For Quick Alerts
ALLOW NOTIFICATIONS  
For Daily Alerts
 

IPL 2026: ಕಮಿನ್ಸ್‌ ಐಪಿಎಲ್‌ ಆಡದಿದ್ದರೆ, ಈ ಪ್ಲೇಯರ್‌ಗಳಿಗೆ SRH ಗಾಳ

ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಹಾಗೂ ನಾಯಕ ಪ್ಯಾಟ್‌ ಕಮಿನ್ಸ್‌ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವೆಸ್ಟ್‌ ಇಂಡೀಸ್ ಪ್ರವಾಸದಲ್ಲಿ ಇವರು ಗಾಯಕ್ಕೆ ತುತ್ತಾಗಿದ್ದರು. ಇವರು ಆಷಸ್‌ ಟೆಸ್ಟ್‌ ಸರಣಿಯನ್ನು ಸಹ ಗಾಯದ ಕಾರಣದಿಂದ ಮಿಸ್‌ ಮಾಡಿಕೊಂಡಿದ್ದರು. ಮೂರನೇ ಟೆಸ್ಟ್‌ನಲ್ಲಿ ಕಾಣಿಸಿಕೊಂಡು ಸ್ಥಿರ ಪ್ರದರ್ಶನ ನೀಡಿದ್ದರು.

ಪ್ಯಾಟ್‌ ಕಮಿನ್ಸ್ ಅವರ ಗಾಯ ಉಲ್ಬಣವಾಗುವ ದೃಷ್ಟಿಯಿಂದ ನಾಲ್ಕನೇ ಹಾಗೂ ಐದನೇ ಟೆಸ್ಟ್‌ ಪಂದ್ಯದಿಂದ ಕಮಿನ್ಸ್‌ ಅವರನ್ನು ಕೈ ಬಿಡಲಾಯಿತು. ಇವರ ಅನುಪಸ್ಥಿತಿಯಲ್ಲಿ ಭರವಸೆಯ ಬ್ಯಾಟರ್‌ ಸ್ಟೀವನ್ ಸ್ಮಿತ್ ತಂಡವನ್ನು ಮುನ್ನಡೆಸಿದರು. ಸದ್ಯ ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನತ್ತ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಅಲ್ಲದೆ ದಕ್ಷಿಣ ಆಫ್ರಿಕಾದಲ್ಲಿ 2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ತಮ್ಮನ್ನು ತಾವು ಫಿಟ್ ಆಗಿಟ್ಟುಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ. ಈ ಎಲ್ಲ ಅಂಶಗಳನ್ನು ನೋಡಿದಾಗ ಇವರು ಐಪಿಎಲ್‌ನ್ನು ಸಹ ಬಿಡಬಹುದು ಎಂಬ ಲೆಕ್ಕಾಚಾರಗಳು ಆರಂಭವಾಗಿವೆ.

Pat Cummins Likely to Skip IPL Due to Injury Top 3 Replacements for SRH Revealed

ಆಸ್ಟ್ರೇಲಿಯಾದ ನಾಯಕ ಪ್ಯಾಟ್‌ ಕಮಿನ್ಸ್ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಪ್ಯಾಟ್‌ ವರ್ಕ್‌ ಲೋಡ್‌ ಮ್ಯಾನೇಜ್ಮೆಂಟ್‌ ದೃಷ್ಟಿಯಿಂದ ಐಪಿಎಲ್‌ನಿಂದ ಹೊರ ಹೋಗುವ ತೀರ್ಮಾನ ಮಾಡಿದರೆ, ಸನ್‌ ತಂಡಕ್ಕೆ ದೊಡ್ಡ ಪೆಟ್ಟು ಬೀಳಲಿದೆ. ಒಂದು ವೇಳೆ ಹೀಗೆ ಆದಲ್ಲಿ ಸನ್‌ ತಂಡ ಬೇರೆ ಆಟಗಾರನ ಹುಡುಕಾಟ ನಡೆಸಬೇಕಾಗುತ್ತದೆ. ಆಗ ಅನ್‌ ಸೋಲ್ಡ್‌ ಪಟ್ಟಿಯಲ್ಲಿದ್ದ ಆಟಗಾರರಿಗೆ ಮಣೆ ಹಾಕಬೇಕು. ಪ್ಯಾಟ್‌ ಸ್ಥಾನ ತುಂಬಬಲ್ಲ ಮೂವರು ಆಟಗಾರರ ಬಗ್ಗೆ ವರದಿ ಇಲ್ಲಿದೆ.

ಜೆರಾಲ್ಡ್ ಕೋಟ್ಜಿ

ಪ್ಯಾಟ್‌ ಐಪಿಎಲ್‌ಗೆ ಅಲಭ್ಯರಾದಲ್ಲಿ ಸನ್‌ ತಂಡ ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ ಜೆರಾಲ್ಡ್ ಕೋಟ್ಜಿ ಅವರಿಗೆ ಮಣೆ ಹಾಕಬಹುದಾಗಿದೆ. ಇವರು ಕೆಳ ಕ್ರಮಾಂಕದಲ್ಲಿ ಸ್ಥಿರ ಬ್ಯಾಟಿಂಗ್ ನಡೆಸುವ ಕ್ಷಮತೆ ಹೊಂದಿದ್ದಾರೆ. ಇವರು ಪ್ಯಾಟ್‌ ಸ್ಥಾನ ತುಂಬಲ್ಲ ಪ್ರತಿಭೆ. ಇವರು ಐಪಿಎಲ್‌ನಲ್ಲಿ ಆಡಿದ 14 ಪಂದ್ಯಗಳಲ್ಲಿ 15 ವಿಕೆಟ್‌ ಕಬಳಿಸಿದ್ದಾರೆ.

ಸೀನ್ ಅಬೋಟ್‌

ಪ್ಯಾಟ್‌ ಅವರ ಸ್ಥಾನವನ್ನು ತುಂಬ ಬಲ್ಲ ಇನ್ನೋರ್ವ ಆಟಗಾರ ಎಂದರೆ, ಆಸ್ಟ್ರೇಲಿಯಾದ ಸೀನ್‌ ಅಬೋಟ್. ಇವರು ಈಗಾಗಲೇ ಎಸ್‌ಆರ್‌ಎಚ್‌ ತಂಡದ ಪರ ಆಡಿದ ಅನುಭವ ಹೊಂದಿದ್ದಾರೆ. ಇವರು ನ್ಯೂಜಿಲೆಂಡ್‌ ವಿರುದ್ಧ ನೀಡಿರುವ ಪ್ರದರ್ಶನವನ್ನು ಗಮನಿಸಿ ಇವರಿಗೆ ಫ್ರಾಂಚೈಸಿ ಮಣೆ ಹಾಕಬಹುದಾಗಿದೆ.

ವಿಲಿಯಂ ಓರೂಕ್‌

ನ್ಯೂಜಿಲೆಂಡ್ ತಂಡದ 24 ವರ್ಷ ಯುವ ವೇಗದ ಬೌಲರ್‌ ವಿಲಯಂ ಓರೂಕ್‌ ಅವರ ಮೇಲೂ ತಂಡ ಚಿತ್ತ ನೆಟ್ಟಿದೆ. ಇವರು ಕಿವೀಸ್‌ ಪರ ಆಡಿದ 7 ಟಿ20 ಪಂದ್ಯಗಳಲ್ಲಿ 7 ವಿಕೆಟ್‌ ಪಡೆದಿದ್ದಾರೆ. ಇವರು ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್‌ ಜೈಂಟ್ಸ್ ತಂಡದ ಭಾಗವಾಗಿದ್ದರು. ಎಸ್‌ಆರ್‌ಎಚ್‌ ಸ್ವಿಂಗ್‌ ಬೌಲರ್‌ ಹುಡುಕಾಟದಲ್ಲಿದ್ದರೆ ಇವರು ಸಹ ಉತ್ತಮ ಆಯ್ಕೆ. ಇವರು ಈಗಾಗಲೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.

Story first published: Monday, December 29, 2025, 16:04 [IST]
Other articles published on Dec 29, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+