For Quick Alerts
ALLOW NOTIFICATIONS  
For Daily Alerts
 

ಬಾರ್ಡರ್ ಗವಾಸ್ಕರ್ ಟ್ರೋಫಿ 2024: ನಾನು ಪಕ್ಕಾ ಟೀಮ್ ಇಂಡಿಯಾ ಸ್ಟಾರ್ ಬೌಲರ್ ಅಭಿಮಾನಿ ಎಂದ ಪ್ಯಾಟ್ ಕಮ್ಮಿನ್ಸ್

ಪ್ರಸ್ತುತ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಸರಣಿ ನಂತರ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಪ್ರವಾಸದ ವೇಳೆ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಭಾರತಕ್ಕೆ ಉತ್ತಮ ಅಭ್ಯಾಸವಾಗಲಿದೆ. ಏಕೆಂದರೆ ವಿದೇಶಿ ನೆಲದಲ್ಲಿ ಟೀಮ್ ಇಂಡಿಯಾ ಆಟಗಾರರು ಪ್ರದರ್ಶನದ ಮೇಲೆ ಭಾರೀ ನಿರೀಕ್ಷೆಯಿದೆ. ಅದರಲ್ಲೂ ಕಾಂಗೂರು ನೆಲದಲ್ಲಿ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಅವರ ಹೇಗೆ ಆಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಹೀಗಾಗಿ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಆರಂಭಕ್ಕೂ ಮುನ್ನ ಈ ಆಟಗಾರರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಆಸ್ಟ್ರೇಲಿಯಾ ನಾಯಕನಿಗೆ ಬೇರೆ ಆಟಗಾರರ ಭಯ ಇರುವಂತೆ ಕಾಣುತ್ತಿದೆ.

Pat Cummins said that I am a fan of Team India star fast bowler

ಯಾರ ಭಯದಲ್ಲಿ ಆಸ್ಟ್ರೇಲಿಯಾ?

ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ವಿಶೇಷ ತಯಾರಿ ನಡೆಸಿದ್ದಾರೆ. ಈ ಸರಣಿಗೂ ಮುನ್ನ ಅವರು ಸುದೀರ್ಘ ವಿರಾಮ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸರಣಿಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ಯಾಟ್ ಕಮ್ಮಿನ್ಸ್, 'ನಾನು ಜಸ್ಪ್ರೀತ್ ಬುಮ್ರಾ ಅವರ ದೊಡ್ಡ ಅಭಿಮಾನಿ. ನನ್ನ ಪ್ರಕಾರ ಅವರೊಬ್ಬ ಶ್ರೇಷ್ಠ ಬೌಲರ್. ನಾವು ಅವರನ್ನು ಎದುರಿಸುವಲ್ಲಿ ಯಶಸ್ವಿಯಾದರೆ ಈ ಸರಣಿಯನ್ನು ಗೆಲ್ಲುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾವು ಅವರ ವಿರುದ್ಧ ಕಳೆದ ಎರಡು ಸರಣಿಗಳನ್ನು ಆಡಿ ಬಹಳ ಸಮಯವಾಗಿದೆ. ಈಗ ಅದರಿಂದ ಚೇತರಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ರೋಹಿತ್ ಬಗ್ಗೆ ಹೇಳಿದ್ದೇನು?

ಇದೇ ವೇಳೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಗ್ಗೆ ಕೂಡ ಪ್ಯಾಟ್ ಮಾತನಾಡಿದ್ದಾರೆ. 'ನಾನು ರೋಹಿತ್ ಶರ್ಮಾ ಅವನೊಂದಿಗೆ ತಂಡದಲ್ಲಿ ಎಂದಿಗೂ ಆಡಲಿಲ್ಲ. ಆದ್ದರಿಂದ ನನಗೆ ಅವರ ಬಗ್ಗೆ ಚೆನ್ನಾಗಿ ತಿಳಿದಿಲ್ಲ. ಆದರೆ ಟೀಮ್ ಇಂಡಿಯಾ ತುಂಬಾ ಸಂಘಟಿತವಾಗಿದೆ. ಅವರ ಯೋಜನೆಗಳು ಸ್ಪಷ್ಟವಾಗಿವೆ ಎಂದಿದ್ದಾರೆ. ಇದಲ್ಲದೇ, ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಚೇತೇಶ್ವರ್ ಪೂಜಾರ ಅವರನ್ನು ಶ್ಲಾಘಿಸಿದ ಕಮ್ಮಿನ್ಸ್, ಅವರ ವಿರುದ್ಧ ಆಡುವುದು ಯಾವಾಗಲೂ ಅದ್ಭುತವಾಗಿದೆ ಎಂದು ಹೊಗಳಿದ್ದಾರೆ.

ಕಳೆದ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದಿತ್ತು. ಈ ಫೈನಲ್ ಪಂದ್ಯದಲ್ಲಿ ಬುಮ್ರಾ ಗಾಯದ ಕಾರಣ ತಂಡದ ಭಾಗವಾಗಿರಲಿಲ್ಲ. ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಬುಮ್ರಾ ಅವರನ್ನು ಎದುರಿಸಿತ್ತು. ಮೆಗಾ ಟೂರ್ನಿಯಲ್ಲಿ ಬುಮ್ರಾ ತಮ್ಮ ಉರಿ ಬೌಲಿಂಗ್ ಮೂಲಕ ಆಸ್ಟ್ರೇಲಿಯಾದ ಎಲ್ಲಾ ಭರವಸೆಗಳನ್ನು ಧ್ವಂಸಗೊಳಿಸಿದ್ದರು. ಇದೀಗ ಬುಮ್ರಾ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Story first published: Wednesday, October 16, 2024, 7:26 [IST]
Other articles published on Oct 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+