ಪಂತ್ ಗೇಲಿ ಮಾಡಿದ್ದರು. ಅನಂತರ ಟಿಮ್ ಪೈನೆ ಹೀಗೇ ತರ್ಲೆ ಮಾಡುತ್ತ ಪಂತ್ ಅವರನ್ನು ಟೆಂಪರರಿ ಕೀಪರ್ ಎಂದು ಕರೆದಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಪಂತ್, ಟೆಂಪರರಿ ಕ್ಯಾಪ್ಟನ್ ಎನ್ನುವ ಮೂಲಕ ಪೈನೆ ಅವರ ಕಾಲೆಳೆದಿದ್ದೂ ನಡೆದಿತ್ತು.

Story first published: Tuesday, January 1, 2019, 17:15 [IST]
Other articles published on Jan 1, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+