ಧೋನಿ, ರೋಹಿತ್, ವಿರಾಟ್ : ಮೂವರ ನಾಯಕತ್ವದ ಭಿನ್ನತೆ ಬಗ್ಗೆ ಪಾರ್ಥಿವ್ ಮಾತು

ಅನುಭವಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಮೂವರು ನಾಯಕರ ಬಗ್ಗೆ ಮತ್ತು ಅವರ ನಾಯಕತ್ವದ ಭಿನ್ನತೆಗಳ ಬಗ್ಗೆ ಮಾತನಾಡಿದ್ದಾರೆ. ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ದೋನಿ, ಹಾಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ನಾಯಕತ್ವದ ಭಿನ್ನತೆಗಳೇನು ಎಂದು ಹೇಳಿದ್ದಾರೆ.
ಪಾರ್ಥಿವ್ ಪಟೇಮ್ ಈ ಮೂವರು ಆಟಗಾರರ ನಾಯಕತ್ವದಲ್ಲಿ ಟೀಮ್ ಇಂಡಿಯಾದಲ್ಲಿ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಹೀಗಾಗಿ ನಾಯಕತ್ವದ ನಡುವಿನ ಭಿನ್ನತೆಯನ್ನು ತಿಳಿಸಲು ಪಾರ್ಥಿವ್ ಸೂಕ್ತ ವ್ಯಕ್ತಿಯಾಗಿದ್ದಾರೆ. ಮಾಜಿ ಕ್ರಿಕೆಟಿಗ ಕಾಮೆಂಟೇಟರ್ ಆಕಾಶ್ ಚೋಪ್ರಾಗೆ ನೀಡಿದ ಸಂದರ್ಶನದಲ್ಲಿ ಪಾರ್ಥಿವ್ ಪಟೇಲ್ ಈ ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ರೋಹಿತ್ ಧೋನಿ ನಾಯಕತ್ವದಲ್ಲಿ ಸಾಮ್ಯತೆ
ಧೋನಿ ಮತ್ತು ರೋಹಿತ್ ನಾಯಕತ್ವದಲ್ಲಿ ಸಾಕಷ್ಟು ಸಾಮ್ಯತೆಗಳು ಇದೆ ಎಂದು ಪಾರ್ಥಿವ್ ಪಟೇಲ್ ಒಪ್ಪಿಕೊಳ್ಳುತ್ತಾರೆ. ಇಬ್ಬರೂ ಆಟಗಾರರು ತಂಡವನ್ನು ಮುನ್ನಡೆಸುವಾಗ ಶಾಂತ ಚಿತ್ತದಿಂದ ಇರಲು ಬಯಸುತ್ತಾರೆ. ಡ್ರೆಸ್ಸಿಂಗ್ ರೂಮ್‌ನಲ್ಲೂ ಅಷ್ಟೆ ಆಟಗಾರರು ಶಾಂತಚಿತ್ತದಿಂದ ಇರುವುದನ್ನು ಅಪೇಕ್ಷಿಸುತ್ತಾರೆ ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ.

ವಿರಾಟ್ ವಿಭಿನ್ನ ನಾಯಕ
ವಿರಾಟ್ ಕೊಹ್ಲಿ ವಿಭಿನ್ನ ಶೈಲಿಯ ನಾಯಕತ್ವವನ್ನು ಹೊಂದಿದ್ದಾರೆ. ಆತ ಪ್ರತಿ ಬಾರಿಯೂ ಸರಿಯಾಗಿರಲು ಇಷ್ಟಪಡುತ್ತಾರೆ ತಂಡವನ್ನು ಮುಂಭಾಗದಿಂದ ಮುನ್ನಡೆಸಲು ಇಷ್ಟಪಡುತ್ತಾರೆ ಮತ್ತು ಯಾವಾಗಲೂ ಆಕ್ರಮಣಕಾರಿ ಮನಸ್ಥಿತಿಯನ್ನು ಹೊಂದಿರುತ್ತಾರೆ. ಇದು ಅವರ ಶೈಲಿ ಮತ್ತು ಇದು ಅವರಿಗೆ ಸೂಕ್ತವಾಗಿದೆ ಪಾರ್ಥಿವ್ ಪಟೇಲ್ ಆಕಾಶ ಚೋಪ್ರಾ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ಮೂವರು ನಾಯಕರೊಂದಿಗೆ ಪಾರ್ಥಿವ್ ಆಟ
ಪಾರ್ಥೀವ್ ಪಟೇಲ್ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ 2008 ರಿಂದ 2010ರ ಅವಧಿಯ ಮೂರು ಆವೃತ್ತಿಯಲ್ಲಿ ಆಡಿದ್ದರು. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ತಂಡದಲ್ಲಿ 2015 ರಿಂದ 2017ರ ಅವಧಿಯ ಮೂರು ಆವೃತ್ತಿಯಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಹಾಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ತಂಡದಲ್ಲಿ ವಿಕೆಟ್ ಕೀಪಿಂಗ್ ಜೊತೆಗೆ ಅನುಭವಿ ಬ್ಯಾಟ್ಸ್‌ಮನ್ ಆಗಿ ಜವಾಬ್ಧಾರಿ ವಹಿಸಿಕೊಂಡಿದ್ದಾರೆ.

ರೋಹಿತ್ ನಾಯಕತ್ವದಲ್ಲಿ ಭಾರೀ ಬದಲಾವಣೆ
ರೋಹಿತ್ ಶರ್ಮಾ ನಾಯಕತ್ವದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ ಎಂದು ಪಾರ್ಥಿವ್ ಹೇಳಿದ್ದಾರೆ. 2014ರಿಂದ ಈಗನವರೆಗೆ ಗಮನಿಸಿದಾಗ ದೊಡ್ಡ ಬದಲಾವಣೆಯಾಗಿದೆ. ಆತ ಅದ್ಭುತವಾಗಿ ಯೋಜನೆಯನ್ನು ರೂಪಿಸಿಕೊಳ್ಳುತ್ತಾರೆ. ಯಾವ ಆಟಗಾರನಿಗೆ ಯಾವ ಪಾತ್ರವನ್ನು ನೀಡಬೇಕು ಎಂಬ ಬಗ್ಗೆ ಸ್ಪಷ್ಟತೆಯನ್ನು ಹೊಂದಿರುತ್ತಾರೆ. ಲಭ್ಯ ಆಟಗಾರರು ಸರಿಯಾಗಿ ನಿರ್ವಹಿಸುವುದರಲ್ಲಿ ರೋಹಿತ್ ಮತ್ತು ಧೋನಿ ನಿಜಕ್ಕೂ ಅದ್ಭುತ ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications