Pat Cummins: ಹೈದರಾಬಾದ್ ಸೋತರೂ, ನಾಯಕನ ಹೆಸರಿನಲ್ಲಿ ದಾಖಲೆ
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 ರ ಏಳನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಮ್ಮ ಮೊದಲ ಗೆಲುವು ದಾಖಲಿಸಿತು. ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಹೈದರಾಬಾದ್ ತಂಡ ಈ ಪಂದ್ಯದಲ್ಲಿ ಸೋತರೂ ಸಹ, ನಾಯಕ ಮಾತ್ರ ತಮ್ಮ ಹೆಸರಿನಲ್ಲಿ ದಾಖಲೆ ಸೃಷ್ಟಿಸಿದ್ದಾರೆ. ಎಂಎಸ್ ಧೋನಿ ಮತ್ತು ಕೀರನ್ ಪೊಲಾರ್ಡ್ ಹಿಂದಿಕ್ಕಿ ಕಮ್ಮಿನ್ಸ್ ಹೊಸ ಸಾಧನೆ ಮಾಡಿದ್ದಾರೆ.
ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಗಳಿಸಿದ ದಾಖಲೆ ಪ್ಯಾಟ್ ಕಮಿನ್ಸ್ ಹೆಸರಿನಲ್ಲಿದೆ. ಈಗ ಐಪಿಎಲ್ 2025 ರಲ್ಲೂ ಅವರು ತಮ್ಮ ಬ್ಯಾಟಿಂಗ್ ಪರಾಕ್ರಮವನ್ನು ಪ್ರದರ್ಶಿಸಿ ದಾಖಲೆ ನಿರ್ಮಿಸಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 4 ಎಸೆತಗಳಲ್ಲಿ 18 ರನ್ ಗಳಿಸಿದರು. ಐಪಿಎಲ್ 2025 ರಲ್ಲಿ ಎರಡನೇ ಪಂದ್ಯವನ್ನು ಆಡಿದ ಸನ್‌ರೈಸರ್ಸ್ ಹೈದರಾಬಾದ್ ಪರ ನಾಯಕ 6 ನೇ ವಿಕೆಟ್ ಪತನದ ನಂತರ ಕೇವಲ 4 ಎಸೆತಗಳನ್ನು ಮಾತ್ರ ಆಡಿದರು. ಮೊದಲ ಮೂರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ ಅವರು ನಾಲ್ಕನೇ ಎಸೆತದಲ್ಲಿ ಔಟಾದರು.
ಐಪಿಎಲ್ ನಾಯಕನಾಗಿ ಕಮ್ಮಿನ್ಸ್ ಇನ್ನಿಂಗ್ಸ್‌ವೊಂದರಲ್ಲಿ ಅತ್ಯಧಿಕ ಸ್ಟ್ರೈಕ್ ರೇಟ್‌ನಲ್ಲಿ ಸ್ಕೋರ್ ಮಾಡಿದ ದಾಖಲೆಯನ್ನು ಮಾಡಿದ್ದಾರೆ. ಈ ದಾಖಲೆಯ ಪಟ್ಟಿಯಲ್ಲಿ ಎಂಎಸ್ ಧೋನಿ, ಕೀರನ್ ಪೊಲಾರ್ಡ್ ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನು ಹಿಂದಿಕ್ಕಿದ್ದಾರೆ. ಇಷ್ಟೇ ಅಲ್ಲ, ಅವರು ಮತ್ತೊಂದು ಸಾಧನೆಯನ್ನು ಮಾಡಿದ್ದಾರೆ. ಐಪಿಎಲ್‌ನಲ್ಲಿ ಮೊದಲ ಮೂರು ಎಸೆತಗಳಲ್ಲಿ ಸಿಕ್ಸರ್‌ಗಳನ್ನು ಬಾರಿಸಿದ ನಾಲ್ಕನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮೊದಲ 3 ಎಸೆತಗಳಲ್ಲಿ ಸಿಕ್ಸರ್ ಬಾರಿಸಿದವರು
ಸುನಿಲ್ ನರೈನ್ (ಕೆಕೆಆರ್) vs ಆರ್‍ಸಿಬಿ, ಶಾರ್ಜಾ, 2021
ನಿಕೋಲಸ್ ಪೂರನ್ (ಎಲ್‌ಎಸ್‌ಜಿ) vs ಎಸ್‌ಆರ್‍ಹೆಚ್, ಹೈದರಾಬಾದ್, 2023
ಎಂಎಸ್ ಧೋನಿ (ಸಿಎಸ್‌ಕೆ) vs ಎಂಐ, ಮುಂಬೈ, 2024
ಪ್ಯಾಟ್ ಕಮ್ಮಿನ್ಸ್ (ಎಸ್‌ಆರ್‍ಹೆಚ್) vs ಎಲ್‌ಎಸ್‌ಜಿ, ಹೈದರಾಬಾದ್, 2025
ನಾಯಕನಾಗಿ ಐಪಿಎಲ್‌ನಲ್ಲಿ ಅತ್ಯಧಿಕ ಸ್ಟ್ರೈಕ್ ರೇಟ್
ಪ್ಯಾಟ್ ಕಮ್ಮಿನ್ಸ್- 450 (ಎಸ್‌ಆರ್‍ಹೆಚ್) vs ಎಲ್‌ಎಸ್‌ಜಿ, ಹೈದರಾಬಾದ್, 2025
ರವಿಚಂದ್ರನ್ ಅಶ್ವಿನ್- 425 (ಪಿಬಿಕೆಎಸ್) vs ಆರ್‍ಆರ್, ಮೊಹಾಲಿ, 2019
ಎಂಎಸ್ ಧೋನಿ- 400 (ಸಿಎಸ್‌ಕೆ) vs ಎಲ್‌ಎಸ್‌ಜಿ, ಚೆನ್ನೈ, 2023
ಕೀರನ್ ಪೊಲಾರ್ಡ್- 400 (ಎಂಐ) vs ಆರ್‍ಸಿಬಿ, ಅಬುಧಾಬಿ, 2020
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications