Border-Gavaskar Trophy: ಬಹು ನಿರೀಕ್ಷಿತ ಸರಣಿಗೂ ಮುನ್ನ ಪ್ಯಾಟ್ ಕಮಿನ್ಸ್ ಹೀಗೆ ಹೇಳಿದ್ದು ಏಕೆ?
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಸರಣಿಯಲ್ಲಿ ಐದು ಪಂದ್ಯಗಳು ನಡೆಯಲಿವೆ. ಕಳೆದ ಎರಡು ಬಾರಿ ಭಾರತ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿ , ಬಾರ್ಡರ್ ಗವಾಸ್ಕರ್ ಸರಣಿಯನ್ನು ವಶಕ್ಕೆ ಪಡೆದಿತ್ತು. ಈಗ ಹ್ಯಾಟ್ರಿಕ್ ಗೆಲುವಿನ ಕನಸನ್ನು ಟೀಮ್ ಇಂಡಿಯಾ ಕಾಡುತ್ತಿದೆ. ಆದರೆ ಪ್ಯಾಟ್ ಕಮಿನ್ಸ್ ಅವರಿಗೆ ಆ ಒಂದು ಆಸೆ, ಆಸೆಯಾಗಿ ಉಳಿದಿದೆ.
ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾ ಹಾಲಿ ನಾಯಕ. ಅಲ್ಲದೆ ಯಶಸ್ವಿ ನಾಯಕರ ಸಾಲಿನಲ್ಲಿ ಕಾಣಿಸಿಕೊಳ್ಳುವ ಪ್ಲೇಯರ್. ಇವರು ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ರೋಹಿತ್ ಪಡೆಯನ್ನು ಮಣಿಸಿ ಟ್ರೋಫಿಗೆ ಮುತ್ತಿಟ್ಟಿದ್ದರು. ಅಲ್ಲದೆ 2023 ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಲ್ಲೂ ಟೀಮ್ ಇಂಡಿಯಾವನ್ನು ಮಣಿಸಿ ಪ್ರಶಸ್ತಿ ಪಡೆದು ಬೀಗಿತ್ತು. ಐಸಿಸಿಯ ದೊಡ್ಡ ಇವೆಂಟ್‌ಗಳಲ್ಲಿ ಅಬ್ಬರದ ಪ್ರದರ್ಶನ ನೀಡಿರುವ ಆಸೀಸ್ ಪ್ಲೇಯರ್‌ಗೆ ಆ ಒಂದು ಕೊರತೆ ಕಾಡುತ್ತಿದೆ. ಭಾರತದ ವಿರುದ್ಧ ಸರಣಿಗೂ ಮುನ್ನ ಪ್ಯಾಟ್ ಕಮಿನ್ಸ್ ದೊಡ್ಡ ಹೇಳಿಕೆ ನೀಡಿದ್ದಾರೆ.

ಪ್ಯಾಟ್ ಕಮಿನ್ಸ್ ಹೇಳಿದ್ದೇನು?
ನಾನು ನನ್ನ ಹೆಸರಿಗೆ ಹಲವು ಮಹತ್ವದ ವಿಷಯಗಳನ್ನು ಸೇರಿಸಿಕೊಂಡಿದ್ದೇನೆ. ಅದರಂತೆ ಭಾರತವನ್ನು ಆಸ್ಟ್ರೇಲಿಯಾದಲ್ಲಿ ಮಣಿಸಿ ನನ್ನ ಹೆಸರಿಗೆ ಇದೊಂದು ಸೇರಿಸಿಕೊಳ್ಳುವುದು ಗುರಿಯಾಗಿದೆ ಎಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ತಿಳಿಸಿದ್ದಾರೆ.
ತವರಿನಲ್ಲಿ ಅಂಗಳದಲ್ಲಿ, ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಆಡುವುದು ದೊಡ್ಡ ವಿಷಯ. ನಾನು ಅಷ್ಟೇ ಅಲ್ಲಾ ನಮ್ಮ ದೇಶದ ಕ್ರಿಕೆಟ್ ಪ್ರೇಮಿಗಳು ಸಹ ನಮ್ಮ ತಂಡ ತವರಿನಲ್ಲಿ ಆಡಿದಾಗ ಸ್ಥಿರ ಪ್ರದರ್ಶನ ನೀಡಬೇಕು ಎಂದು ಬಯಸುತ್ತಾರೆ ಎಂದು ಕಮಿನ್ಸ್ ತಿಳಿಸಿದ್ದಾರೆ. ಆಸ್ಟ್ರೇಲಿಯಾ ತನ್ನ ಕೊನೆಯ 16 ಟೆಸ್ಟ್ ಸರಣಿಗಳಲ್ಲಿ ಭಾರತದ ವಿರುದ್ಧ ಮಾತ್ರ ಸೋತಿದೆ. ಆಸ್ಟ್ರೇಲಿಯಾ 2014-15 ರಿಂದ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ.
ಆಸ್ಟ್ರೇಲಿಯಾದಲ್ಲಿ ನಡೆದ ಎರಡು ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಟೀಮ್ ಇಂಡಿಯಾ ಗೆದ್ದುಕೊಂಡಿದೆ. ಮುಂಬರುವ ಟೆಸ್ಟ್ ಸರಣಿ ನಮಗೆ ಮುಖ್ಯ. ಈ ವೇಳೆ ನಮ್ಮ ತಂಡ ಉತ್ತಮ ಸ್ಥಿತಿಯಲ್ಲಿದೆ. ನಾವು ಯಾವುದೇ ತಂಡದ ವಿರುದ್ಧವೂ ಆಡಿದರೂ ಸ್ಥಿರ ಪ್ರದರ್ಶನ ನೀಡುವುದೇ ನಮ್ಮ ಗುರಿಯಾಗಿದೆ. ಭಾರತದ ಫಾರ್ಮ್ ಸಹ ಉತ್ತಮವಾಗಿದ್ದು, ಅವರನ್ನು ಕಟ್ಟಿ ಹಾಕುವುದೇ ನಮ್ಮ ಗುರಿಯಾಗಿದೆ ಎಂದು ಆಸೀಸ್ ಕ್ಯಾಪ್ಟನ್ ಹೇಳಿದ್ದಾರೆ.
ಒತ್ತಡದಲ್ಲಿ ಇಡುವ ಪ್ರಯತ್ನ
ಟೀಮ್ ಇಂಡಿಯಾ ಸದ್ಯ ತವರಿನಲ್ಲಿ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಭಾರತದಲ್ಲಿ ನಡೆದ ಎರಡು ಟೆಸ್ಟ್‌ಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದೆ. ಟೀಮ್ ಇಂಡಿಯಾದ ಖ್ಯಾತ ನಾಮ ಆಟಗಾರರು ರನ್ ಗಳಿಸಲು ಪರದಾಟ ನಡೆಸಿದ್ದಾರೆ. ಸದ್ಯ ಟೀಮ್ ಇಂಡಿಯಾ ಒತ್ತಡದಲ್ಲಿದೆ. ಆದರೆ ಇದೇ ತಂಡ ನಮ್ಮದೇ ನೆಲದಲ್ಲಿ ಉತ್ತಮ ಪ್ರದರ್ಶನ ನೀಡಿರುವುದನ್ನು ನಾವು ಮರೆಯುವಂತಿಲ್ಲ. ಪ್ರವಾಸಿ ತಂಡವನ್ನು ಒತ್ತಡದಲ್ಲಿ ಇಡುವ ಪ್ರಯತ್ನ ನಮ್ಮದಾಗಿರಲಿದೆ ಎಂದು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications