Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯುವ ಆಟಗಾರರಿಗೆ ನಾಯಕನಾಗಿ ಗಂಗೂಲಿ ಬೆಂಬಲಿಸುತ್ತಿದ್ದ ರೀತಿ ವಿವರಿಸಿದ ಪಾರ್ಥಿವ್ ಪಟೇಲ್

Parthiv Patel Recalls Ganguly’s Reaction To Missed Stumping In Australia

ಟೀಮ್ ಇಂಡಿಯಾಗೆ ಯುವ ಪ್ರತಿಭೆಗಳನ್ನು ಆಯ್ಕೆ ಮಾಡಿ ಅವರಿಂದ ಅದ್ಭುತ ಪ್ರದರ್ಶನ ತೆಗೆಯುವ ಮೂಲಕ ತಂಡಕ್ಕೆ ಯಶಸ್ಸು ತಂದು ಕೊಟ್ಟ ನಾಯಕ ಸೌರವ್ ಗಂಗೂಲಿ. ಯುವ ಆಟಗಾರರಿಗೆ ಬೆಂಬಲವಾಗಿ ನಿಂತು ಅವರಿಗೆ ಸ್ಪೂರ್ತಿಯನ್ನು ನೀಡುತ್ತಿದ್ದರು ಗಂಗೂಲಿ.

ಇತ್ತೀಚೆಗೆ ಭಾರತದ ಅನುಭವಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ನಾಯಕನಾಗಿದ್ದ ಸೌರವ್ ಗಂಗೂಲಿ ತಮ್ಮನ್ನು ಬೆಂಬಲಿಸಿದ ಸಂದರ್ಭವನ್ನು ನೆನಪಿಸಿಕೊಂಡರು. 17ನೇ ವಯಸ್ಸಿಗೆ ನಾಯಕನಾಗಿ ತಂಡಕ್ಕೆ ಸೇರ್ಪಡೆಯಾದ ಪಾರ್ಥಿವ್ ಪಟೇಲ್ 2003 ಆಡಿಲೇಡ್ ಟೆಸ್ಟ್‌ನಲ್ಲಿ ಸ್ಟಂಪ್ ಮಾಡುವ ಅವಕಾಶವನ್ನು ಹೊಂದಿದ್ದರೂ ಅದನ್ನು ಕಳೆದುಕೊಂಡಿದ್ದರು. ಆದರೆ ನಾಯಕ ಗಂಗೂಲಿ ಪಾರ್ಥಿವ್‌ಗೆ ಬೆಂಬಲವಾಗಿದ್ದರು.

ಈ ಬಗ್ಗೆ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಾರ್ಥಿವ್ ಮಾತನಾಡಿದ್ದಾರೆ. ಸೌರವ್ ಗಂಗೂಲಿ ಬೆಂಬಲವಾಗಿ ನಿಂತಿದ್ದ ಹಲವಾರು ಸಂದರ್ಭಗಳು ಇವೆ. ಗಂಗೂಲಿ ನಾಯಕತ್ವದಲ್ಲಿ 2-3ವರ್ಷ ಆಡಿದ್ದೇನೆ. ನಾಯಕನಾಗಿ ಗಂಗೂಲಿ ಯುವ ಆಟಗಾರರನ್ನು ತನ್ನ ರೂಮ್‌ಗೆ ಕರೆದು ಸ್ಪೂರ್ತಿಯನ್ನು ತುಂಬುತ್ತಿದ್ದರು ಎಂದಿದ್ದಾರೆ.

ಅಡಿಲೇಡ್ ಪಂದ್ಯವನ್ನು ನಾವು ಗೆದ್ದು ಬಳಿಕ ಮೆಲ್ಬೋರ್ನ್ ಹಾಗೂ ಸಿಡ್ನಿಗೆ ತೆರಳಿದ್ದೆವು. ಆಗ ಗಂಗೂಲಿ ನಮ್ಮೆಲ್ಲರನ್ನು ಕರೆದು ನಾವೆಲ್ಲಾ ನಮ್ಮ ಊಟವನ್ನು ಜೊತೆಯಾಗಿ ಮಾಡೋಣ ಎಂದಿದ್ದರು. ನಾವೆಲ್ಲಾ ಟೀ ಕುಡಿಯುತ್ತಿರುವಾಗಿ ಅವರು ಬಿಸ್ಕೆಟ್ ಬಾಕ್ಸ್ ಹಿಡಿದು ಬರುತ್ತಿದ್ದರು ಎಂದಿದ್ದಾರೆ.

ಸಂಜೆಯ ವೇಳೆಗೆ ಗಂಗೂಲಿ ನಮ್ಮೆಲ್ಲರನ್ನೂ ಕರೆದು ಎಲ್ಲಾ ಆಟಗಾರರಲ್ಲೂ ಸ್ಪೂರ್ತಿಯನ್ನು ತುಂಬುತ್ತಿದ್ದರು. ಜೊತೆಗೆ ಏನಾದರೂ ಆಗಲಿ ತಂಡದಿಂದ ಕೈಬಿಡುವುದಿಲ್ಲ ಎಂದು ಆಟಗಾರರಿಗೆ ಬೆಂಬಲವನ್ನು ನೀಡುತ್ತಿದ್ದರು ಎಂದು ಪಾರ್ಥಿವ್ ಪಟೆಲ್ ಹೇಳಿದ್ದಾರೆ

Story first published: Monday, July 20, 2020, 10:31 [IST]
Other articles published on Jul 20, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+