Pat Cummins: ಸ್ಟಾರ್ ಪ್ಲೇಯರ್‌ಗೆ ಪಟ್ಟ ಕಟ್ಟಿದ ಸನ್‌ರೈಸರ್ಸ್ ಹೈದರಾಬಾದ್
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಫ್ರಾಂಚೈಸಿಗಳು ತಮ್ಮ ರಿಟೆನ್ಷನ್ ಲಿಸ್ಟ್ ರಿಲೀಸ್ ಮಾಡಿದ್ದಾರೆ. ಈ ವೇಳೆ ಮಾಲೀಕರು ಹರಾಜಿನತ್ತ ಚಿತ್ತ ನೆಟ್ಟಿದ್ದಾರೆ. ಡಿಸೆಂಬರ್ 16 ರಂದು ಅಬುದಾಬಿಯಲ್ಲಿ ನಡೆಯಲಿರುವ ಹರಾಜಿಗೆ ಫ್ರಾಂಚೈಸಿಗಳು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) 19ನೇ ಆವೃತ್ತಿಯ ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸುವುದು ಯಾರು ಎಂಬುದನ್ನು ಘೋಷಣೆ ಮಾಡಿದೆ.
ಎಸ್‌ಆರ್‌ಎಚ್ (SRH) ಹರಾಜಿಗೂ ಮುನ್ನ ತನ್ನ ತಂಡದ ಚುಕ್ಕಾಣಿಯನ್ನು ವೇಗದ ಬೌಲರ್ ಪ್ಯಾಟ್ ಕಮಿನ್ಸ್ (Pat Cummins) ಅವರಿಗೆ ನೀಡಿದೆ. ಪ್ಯಾಟ್ ಕಮಿನ್ಸ್ ಮೂರನೇ ಬಾರಿಗೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಬಗ್ಗೆ ಎಸ್‌ಆರ್‌ಎಚ್ ತನ್ನ ಸಾಮಾಜಿಕ ತಾಣದಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.

2024ರಿಂದ ಐಪಿಎಲ್‌ನಲ್ಲಿ ಎಸ್‌ಆರ್‌ಎಚ್ ತಂಡದ ಚುಕ್ಕಾಣಿ ಹಿಡಿದಿದ್ದಾರೆ. ಇವರು ಈ ವೇಳೆ ಐಡೆನ್ ಮಾರ್ಕ್ರಾಮ್ ಅವರಿಂದ ತೆರವಾದ ನಾಯಕತ್ವದ ಸ್ಥಾನವನ್ನು ಪ್ಯಾಟ್ ತುಂಬಿದ್ದಾರೆ. 2024ರ ಹರಾಜಿನಲ್ಲಿ ಪ್ಯಾಟ್ ಅವರನ್ನು ಸನ್ 20.40 ಕೋಟಿ ರೂ. ನೀಡಿತ್ತು. ಇತ್ತೀಚಿಗೆ ಸನ್ ರಿಟೇನ್ ಮಾಡಿದ ಆಟಗಾರರ ಪಟ್ಟಿಯಲ್ಲಿ ಪ್ಯಾಟ್ ಅವರು ಸ್ಥಾನ ಪಡೆದಿದ್ದರು. ಇವರ ಜೊತೆಗೆ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಅನಿಕೇತ್ ವರ್ಮಾ, ಇಶಾನ್ ಕಿಶನ್, ಹೆನ್ರಿಕ್ ಕ್ಲಾಸೆನ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರನ್ನು ಉಳಿಸಿಕೊಂಡಿದೆ.
ಪ್ಯಾಟ್ ಕಮಿನ್ಸ್ ಸಾಧನೆ
ಪ್ಯಾಟ್ ಕಮಿನ್ಸ್ ಅವರ ಮುಂದಾಳತ್ವದಲ್ಲಿ ಎಸ್‌ಆರ್‌ಎಚ್ ತಂಡ 2024ರಲ್ಲಿ ಐಪಿಎಲ್ ಫೈನಲ್‌ಗೆ ಅರ್ಹತೆ ಪಡೆದಿತ್ತು. ಆದರೆ ಫೈನಲ್‌ನಲ್ಲಿ ಕೆಕೆಆರ್ ವಿರುದ್ಧ 8 ವಿಕೆಟ್ ಸೋಲು ಕಂಡು ನಿರಾಸೆ ಅನುಭವಿಸಿತ್ತು. ಇನ್ನು 2025ರ ಐಪಿಎಲ್ ಸನ್ ತಂಡ ಆಡಿದ 14 ಪಂದ್ಯಗಳಲ್ಲಿ 6 ಜಯ, 7 ಸೋಲು ಕಂಡಿದ್ದು, 13 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿತ್ತು.
ಆಶಸ್ ಸರಣಿ ಮೊದಲ ಪಂದ್ಯಕ್ಕೆ ಅಲಭ್ಯ
ಪ್ಯಾಟ್ ಕಮಿನ್ಸ್ ಸದ್ಯ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಇವರು ಇಂಗ್ಲೆಂಡ್ ವಿರುದ್ಧದ ಆಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇವರು ಕಣಕ್ಕೆ ಇಳಿಯುವುದಿಲ್ಲ. ಈ ಬಗ್ಗೆ ಅಧಿಕೃತ ಹೇಳಿಕೆ ಸಹ ಹೊರ ಬಂದಿದೆ. ಇನ್ನು ಡಿಸೆಂಬರ್ 4 ರಂದು ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ವೇಳೆಗೆ ಪ್ಯಾಟ್ ಕಮಿನ್ಸ್ ಫಿಟ್ ಆಗುವ ಸಾಧ್ಯತೆ ಇದೆ. ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಸ್ಟೀವನ್ ಸ್ಮಿತ್ ತಂಡವನ್ನು ಮುನ್ನಡೆಸಲಿದ್ದಾರೆ.
ಐಪಿಎಲ್ 2026 ರ ಹರಾಜಿಗೆ ಎಸ್‌ಆರ್‌ಎಚ್ ಉಳಿಸಿಕೊಂಡ ಆಟಗಾರರು: ಪ್ಯಾಟ್ ಕಮ್ಮಿನ್ಸ್ (ನಾಯಕ), ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಅನಿಕೇತ್ ವರ್ಮಾ, ಆರ್. ಸ್ಮರನ್, ಇಶಾನ್ ಕಿಶನ್, ಹೆನ್ರಿಚ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಕಮಿಂದು ಮೆಂಡಿಸ್, ಹರ್ಷಲ್ ಪಟೇಲ್, ಜಯದೇವ್ ಉನಾದ್ಕಟ್, ಜೀಶನ್ ಅಂಸಾರಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications