Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಖಡ್ಕ ಬ್ಯಾಟಿಂಗ್ ಬಲ, ಯುಎಇ ವಿರುದ್ಧ ಐತಿಹಾಸಿಕ ಸರಣಿ ಗೆದ್ದ ನೇಪಾಳ!

Paras Khadka ton helps Nepal register their maiden ODI series win

ದುಬೈ, ಜನವರಿ 29: ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರವಾಸದಲ್ಲಿರುವ ಭಾರತದ ನೆರೆಯ ರಾಷ್ಟ್ರ ನೇಪಾಳದ ಕ್ರಿಕೆಟ್ ತಂಡ, ದುಬೈ ಸ್ಟೇಡಿಯಂನಲ್ಲಿ ನಡೆದ ಆತಿಥೇಯ ಯುಎಇ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 4 ವಿಕೆಟ್ ಗೆಲುವನ್ನಾಚರಿಸಿತು. ತಂಡದ ನಾಯಕ ಪರಾಸ್ ಖಡ್ಕ ಅವರ ಅಬ್ಬರದ ಬ್ಯಾಟಿಂಗ್‌ ಮತ್ತು ಬೌಲಿಂಗ್ ನೆರವಿನಿಂದ ನೇಪಾಳ ಈ ಗೆಲುವಿನೊಂದಿ ಐತಿಹಾಸಿಕ ಸರಣಿ ಜಯಿಸಿದೆ.

ಜನವರಿ 28ರಂದು ನಡೆದ ಈ ಪಂದ್ಯದಲ್ಲಿ ಖಡ್ಕ 109 ಎಸೆತಗಳಿಗೆ 115 ರನ್ ಚಚ್ಚಿದರಲ್ಲದೆ, ಯುಎಇ ಇನ್ನಿಂಗ್ಸ್‌ ವೇಳೆ 44 ರನ್ನಿಗೆ 2 ವಿಕೆಟ್ ಕೂಡ ಕಬಳಿಸಿದರು. ನೇಪಾಳ ತಂಡ, ಯುಎಇ ನೀಡಿದ್ದ 254 ರನ್ ಗುರಿಯನ್ನು 44.4 ಇರುವಾಗಲೇ ಮೀರಿಸಿ ಚೊಚ್ಚಲ ಏಕದಿನ ಸರಣಿ ಗೆಲುವನ್ನು ಸಂಭ್ರಮಿಸಿತು. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿ 2-1ರಿಂದ ನೇಪಾಳದ ವಶವಾಗಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಯುಎಇ, ಶಾಯ್‌ಮಾನ್ ಅನ್ವರ್ 87, ಮೊಹಮ್ಮದ್ ಬೂಟಾ 59, ಸಿಪಿ ರಿಝ್ವಾನ್ 45 ರನ್ ಬೆಂಬಲದೊಂದಿಗೆ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದು 254 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ನೇಪಾಳ ತಂಡ ಪರಾಸ್ ಶತಕ, ಜ್ಞಾನೇಂದ್ರ ಮಲ್ಲ 31 ರನ್ ಕೊಡುಗೆಯಿಂದ 6 ವಿಕೆಟ್ ಕಳೆದು 255 ರನ್ ಗಳಿಸಿತು.

ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ನೇಪಾಳ ನಾಯಕ ಪರಾಸ್ ಖಡ್ಕ 3ನೇ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರಲ್ಲದೆ, ಸರಣಿ ಶ್ರೇಷ್ಠರಾಗಿಯೂ ಮಿಂಚಿದರು. ಆರಂಭಿಕ ಪಂದ್ಯದಲ್ಲಿ ಯುಎಇ 3 ವಿಕೆಟ್ ಗಳಿಂದ ಗೆದ್ದಿದ್ದರಿಂದ ವೈಟ್ ವಾಷ್‌ನಿಂದ ತಪ್ಪಿಸಿಕೊಂಡಿದೆ.

Story first published: Tuesday, January 29, 2019, 18:38 [IST]
Other articles published on Jan 29, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+