ಆಸ್ಟ್ರೇಲಿಯಾ ತಂಡಕ್ಕೆ ಹೊಸ ನಾಯಕನ ಹೆಸರು ಸೂಚಿಸಿದ ಮಾಜಿ ಕ್ರಿಕೆಟಿಗ ಮೈಕಲ್ ಕ್ಲಾರ್ಕ್

ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಇತ್ತೀಚಿನ ದಿನಗಳಲ್ಲಿ ತನ್ನ ಹಿಂದಿನ ಚಾರ್ಮ್ ಕಳೆದುಕೊಂಡಿರುವುದು ತಿಳಿದೇ ಇದೆ. ಜಗತ್ತಿನ ಯಾವುದೇ ಮೂಲೆಯಲ್ಲೂ ಸೋಲಿಸುವುದು ಅಸಾಧ್ಯ ಎಂಬಂತಿದ್ದ ತಂಡ ಈಗ ಸಾಮಾನ್ಯ ತಂಡದಂತಾಗಿದೆ. ಹೀಗಾಗಿ ನಾಯಕತ್ವದ ಬದಲಾವಣೆಯ ಬಗ್ಗೆ ಕೂಗು ಸಾಕಷ್ಟು ಬಾರಿ ಕೇಳಿ ಬಂದಿದೆ. ಭಾರತದ ವಿರುದ್ಧ ನಡೆದ ಸರಣಿಯಲ್ಲಿ ತವರಿನಲ್ಲೇ ಸೋಲು ಕಂಡ ಬಳಿಕ ನಾಯಕತ್ವದ ಬದಲಾವಣೆಯ ಬಗ್ಗೆ ಮತ್ತಷ್ಟು ಧ್ವನಿ ಹೆಚ್ಚಾಗಿದೆ.
ಆದರೆ ಈ ಸಂದರ್ಭದಲ್ಲಿ ನಾಯಕತ್ವವನ್ನು ಮತ್ತೆ ಸ್ಟೀವ್ ಸ್ಮಿತ್‌ಗೆ ವಹಿಸಬೇಕು ಎಂಬ ಚರ್ಚೆಗಳು ಹೆಚ್ಚಾಗಿ ನಡೆಯುತ್ತದೆ. ಆದರೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ನಾಯಕತ್ವಕ್ಕೆ ಮತ್ತೊಂದು ಹೆಸರನ್ನು ತೇಲಿ ಬಿಟ್ಟಿದ್ದಾರೆ. ಆಸ್ಟ್ರೇಲಿಯಾದ ಮೂರು ಮಾದರಿಗೂ ಈತ ಅತ್ಯಂತ ಸೂಕ್ತವಾದ ನಾಯಕನಾಗಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಕ್ಲಾರ್ಕ್ ಹೇಳಿದ್ದಾರೆ.

ಪ್ಯಾಟ್ ಕಮ್ಮಿನ್ಸ್ ನಾಯಕತ್ವಕ್ಕೆ ಉತ್ತಮ ಆಯ್ಕೆ
ಮೈಕಲ್ ಕ್ಲಾರ್ಕ್ ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗಿಯಾಗಿರುವ ಪ್ಯಾಟ್ ಕಮ್ಮಿನ್ಸ್ ಆಸಿಸ್ ತಂಡದ ಅತ್ಯುತ್ತಮ ನಾಯಕನಾಗಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಮೂರು ಮಾದರಿಯಲ್ಲೂ ಆತ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಬಲ್ಲರು. ಅದಕ್ಕಾಗಿ ಸಮಯ ಬರಬೇಕಿದೆ ಎಂದು ಮೈಕಲ್ ಕ್ಲಾರ್ಕ್ ಹೇಳಿದ್ದಾರೆ.

ಹೇಳಿಕೊಳ್ಳದ ಕಾರಣಕ್ಕೆ ಆತ ಉತ್ತಮ ಅಲ್ಲ ಎಂದಲ್ಲ
"ಪ್ಯಾಟ್ ಕಮ್ಮಿನ್ಸ್ ಯಾವತ್ತಿಗೂ ನಾನು ಮುಂದಿನ ನಾಯಕ, ತಂಡವನ್ನು ಮುನ್ನಡೆಸಲು ನಾನು ಸಿದ್ಧ ಎಂಬಂತ ಹೇಳಿಕೆಯನ್ನು ನೀಡಿಲ್ಲ. ಹಾಗಂದ ಮಾತ್ರಕ್ಕೆ ಆತ ಉತ್ತಮ ನಾಯಕನಲ್ಲ ಎಂದು ಅರ್ಥವಲ್ಲ" ಎಂದು ಮೈಕಲ್ ಕ್ಲಾರ್ಟ್ ಫಾಕ್ಸ್ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಅನುಭವಿಗಳ ಸಹಾಯ ಪಡೆಯಬಹುದು
"ಆತ ಇನ್ನೂ ಯುವಕ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂಡವವನ್ನು ಮುನ್ನಡೆಸಿದ ಅನುಭವ ಆತನಲ್ಲಿ ಇಲ್ಲ. ಆತನ ತನ್ನ ನಾಯಕತ್ವಕ್ಕೆ ಆತ ಅನುಭವಿಗಳ ಸಹಾಯವನ್ನು ಪಡೆದುಕೊಳ್ಳಬಹುದು. ಈಗ ಆತ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಆಡುತ್ತಿದ್ದಾರೆ. ಹಾಗಾಗಿ ಇದು ಆತನಿಗೆ ನಾಯಕತ್ವ ವಹಿಸಲು ಉತ್ತಮ ಸಮಯ, ಖಂಡಿತವಾಗೊಇಯೂ ಆತನಿಗೆ ಉತ್ತಮ ಉಪ ನಾಯಕನ ಅಗತ್ಯವೂ ಇದೆ" ಎಂದಿದ್ದಾರೆ ಮೈಕಲ್ ಕ್ಲಾರ್ಕ್.

ದೇಶೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ ಮಿಂಚಿದ್ದ ಕಮ್ಮಿನ್ಸ್
ಪ್ಯಾಟ್ ಕಮ್ಮಿನ್ಸ್ ಅವರ ನಾಯಕತ್ವದ ಬಗ್ಗೆ ಮೈಕಲ್ ಕ್ಲಾರ್ಕ್ ಹೊಗಳಿಕೆಯ ಮಾತುಗಳನ್ನು ಆಡಲು ಕಾರಣವೂ ಇದೆ. ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ನ್ಯೂಸೌತ್‌ವೇಲ್ಸ್ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸಿದ್ದಾರೆ. ಇದರ ಅನುಭವ ರಾಷ್ಟ್ರೀಯ ತಂಡವನ್ನು ಮುನ್ನಡೆಸಲು ಪ್ಯಾಟ್ ಕಮ್ಮಿನ್ಸ್‌ಗೆ ಸಹಕಾರಿಯಾಗಲಿದೆ ಎಂದು ಕ್ಲಾರ್ಕ್ ಹೇಳಿದ್ದಾರೆ.

ಅನುಭವಿಗಳ ಸಹಾಯ ಪಡೆಯಬಹುದು
"ಆತ ಇನ್ನೂ ಯುವಕ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂಡವವನ್ನು ಮುನ್ನಡೆಸಿದ ಅನುಭವ ಆತನಲ್ಲಿ ಇಲ್ಲ. ಆತನ ತನ್ನ ನಾಯಕತ್ವಕ್ಕೆ ಆತ ಅನುಭವಿಗಳ ಸಹಾಯವನ್ನು ಪಡೆದುಕೊಳ್ಳಬಹುದು. ಈಗ ಆತ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಆಡುತ್ತಿದ್ದಾರೆ. ಹಾಗಾಗಿ ಇದು ಆತನಿಗೆ ನಾಯಕತ್ವ ವಹಿಸಲು ಉತ್ತಮ ಸಮಯ, ಖಂಡಿತವಾಗೊಇಯೂ ಆತನಿಗೆ ಉತ್ತಮ ಉಪ ನಾಯಕನ ಅಗತ್ಯವೂ ಇದೆ" ಎಂದಿದ್ದಾರೆ ಮೈಕಲ್ ಕ್ಲಾರ್ಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications