T20 World Cup 2024: ಟಿ20 ವಿಶ್ವಕಪ್ ಇತಿಹಾಸದಲ್ಲಿ ಸಂಚಲನ ಮೂಡಿಸಿದ ಪ್ಯಾಟ್ ಕಮಿನ್ಸ್ ಬೌಲಿಂಗ್!
ಜೂನ್ 21 ಶುಕ್ರವಾರ, ಆಸ್ಟ್ರೇಲಿಯಾದ ಸ್ಟಾರ್ ವೇಗದ ಬೌಲರ್ ಹಾಗು ಮಾಜಿ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಬಾಂಗ್ಲಾದೇಶ ವಿರುದ್ಧದ 2024ರ ಟಿ 20 ವಿಶ್ವಕಪ್‌ನ ಸೂಪರ್ -8ರ ಪಂದ್ಯದಲ್ಲಿ ತಮ್ಮ ಬೌಲಿಂಗ್ ಪ್ರದರ್ಶನದ ಮೂಲಕ ಸಂಚಲನ ಮೂಡಿಸಿದರು.
ಆಂಟಿಗುವಾದ ನಾರ್ತ್ ಸೌಂಡ್‌ನಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ 2024ರ ಟಿ20 ವಿಶ್ವಕಪ್‌ನ ಸೂಪರ್-8 ಪಂದ್ಯದಲ್ಲಿ ಮಳೆ ಅಡ್ಡಿಪಡಿಸಿದ ಕಾರಣ ಆಸ್ಟ್ರೇಲಿಯಾ ಡಕ್‌ವರ್ತ್ ಲೂಯಿಸ್ (ಡಿಎಲ್‌ಎಸ್) ನಿಯಮದ ಅಡಿಯಲ್ಲಿ ಬಾಂಗ್ಲಾದೇಶವನ್ನು 28 ರನ್‌ಗಳಿಂದ ಸೋಲಿಸಿದೆ. ಇದೇ ಪಂದ್ಯದಲ್ಲಿ ಆಸೀಸ್ ವೇಗಿ ಪ್ಯಾಟ್ ಕಮ್ಮಿನ್ಸ್ ಅವರು ಅದ್ಭುತ ಸಾಧನೆ ಮಾಡಿದರು.

ಪ್ಯಾಟ್ ಕಮಿನ್ಸ್ 2024ರ ಟಿ 20 ವಿಶ್ವಕಪ್‌ನಲ್ಲಿ ತಮ್ಮ ಮೊದಲ ಹ್ಯಾಟ್ರಿಕ್ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಈ ಮೂಲಕ ಪ್ಯಾಟ್ ಕಮಿನ್ಸ್ ಟಿ20 ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಆಸ್ಟ್ರೇಲಿಯಾದ ಎರಡನೇ ಹಾಗೂ ವಿಶ್ವದ ಏಳನೇ ಬೌಲರ್ ಎನಿಸಿಕೊಂಡರು.
ಪ್ಯಾಟ್ ಕಮ್ಮಿನ್ಸ್ ಅವರಿಗೂ ಮೊದಲು, ಮಾಜಿ ವಿಶ್ವ ಶ್ರೇಷ್ಠ ವೇಗದ ಬೌಲರ್ ಬ್ರೆಟ್ ಲೀ ಅವರು 2007ರ ಆರಂಭಿಕ ಆವೃತ್ತಿ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಪರ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.
ಆಸ್ಟ್ರೇಲಿಯಾದ 31 ವರ್ಷದ ಆಟಗಾರ ಕಮ್ಮಿನ್ಸ್ ಅವರು ಡೆತ್ ಓವರ್‌ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದರು. 18ನೇ ಓವರ್‌ನ ಕೊನೆಯ ನಾಲ್ಕನೇ ಎಸೆತದಲ್ಲಿ ಮಹ್ಮುದುಲ್ಲಾ (2) ಮತ್ತು ಐದನೇ ಎಸೆತದಲ್ಲಿ ಮಹೇದಿ ಹಸನ್ (0) ಅವರನ್ನು ಔಟ್ ಮಾಡಿದರು.
ಇದರ ನಂತರ, ಕಮ್ಮಿನ್ಸ್ ತಮ್ಮ ಮುಂದಿನ ಓವರ್ ಬೌಲ್ ಮಾಡಲು ಬಂದಾಗ ಮೊದಲ ಎಸೆತದಲ್ಲಿ ವಿಕೆಟ್ ಪಡೆಯುವ ಮೂಲಕ ತಮ್ಮ ಹ್ಯಾಟ್ರಿಕ್ ಪೂರ್ಣಗೊಳಿಸಿದರು. 20ನೇ ಓವರ್‌ನ ಮೊದಲ ಎಸೆತದಲ್ಲಿ ತೌಹೀದ್ ಹೃದಯ (40) ವಿಕೆಟ್ ಪಡೆಯುವ ಮೂಲಕ ಕಮ್ಮಿನ್ಸ್ ಹ್ಯಾಟ್ರಿಕ್ ಸಾಧನೆ ಮಾಡಿದರು. ತಮ 4 ಓವರ್‌ಗಳ ಕೋಟಾದಲ್ಲಿ 29 ರನ್ ನೀಡಿ 3 ವಿಕೆಟ್ ಪಡೆದರು.
ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್‌ಗಳು
ಬ್ರೆಟ್ ಲೀ (ಆಸ್ಟ್ರೇಲಿಯಾ) ವಿರುದ್ಧ ಬಾಂಗ್ಲಾದೇಶ, ಕೇಪ್ ಟೌನ್, 2007
ಕರ್ಟಿಸ್ ಕ್ಯಾಂಫರ್ (ಐರ್ಲೆಂಡ್) ವಿರುದ್ಧ ನೆದರ್ಲ್ಯಾಂಡ್ಸ್, ಅಬುಧಾಬಿ, 2021
ವನಿಂದು ಹಸರಂಗಾ (ಶ್ರೀಲಂಕಾ) ವಿರುದ್ಧ ದಕ್ಷಿಣ ಆಫ್ರಿಕಾ, ಶಾರ್ಜಾ, 2021
ಕಗಿಸೊ ರಬಾಡ (ದಕ್ಷಿಣ ಆಫ್ರಿಕಾ) ವಿರುದ್ಧ ಇಂಗ್ಲೆಂಡ್, ಶಾರ್ಜಾ, 2021
ಕಾರ್ತಿಕ್ ಮೇಯಪ್ಪನ್ (ಯುಎಇ) ವಿರುದ್ಧ ಶ್ರೀಲಂಕಾ, ಗೀಲಾಂಗ್, 2022
ಜೋಶುವಾ ಲಿಟಲ್ (ಐರ್) ವಿರುದ್ಧ ನ್ಯೂಜಿಲೆಂಡ್, ಅಡಿಲೇಡ್, 2022
ಪ್ಯಾಟ್ ಕಮ್ಮಿನ್ಸ್ (ಆಸ್) ವಿರುದ್ಧ ಬಾಂಗ್ಲಾದೇಶ, ಆಂಟಿಗುವಾ, 2024
ಟಿ20 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್‌ಗಳು
ಬ್ರೆಟ್ ಲೀ ವಿರುದ್ಧ ಬಾಂಗ್ಲಾದೇಶ, ಕೇಪ್ ಟೌನ್, 2007
ಆಷ್ಟನ್ ಅಗರ್ ವಿರುದ್ಧ ದಕ್ಷಿಣ ಆಫ್ರಿಕಾ, ಜೋಹಾನ್ಸ್‌ಬರ್ಗ್, 2020
ನಾಥನ್ ಎಲ್ಲಿಸ್ ವಿರುದ್ಧ ಬಾಂಗ್ಲಾದೇಶ, ಮೀರ್ಪುರ್, 2021
ಪ್ಯಾಟ್ ಕಮ್ಮಿನ್ಸ್ ವಿರುದ್ಧ ಬಾಂಗ್ಲಾದೇಶ, ಆಂಟಿಗುವಾ, 2024
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications