Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup 2024: ಟಿ20 ವಿಶ್ವಕಪ್‌ಗೆ ಪಪುವಾ ನ್ಯೂಗಿನಿ ತಂಡ ಪ್ರಕಟ

ಮೇ 8 ಬುಧವಾರ, ವಿಶ್ವದ ಅತಿ ದೊಡ್ಡ ಐಸಿಸಿ ಟೂರ್ನಿಯಾದ 2024ರ ಟಿ20 ವಿಶ್ವಕಪ್‌ಗೆ ಪಪುವಾ ನ್ಯೂಗಿನಿ ಕ್ರಿಕೆಟ್‌ ಮಂಡಳಿ ತನ್ನ ತಂಡವನ್ನು ಪ್ರಕಟಿಸಿದೆ.

ಜೂನ್ 1 ರಿಂದ ವೆಸ್ಟ್ ಇಂಡೀಸ್ ಮತ್ತು ಅಮೆರಿಕಾದಲ್ಲಿ ಆರಂಭವಾಗುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಅಸದ್ ವಾಲಾ ಅವರು 15 ಸದಸ್ಯರ ಪಪುವಾ ನ್ಯೂಗಿನಿಯಾ ತಂಡವನ್ನು ಮುನ್ನಡೆಸಲಿದ್ದಾರೆ. ಆಲ್ ರೌಂಡರ್ ಸಿಜೆ ಅಮಿನಿ ಅವರನ್ನು ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ.

Papua New Guinea squad announced for T20 World Cup 2024

ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಪಪುವಾ ನ್ಯೂಗಿನಿ ತಂಡ ಎರಡನೇ ಬಾರಿ ಭಾಗವಹಿಸುತ್ತಿದೆ. 2021ರ ಟಿ20 ವಿಶ್ವಕಪ್‌ ತಂಡದಲ್ಲಿದ ಆಟಗಾರರಲ್ಲಿ ಅಸದ್ ವಾಲಾ ಒಬ್ಬರಾಗಿದ್ದರೆ, ಜೊತೆಗೆ ಅಂದು ಮೀಸಲು ಆಟಗಾರ ಜಾಕ್ ಗಾರ್ಡ್ನರ್ ಈ ಬಾರಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ತಂಡ ಪ್ರಕಟವಾಗುತ್ತಿದ್ದಂತೆ ಮಾತನಾಡಿರುವು ನಾಯಕ ಅಸದ್ ವಾಲಾ, ತಂಡದೊಳಗಿನ ಶಕ್ತಿಯೂ ಉತ್ತಮವಾಗಿದೆ. ಕಳೆದ ಟಿ20 ವಿಶ್ವಕಪ್‌ ಆಡಿದ್ದ ಕೆಲವು ಆಟಗಾರರಿಗೆ ಈ ಬಾರಿ ಸಾಕಷ್ಟು ತರಬೇತಿ ನೀಡಲಾಗಿದೆ. ಕಳೆದ ಬಾರಿ ಕೋವಿಡ್‌ನಿಂದಾಗಿ ಸರಿಯಾದ ರೀತಿಯಲ್ಲಿ ತಯಾರಿ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಈ ಟೂರ್ನಿಗಾಗಿ ಎದುರು ನೋಡುತ್ತಿದ್ದೇನೆ. ಏಕೆಂದರೆ ನಾವು ಟೂರ್ನಿಯಲ್ಲಿ ಚೆನ್ನಾಗಿ ಆಡಲಿದ್ದೇವೆ ಎಂದು ನನಗೆ ತಿಳಿದಿದೆ ಎಂದು ಹೇಳಿದರು.

ಪಪುವಾ ನ್ಯೂಗಿನಿಯಾ ಅಭಿಯಾನ ಯಾವಾಗ?

ಜೂನ್‌ 2 ರಂದು ಪಪುವಾ ನ್ಯೂಗಿನಿಯಾ ತನ್ನ ಮೊದಲ ಪಂದ್ಯವನ್ನು ಆತಿಥೇಯ ಬಲಿಷ್ಥ ವೆಸ್ಟ್‌ ಇಂಡೀಸ್‌ ತಂಡದ ಎದುರು ಆಡಲಿದೆ. ಬಳಿಕ ಜೂನ್‌ 5 ರಂದು ಉಗಾಂಡಾ ತಂಡವನ್ನು ಪಪುವಾ ನ್ಯೂಗಿನಿಯಾ ಎದುರಿಸಲಿದೆ. ಜೂನ್ 13 ರಂದು ಅಫ್ಘಾನಿಸ್ತಾನ ವಿರುದ್ಧ ಪಪುವಾ ನ್ಯೂಗಿನಿಯಾ ಸೆಣಸಾಡಲಿದೆ. ಕೊನೆಯಲ್ಲಿ ಗುಂಪು ಹಂತದ ಪಂದ್ಯಗಳನ್ನು ಮುಗಿಸಲು ನ್ಯೂಜಿಲೆಂಡ್‌ ವಿರುದ್ಧ ಪಂದ್ಯವಾಡಲಿದೆ.

ಪಪುವಾ ನ್ಯೂಗಿನಿಯಾ ತಂಡ : ಅಸ್ಸಾದ್ ವಾಲಾ (ನಾಯಕ), ಸಿಜೆ ಅಮಿನಿ (ಉಪನಾಯಕ), ಎಲಿ ನಾವೊ, ಚಾಡ್ ಸೋಪರ್, ಹಿಲಾ ವೆರೆ, ಹಿರಿ ಹಿರಿ, ಜಾಕ್ ಗಾರ್ಡ್ನರ್, ಜಾನ್ ಕರಿಕೊ, ಕಬುವಾ ವಾಗಿ ಮೊರಿಯಾ, ಕಿಪ್ಲಿಂಗ್ ಡೊರಿಗಾ, ಲೆಗಾ ಸಿಯಾಕಾ, ನಾರ್ಮನ್ ವನುವ, ಸೆಮಾ ಕಾಮಿಯಾ, ಸೆಸೇ ಬೌ, ಟೋನಿ ಉರಾ.

Story first published: Wednesday, May 8, 2024, 16:33 [IST]
Other articles published on May 8, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+