Pro Kabaddi: ಪಾಟ್ನಾ ವಿರುದ್ಧ ಬುಲ್ಸ್‌ಗೆ ಭಾರೀ ಅಂತರದ ಸೋಲು
11ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಗೆಲುವಿನ ಲಯಕ್ಕೆ ಮರಳಲು ಹೆಣಗಾಟ ನಡೆಸಿದೆ. ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಬುಲ್ಸ್ ಭಾರಿ ಅಂತರದ ಸೋಲು ಕಂಡಿತು. ಲೀಗ್‌ನ 85ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 29-54 ರಿಂದ ಪಾಟ್ನಾ ಪೈರೇಟ್ಸ್ ತಂಡದ ವಿರುದ್ಧ ಆಘಾತ ಅನುಭವಿಸಿತು. ಈ ಜಯದೊಂದಿಗೆ ಪಾಟ್ನಾ 47 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಪಂದ್ಯದ ಯಾವುದೇ ಹಂತದಲ್ಲೂ ಬುಲ್ಸ್ ಪುಟಿದೇಳುವ ಆಸೆ ಫಲಿಸಲೇ ಇಲ್ಲ. ಪರಿಣಾಮ 12ನೇ ಸ್ಥಾನದಿಂದ ಮೇಲೆಳುವ ಬುಲ್ಸ್ ತಂಡದ ಆಸೆ ಫಲಿಸಲಿಲ್ಲ. ಬುಲ್ಸ್ ಆಡಿದ 15 ಪಂದ್ಯಗಳಲ್ಲಿ 2 ಜಯ, 13 ಸೋಲುಗಳೊಂದಿಗೆ 16 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಆರಂಭದಿಂದ ಪಾಟ್ನಾ ಅಬ್ಬರ
ಮೊದಲಾವಧಿಯಲ್ಲಿ ಬೆಂಗಳೂರು ಬುಲ್ಸ್ 10 ಅಂಕಗಳಿಂದ ಹಿನ್ನಡೆ ಅನುಭವಿಸಿತು. ಈ ಅವಧಿಯಲ್ಲಿ ಬುಲ್ಸ್ 12-22 ಅಂಕಗಳಿಂದ ಪಾಟ್ನಾ ಪೈರೇಟ್ಸ್ ತಂಡ ವಿರುದ್ಧ ಹಿನ್ನಡೆ ಕಂಡಿತು. ಈ ಅವಧಿಯಲ್ಲಿ ಪಾಟ್ನಾ 16 ರೈಡಿಂಗ್ ಅಂಕಗಳೊಂದಿಗೆ ಭಾರೀ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಟ್ಯಾಕಲ್‌ನಲ್ಲಿ ಉಭಯ ತಂಡಗಳು ಅಂಕ ಕಲೆ ಹಾಕುವಲ್ಲಿ ವಿಫಲರಾದರು. ಮೊದಲಾವಧಿಯ 20 ನಿಮಿಷದಲ್ಲಿ ಬುಲ್ಸ್ ಒಂದು ಬಾರಿ ಆಲೌಟ್ ಆಯಿತು.
ಪಾಟ್ನಾ ಪೈರೇಟ್ಸ್ 32-17 ಅಂಕಗಳೊಂದಿಗೆ ಬುಲ್ಸ್ ವಿರುದ್ಧ ಭರ್ಜರಿ ಮುನ್ನಡೆ ಸಾಧಿಸಿತು. ಈ ಮೂಲಕ ಪಾಟ್ನಾ ಪ್ರಸಕ್ತ ಟೂರ್ನಿಯಲ್ಲಿ 3 ಬಾರಿ 50ಕ್ಕೂ ಹೆಚ್ಚು ಅಂಕಗಳನ್ನು ಕಲೆ ಹಾಕಿದರು. ಪಾಟ್ನಾ ದಾಳಿಯಲ್ಲಿ 18 ಅಂಕಗಳನ್ನು ಗಳಿಸಿತು. ಇನ್ನು ಈ ವೇಳೆ ಪಾಟ್ನಾ ಟ್ಯಾಕಲ್‌ನಲ್ಲಿ 10 ಅಂಕ ಕಲೆ ಹಾಕಿತು. ಈ ವೇಳೆ ಬುಲ್ಸ್ 2 ಬಾರಿ ಆಲೌಟ್ ಆಯಿತು. ಬುಲ್ಸ್ ಪಂದ್ಯದ ಯಾವುದೇ ಹಂತದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ಮೇಲುಗೈ ಸಾಧಿಸಲು ಸಾಧ್ಯವೇ ಆಗಲಿಲ್ಲ.

ಪಾಟ್ನಾ ಪೈರೇಟ್ಸ್ ಪರ ದೇವಾಂಕ್ 17, ಆಯಾನ್ 13 ಅಂಕಗಳನ್ನು ಗಳಿಸಿದರು. ಬುಲ್ಸ್ ಪ್ರದೀಪ್ ನರ್ವಾಲ್ 8, ಜೈ ಭಗವಾನ್ 9 ಅಂಕ ಸೇರಿಸಿತು.
ಜೈಪುರ್‌ಗೆ ಐದನೇ ಸ್ಥಾನ
ಶನಿವಾರ ನಡೆದ ಐದನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ 41-28 ರಿಂದ ತೆಲುಗು ಟೈಟಾನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಜೈಪುರ ಪಿಂಕ್ ಪ್ಯಾಂಥರ್ಸ್ ಆಡಿದ 15 ಪಂದ್ಯಗಳಲ್ಲಿ 8 ಜಯ, 6 ಸೋಲು, 1 ಡ್ರಾದೊಂದಿಗೆ 46 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.
ಮೊದಲಾವಧಿಯಲ್ಲಿ ಜೈಪುರ ಹಾಗೂ ತೆಲುಗು ಟೈಟಾನ್ಸ್ ತಂಡಗಳು ಸಮಬಲದ ಹೋರಾಟವನ್ನು ನೀಡಿದವು. ಈ ಅವಧಿಯಲ್ಲಿ ಜೈಪುರ ಹಾಗೂ ತೆಲುಗು ತಂಡಗಳು ತಲಾ 18 ಅಂಕಗಳನ್ನು ಕಲೆ ಹಾಕಿದವು. ಮೊದಲ 20 ನಿಮಿಷದ ಆಟದಲ್ಲಿ ಉಭಯ ತಂಡಗಳು ದಾಳಿ ಹಾಗೂ ಟ್ಯಾಕಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದವು. ಈ ವೇಳೆ ತೆಲುಗು ಒಂದು ಬಾರಿ ಆಲೌಟ್ ಆಯಿತು. ಎರಡನೇ ಅವಧಿಯಲ್ಲಿ ತೆಲುಗು ತಂತ್ರವನ್ನು ಅರಿತು ಆಡಿ ಜೈಪುರ ಅಬ್ಬರಿಸಿತು. ಈ ವೇಳೆ ವಿಜೇತ ತಂಡ 23-10 ಅಂಕಗಳಿಂದ ಮುನ್ನಡೆ ಸಾಧಿಸಿ ಜಯ ಸಾಧಿಸಿತು. ವಿಜೇತ ತಂಡದ ಪರ ಅರ್ಜುನ್ ದೇಶ್ವಲ್, ನೀರಜ್ ನರ್ವಾಲ್ ಅಂಕಗಳನ್ನು ಕಲೆ ಹಾಕಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications