Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2001ರ ಬಳಿಕ ಇಂಗ್ಲೆಂಡ್ ನೆಲದಲ್ಲಿ ಆಶಸ್ ಗೆದ್ದಿಲ್ಲ ಆಸಿಸ್: ಈಗ ನಮ್ಮ ಮುಂದಿರುವುದು ಅದೇ ಗುರಿ ಎಂದ ಪ್ಯಾಟ್ ಕಮ್ಮಿನ್ಸ್

ಆಶಸ್ ಸರಣಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಎರಡು ತಂಡಗಳು ಕೂಡ ಕೊನೆಯ ಹಂತದ ಸಿದ್ಧತೆ ಮಾಡಿಕೊಂಡಿದ್ದು ಪಂದ್ಯಕ್ಕೆ ಕಣಕ್ಕಿಳಿಯಲು ಸಿದ್ಧವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಪಟ್ಟಕ್ಕೇರಿರುವ ಆಸ್ಟ್ರೇಲಿಯಾ ತಂಡ 2021-22ರಲ್ಲಿ ತವರಿನಲ್ಲಿ ನಡೆದ ಆಶಸ್ ಸರಣಿಯನ್ನು 4-0 ಅಂತರದಿಂದ ಗೆದ್ದು ಆಶಸ್ ಸರಣಿಯನ್ನು ಪ್ರಸ್ತುತ ತನ್ನ ಬಳಿಯಲ್ಲಿಟ್ಟುಕೊಂಡಿದೆ. ಆದರೆ ಇಂಗ್ಲೆಂಡ್ ನೆಲದಲ್ಲಿ ಆಸ್ಟ್ರೇಲಿಯಾ ಆಶಸ್ ಗೆಲ್ಲದೆ ಬರೊಬ್ಬರಿ 22 ವರ್ಷಗಳೇ ಕಳೆದುಹೋಗಿದೆ.

ಇಂಗ್ಲೆಂಡ್ ನೆಲದಲ್ಲಿ ನಾಲ್ಕು ಆಶಸ್ ಸರಣಿಗಳನ್ನು ಕಳೆದುಕೊಂಡ ಬಳಿಕ 2019ರಲ್ಲಿ 2-2 ಅಂತರದಿಂದ ಸರಣಿಯನ್ನು ಡ್ರಾ ಮಾಡಿಕೊಂಡಿರುವುದು ಅದರ ಶ್ರೇಷ್ಠ ಸಾಧನೆಯಾಗಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಪ್ಯಾಟ್ ಕಮ್ಮಿನ್ಸ್ ಇಂಗ್ಲೆಂಡ್ ನೆಲದಲ್ಲಿ ಸುದೀರ್ಘ ಕಾಲದಿಂದ ಆಶಸ್ ಗೆಲ್ಲದಿರುವುದು ತಮ್ಮ ಟ್ರೋಫಿಗಳ ಕೋಣೆಯಲ್ಲಿ ಏನೋ ಕಳೆದುಕೊಂಡಂತೆ ಎಂದಿದ್ದಾರೆ. ಅಲ್ಲದೆ ಇಂಗ್ಲೆಂಡ್ ನೆಲದಲ್ಲಿ ಆಶಸ್ ಗೆಲ್ಲುವುದು ನಮ್ಮ ತಂಡದ ಗುರಿಯಾಗಿದೆ ಎಂದಿದ್ದಾರೆ.

Pat Cummins said winning Ashes in England is the aim for our group

ಜೂನ್ 16ರಿಂದ ನಡೆಯಲಿರುವ ಎಡ್ಜ್‌ಬಾಸ್ಟನ್ ಟೆಸ್ಟ್‌ಗೆ ಕಮ್ಮಿನ್ಸ್ ಆಸ್ಟ್ರೇಲಿಯಾದ ಆಡುವ ಬಳಗವನ್ನು ಬಹಿರಂಗಪಡಿಸಲು ಹಿನದೇಟು ಹಾಕಿದ್ದಾರೆ. ಆದರೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಕಣಕ್ಕಿಳಿಯಲು ಜೋಶ್ ಹ್ಯಾಜಲ್‌ವುಡ್ ಫಿಟ್ ಆಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

"ನಮ್ಮ ಆಡುವ ಬಳಗ ಈಗಾಗಲೇ ಸಿದ್ಧವಿದೆ. ಆದರೆ ನಾವು ಅದನ್ನು ನಾಳೆ ಘೋಷಿಸುತ್ತೇವೆ. ಕಳೆದ ವಾರದ ದೊಡ್ಡ ಸುದ್ದಿಯೆಂದರೆ ಜೋಶ್ ಹ್ಯಾಜಲ್‌ವುಡ್ ಈಗ ಆಡಲು ಲಭ್ಯವಿದ್ದಾರೆ" ಎಂದು ಪ್ಯಾಟ್ ಕಮ್ಮಿನ್ಸ್ ಆಡುವ ಬಳಗದ ವಿಚಾರವಾಗಿ ಮಾಹಿತಿ ನೀಡಿದ್ದಾರೆ.

ಈ ಸರಣಿಯ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದಾರೆ. ಈ ಬಾರಿಯ ಆಶಸ್ ಸರಣಿಯಲ್ಲಿ ಡೇವಿಡ್ ವಾರ್ನರ್ ಅವರನ್ನು ಬೇರೆಯದ್ದೇ ರೂಪದಲ್ಲಿ ನೀಡಲಿದ್ದೀರಿ ಎಂಬ ವಿಶ್ವಾಸದ ಮಾತುಗಳನ್ನಾಡಿದ್ದಾರೆ ಪ್ಯಾಟ್ ಕಮ್ಮಿನ್ಸ್.

ಡೇವಿಡ್ ವಾರ್ನರ್ ಇತ್ತೀಚೆಗೆ ಟೆಸ್ಟ್ ಮಾದರಿಯಲ್ಲಿ ಅತ್ಯಂತ ಕಠಿಣ ಫಾರ್ಮ್‌ನಲ್ಲಿದ್ದಾರೆ. ಕಳೆದ 17 ಇನ್ನಿಂಗ್ಸ್‌ನಲ್ಲಿ ವಾರ್ನರ್ ಕೇವಲ ಒಂದು ಅರ್ಧ ಶತಕವನ್ನು ಮಾತ್ರವೇ ಬಾರಿಸಿದ್ದಾರೆ. ಅಲ್ಲದೆ 2019ರಲ್ಲಿ ಆಶಸ್ ಸರಣಿಗಾಗಿ ಆಸ್ಟ್ರೇಲಿಯಾ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಂಡಿದ್ದಾಗಲೂ ಕಳಪೆ ಪ್ರದರ್ಶನ ನೀಡಿದ್ದರು. ವಾರ್ನರ್ ಅವರನ್ನು ಬ್ರಾಡ್ ಸಂಪೂರ್ಣವಾಗಿ ನಿಯಂತ್ರಿಸಿದ್ದರು. 2019ರ ಆ ಸರಣಿಯಲ್ಲಿ ಆರಂಭಿಕ ಆಟಗಾರ ವಾರ್ನರ್ 9.5 ಸರಾಸರಿಯಲ್ಲಿ ಕೇವಲ 95 ರನ್ ಗಳಿಸಿದ್ದರು. ಇಂಗ್ಲಿಷ್ ವೇಗಿ ಸ್ಟುವರ್ಟ್ ಬ್ರಾಡ್ ವಾರ್ನರ್ ಅವರನ್ನು ಏಳು ಬಾರಿ ಔಟ್ ಮಾಡಿದರು.

ಇನ್ನು ಆಶಸ್ ಸರಣಿಯ ಮೊದಲ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಎರಡು ದಿನಗಳ ಮುನ್ನವೇ ಆಡುವ 11ರ ಬಳಗವನ್ನು ಇಂಗ್ಲೆಂಡ್ ತಂಡ ಪ್ರಕಟಿಸಿದೆ. ಈ ತಂಡದಲ್ಲಿ ಸ್ಟುವರ್ಟ್ ಬ್ರಾಡ್ ಹಾಗೂ ಜೇಮ್ಸ್ ಆಂಡರ್ಸನ್ ಇಬ್ಬರು ಕೂಡ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಟೆಸ್ಟ್‌ ಮಾದರಿಯಲ್ಲಿ ನಿವೃತ್ತಿಯಿಂದ ವಾಪಾಸಾಗಿರುವ ಮೊಯೀನ್ ಅಲಿ ಕೂಡ ಆಡುವ ಬಳಗದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ಸ್ಕ್ವಾಡ್: ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಜಲ್ವುಡ್, ಸ್ಕಾಟ್ ಬೋಲ್ಯಾಂಡ್, ಟಾಡ್ ಮರ್ಫಿ, ಜೋಶ್ ಇಂಗ್ಲಿಸ್, ಮ್ಯಾಟ್ ರೆನ್ಶಾ, ಮಾರ್ಕಸ್ ಹ್ಯಾರಿಸ್

ಇಂಗ್ಲೆಂಡ್ ಆಡುವ ಬಳಗ: ಬೆನ್ ಡಕೆಟ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೊನಾಥನ್ ಬೈರ್‌ಸ್ಟೋವ್, ಮೊಯಿನ್ ಅಲಿ, ಸ್ಟುವರ್ಟ್ ಬ್ರಾಡ್, ಆಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್.

Story first published: Thursday, June 15, 2023, 23:56 [IST]
Other articles published on Jun 15, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+