For Quick Alerts
ALLOW NOTIFICATIONS  
For Daily Alerts
 

Pat Cummins: ಕಪಿಲ್‌ ದೇವ್‌ ಅವರ ದಾಖಲೆ ಅಳಿಸಿದ ಪ್ಯಾಟ್ ಕಮಿನ್ಸ್‌

ಡೇ ಆಂಡ್‌ ನೈಟ್‌ ಟೆಸ್ಟ್‌ ಆಡಿಲೇಡ್‌ನಲ್ಲಿ ನಡೆಯುತ್ತಿದೆ. ಟಾಸ್‌ ಗೆದ್ದ ಭಾರತ ಮೊದಲು ಬ್ಯಾಟ್ ಮಾಡಿತು. ಈ ವೇಳೆ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ವಿಫಲರಾದರು. ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 180 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಭರ್ಜರಿ ಪ್ರದರ್ಶನ ನೀಡಿತು. ಟ್ರಾವಿಸ್‌ ಹೆಡ್‌ ಶತಕ ಬಾರಿಸಿ ತಂಡಕ್ಕೆ ನೆರವಾದರು. ಅಲ್ಲದೆ ತಂಡದ ಮೊತ್ತವನ್ನು 337 ರನ್‌ಗಳಿಗೆ ಆಲೌಟ್‌ ಆಯಿತು.

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ 157 ರನ್‌ಗಳ ಮುನ್ನಡೆ ಸಾಧಿಸಿತು. ಈ ಬಳಿಕ ಎರಡನೇ ಇನಿಂಗ್ಸ್‌ ಆರಂಭಿಸಿದ ಟೀಮ್ ಇಂಡಿಯಾ ತಾನು ಮೊದಲ ಇನಿಂಗ್ಸ್‌ನಲ್ಲಿ ಮಾಡಿದ ತಪ್ಪನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ವಿಫಲವಾಯಿತು. ಆರಂಭಿಕರು ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಆರಂಭಿಕರು ಕಳಪೆ ಆಟದ ಹೊರತಾಗಿಯೂ ಚೇತರಿಕೆಯ ವಿಶ್ವಾಸ ಟೀಮ್ ಇಂಡಿಯಾದ್ದಾಗಿತು. ಆದರೆ ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರರು ಸಹ ರನ್‌ ಕಲೆ ಹಾಕುವಲ್ಲಿ ವಿಫಲರಾಗಿ ಪೆವಿಲಿಯನ್ ಸೇರಿದರು.

Pat Cummins Surpasses Kapil Dev India Struggles Against Australia in Adelaide Test

ಪ್ಯಾಟ್‌ ಕಮಿನ್ಸ್ ದಾಖಲೆ

ಇದೇ ವೇಳೆ ಮೊದಲ ಟೆಸ್ಟ್‌ನಲ್ಲಿ ತಂಡದಿಂದ ದೂರ ಉಳಿದಿದ್ದ ರೋಹಿತ್ ಶರ್ಮಾ ಎರಡನೇ ಟೆಸ್ಟ್‌ ಮೊದಲ ಇನಿಂಗ್ಸ್‌ನಲ್ಲಿ ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ದೊಡ್ಡ ಆಟವನ್ನು ಸೂಚನೆ ನೀಡಿದರು. ಆದರೆ ಈ ಪ್ರಯತ್ನ ಸಹ ಕೈ ಹಿಡಿಯಲ್ಲಿ. ಇವರ ಬಿಗ್ ಇನಿಂಗ್ಸ್ ಕಟ್ಟುವ ಆಸೆಗೆ ಪ್ಯಾಟ್ ಕಮಿನ್ಸ್ ತೆರೆ ಏಳೆದರು,

ಕಮ್ಮಿನ್ಸ್ ಅವರ ಉತ್ತಮ ಲೈನ್ ಹಾಗೂ ಲೆಂಥ್ ಎಸೆತವನ್ನು ಅರಿಯುವಲ್ಲಿ ರೋಹಿತ್ ಶರ್ಮಾ ವಿಫಲರಾದರು. ಆಸೀಸ್‌ ನಾಯಕ, ಟೀಮ್ ಇಂಡಿಯಾ ನಾಯಕನಿಗೆ ಖೆಡ್ಡಾ ತೋಡಿದರು. ಒಳ ಬರುತ್ತಿದ್ದ ಚೆಂಡನ್ನು ತಪ್ಪಾಗಿ ಅರ್ಥೈಸಿಕೊಳ್ಳುವಲ್ಲಿ ಎಡವಿದರು. ಪರಿಣಾಮ ಸ್ಟಂಪ್‌ ಎಗರಿತು.

Pat Cummins Surpasses Kapil Dev India Struggles Against Australia in Adelaide Test

ಕಪಿಲ್‌ ದಾಖಲೆ ಉಡೀಸ್‌

ರೋಹಿತ್ ಅವರ ವಿಕೆಟ್ ಪಡೆಯುತ್ತಿದ್ದಂತೆ ಪ್ಯಾಟ್‌ ಕಮಿನ್ಸ್‌ ದೊಡ್ಡ ದಾಖಲೆ ಬರೆದರು. ಇವರು ಕಪಿಲ್‌ ದೇವ್ ಅವರ ದೊಡ್ಡ ದಾಖಲೆ ಮುರಿದರು. ಈ ವಿಕೆಟ್‌ ಮೂಲಕ ಪ್ಯಾಟ್‌ ಕಮಿನ್ಸ್‌ ನಾಯಕನಾಗಿ ದೊಡ್ಡ ದಾಖಲೆ ಬರೆದರು. ಪ್ಯಾಟ್‌ ಕಮಿನ್ಸ್‌ ನಾಯಕರಾಗಿ 112 ವಿಕೆಟ್‌ಗಳನ್ನು ಕಬಳಿಸಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು. ಇವರು ಕಪಿಲ್ ದೇವ್ ಅವರ ದಾಖಲೆಯನ್ನು ಅಳಿಸಿದರು. ಕಪಿಲ್‌ ದೇವ್‌ 34 ಟೆಸ್ಟ್‌ ಪಂದ್ಯಗಳಲ್ಲಿ 111 ವಿಕೆಟ್‌ ಪಡೆದು ಸಾಧನೆ ಮಾಡಿದ್ದಾರೆ.

ನಾಯಕನಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಪ್ಯಾಟ್ ಕಮ್ಮಿನ್ಸ್ ಕಪಿಲ್ ದೇವ್ ಅವರನ್ನು ಹಿಂದಿಕ್ಕಿದ್ದಾರೆ. ಪ್ಯಾಟ್ ಕಮಿನ್ಸ್ ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ 5ನೇ ನಾಯಕ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇಮ್ರಾನ್‌ ಖಾನ್‌ ಅವರು 48 ಟೆಸ್ಟ್‌ ಪಂದ್ಯಗಳಲ್ಲಿ 187 ವಿಕೆಟ್‌ ಪಡೆದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ರಿಚಿ ಬೆನಾಡ್‌ ಎರಡನೇ ಸ್ಥಾನದಲ್ಲಿದ್ದು, 28 ಟೆಸ್ಟ್‌ ಪಂದ್ಯಗಳಲ್ಲಿ 138 ವಿಕೆಟ್‌ ಕಬಳಿಸಿದ್ದಾರೆ. ಇನ್ನು ಗ್ಯಾರಿ ಸೋಬರ್ಸ್‌ 117 ವಿಕೆಟ್‌ ಪಡೆದಿದ್ದಾರೆ.

Story first published: Saturday, December 7, 2024, 23:06 [IST]
Other articles published on Dec 7, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+