Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Pat Cummins: ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಯಕನಾಗಿ ದಾಖಲೆ ಬರೆದ ಕಮಿನ್ಸ್‌

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿದೆ. ಈ ಟೆಸ್ಟ್‌ ಪಂದ್ಯದಲ್ಲಿ ಗೆಲುವು ದಾಖಲಿಸಲು ಉಭಯ ತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ. ಈಗಾಗಲೇ ಉಭಯ ತಂಡಗಳು ಸರಣಿಯಲ್ಲಿ ತಲಾ ಒಂದು ಪಂದ್ಯ ಗೆದ್ದಿರುವುದರಿಂದ ಮೂರನೇ ಪಂದ್ಯ ರೋಚಕತೆ ಹೆಚ್ಚಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಫಾಲೋ ಆನ್‌ನಿಂದ ಬಚಾವ್‌ ಆಗಿದೆ. ಇದೇ ವೇಳೆ ಆಸ್ಟ್ರೇಲಿಯಾದ ನಾಯಕ ಪ್ಯಾಟ್‌ ಕಮಿನ್ಸ್‌ ಭರ್ಜರಿ ಬೌಲಿಂಗ್ ನಡೆಸಿ ದಾಖಲೆಯನ್ನು ಬರೆದಿದದ್ದಾರೆ. ಹಾಗಿದ್ದರೆ ಅವರು ಬರೆದ ದಾಖಲೆಯ ಬಗ್ಗೆ ಮಾಹಿತಿ ಇಲ್ಲಿದೆ.

ಟೀಮ್‌ ಇಂಡಿಯಾ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಫಾಲೋ ಆನ್‌ ಪಡೆಯುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಟೀಮ್ ಇಂಡಿಯಾದ ಕೆಳ ಕ್ರಮಾಂಕದ ಆಟಗಾರರು ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಜಸ್ಪ್ರಿತ್ ಬುಮ್ರಾ ಹಾಗೂ ಆಕಾಶ್ ದೀಪ್‌ ಉತ್ತಮ ಜೊತೆಯಾಟವನ್ನು ನೀಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು. ಇದೇ ವೇಳೆ ಆಸೀಸ್ ನಾಯಕ ಪ್ಯಾಟ್‌ ಕಮಿನ್ಸ್‌ ಅಮೋಘ ಸಾಧನೆಯನ್ನು ಮಾಡಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ ಪಡೆದು ಸಾಧನೆ ಮಾಡಿದ್ದಾರೆ.

Pat Cummins Becomes Third-Highest Wicket-Taker as Test Captain Surpasses Gary Sobers

ಪ್ಯಾಟ್‌ ಕಮಿನ್ಸ್‌ ಅವರ ಸ್ಥಿರ ಪ್ರದರ್ಶನ ಟೂರ್ನಿಯಲ್ಲಿ ಮುಂದುವರೆದಿದೆ. ಇವರು ಆಡಿಲೇಡ್‌ನ ನಾಲ್ಕನೇ ಇನಿಂಗ್ಸ್‌ನಲ್ಲೂ ಐದು ವಿಕೆಟ್‌ ಕಬಳಿಸಿ ಅಬ್ಬರಿಸಿದ್ದರು. ಈ ಮೂಲಕ ತಮ್ಮ ಹೆಸರಿಗೆ ವಿಶೇಷ ದಾಖಲೆಯನ್ನು ಬರೆದುಕೊಂಡಿದ್ದರು. ಆಗ ಕಪಿಲ್‌ ದೇವ್ ದಾಖಲೆ ಅಳಿಸಿದ್ದ ಪ್ಯಾಟ್ ಕಮಿನ್ಸ್‌, ಈಗ ಮತ್ತೊಬ್ಬ ಲೆಜೆಂಡ್ರಿ ಬೌಲರ್‌ ದಾಖಲೆಯನ್ನು ಅಳಿಸಿದರು.

ನಾಯಕನಾಗಿ ಕಮಿನ್ಸ್‌ ಅಬ್ಬರ

ಪ್ಯಾಟ್ ಕಮಿನ್ಸ್ ಅವರು ಟೆಸ್ಟ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಆಟಗಾರ ಎಂಬ ಕೀರ್ತಿಯನ್ನು ತಮ್ಮದಾಗಿಸಿಕೊಂಡರು. ಅವರು ವೆಸ್ಟ್ ಇಂಡೀಸ್ ನ ಶ್ರೇಷ್ಠ ಆಟಗಾರ ಗ್ಯಾರಿ ಸೋಬರ್ಸ್ ಅವರ ದಾಖಲೆಯನ್ನು ಮೀರಿ ನಿಂತಿದ್ದಾರೆ. ಗ್ಯಾರಿ ಸೋಬರ್ಸ್ ನಾಯಕಾನಗಿ 117 ವಿಕೆಟ್‌ಗಳನ್ನು ಪಡೆದಿದ್ದರು. ಕಮಿನ್ಸ್‌ ಇವರ ದಾಖಲೆಯನ್ನು ಮೀರಿ ನಿಂತರು. ಸದ್ಯ ಪ್ಯಾಟ್‌ ಕಮಿನ್ಸ್‌ ಅವರ ಬುಟ್ಟಿಯಲ್ಲಿ 119 ವಿಕೆಟ್‌ಗಳಿವೆ.

Pat Cummins Becomes Third-Highest Wicket-Taker as Test Captain Surpasses Gary Sobers

ಈಗ ಕಮ್ಮಿನ್ಸ್‌ಗಿಂತ ಇಬ್ಬರು ಆಟಗಾರರ ಮುಂದಿದ್ದಾರೆ. ಇದರಲ್ಲಿ ಇಮ್ರಾನ್ ಖಾನ್ (187 ವಿಕೆಟ್) ಮತ್ತು ರಿಚಿ ಬೆನಾಡ್ (138 ವಿಕೆಟ್) ಸೇರಿದ್ದಾರೆ.

ಕಮ್ಮಿನ್ಸ್ 30 ಟೆಸ್ಟ್ ಪಂದ್ಯಗಳಲ್ಲಿ ಆಸೀಸ್ ತಂಡವನ್ನು ಮುನ್ನಡೆಸಿದ್ದು, ಇದರಲ್ಲಿ ಆಸ್ಟ್ರೇಲಿಯಾ 18 ಪಂದ್ಯಗಳನ್ನು ಗೆದ್ದಿದ್ದರೆ, 7 ಪಂದ್ಯಗಳಲ್ಲಿ ಸೋಲು ಕಂಡಿದೆ. ಈ ಅವಧಿಯಲ್ಲಿ ಅವರು 119 ವಿಕೆಟ್ ಪಡೆದಿದ್ದಾರೆ. ಇನ್ನು ಕಮಿನ್ಸ್‌ 8 ಬಾರಿ ಐದಕ್ಕೂ ಹೆಚ್ಚು ವಿಕೆಟ್ ಪಡೆದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.

ಭಾರತ ಹಿನ್ನಡೆ

ಮೂರನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 445 ರನ್‌ ಸೇರಿಸಿತು. ಭಾರತ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್‌ಗೆ 252 ಸೇರಿಸಿದೆ. ಇನ್ನು 193 ರನ್‌ಗಳ ಹಿನ್ನಡೆ ಅನುಭವಿಸುತ್ತಿದೆ.

Story first published: Tuesday, December 17, 2024, 20:00 [IST]
Other articles published on Dec 17, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+