ಇನ್ನಿಂಗ್ಸ್ ಆಡದೆಯೇ ಶ್ರೀಲಂಕಾ ವಿರುದ್ಧ ಪಂದ್ಯ ಗೆದ್ದ ಭಾರತದ ಯುವಕರು!

ಹ್ಯಾಂಬಂಟೊಟ, ಜುಲೈ 26: ಶ್ರೀಲಂಕಾದ ಹ್ಯಾಂಬಂಟೊಟದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಅಂಡರ್-19 ಯೂತ್ ಟೆಸ್ಟ್ ಪಂದ್ಯದಲ್ಲಿ ಭಾರತ ಒಂದು ಇನ್ನಿಂಗ್ಸ್ ಆಡದೆಯೇ ಶ್ರೀಲಂಕಾ ಎದುರು 147ರನ್ ಭರ್ಜರಿ ಗೆಲುವು ದಾಖಲಿಸಿದೆ. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ನೀಡಿದ್ದ 613 ರನ್ ಗುರಿಯನ್ನು ಶ್ರೀಲಂಕಾ ಯುವ ತಂಡಕ್ಕೆ ಎರಡು ಇನ್ನಿಂಗ್ಸ್ ನಲ್ಲೂ ತಲುಪಲಾಗಲಿಲ್ಲ.
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದಿದ್ದ ಭಾರತ ಅಥರ್ವ ತೈಡೆಯ ಶತಕ (177/172) ಮತ್ತು ಪವನ್ ಶಾ (282/332) ಅವರ ದ್ವಿಶತಕ ನೆರವಿನೊಂದಿಗೆ 128.5 ಓವರ್ ಗೆ 8 ವಿಕೆಟ್ ಕಳೆದು 613 ರನ್ ಪೇರಿಸಿ ಡಿಕ್ಲೇರ್ ಘೋಷಿಸಿತ್ತು. ತಂಡದ ಮೊತ್ತ ಹೆಚ್ಚಿಸುವಲ್ಲಿ ಆರ್ಯನ್ ಜುಯಾಲ್ (41/61), ನೇಹಲ್ ವಢೇರ (64/136) ಅವರ ರನ್ ಕೊಡುಗೆಯೂ ನೆರವಾಯಿತು.
ಗುರಿ ಬೆನ್ನಟ್ಟಿದ ಶ್ರೀಲಂಕಾ ಮೊದಲ ಇನ್ನಿಂಗ್ಸ್ ನಲ್ಲಿ ಎಲ್ಲಾ ವಿಕೆಟ್ ಕಳೆದು 316ರನ್ ಪೇರಿಸಲಷ್ಟೇ ಶಕ್ತವಾಯಿತು. ಈ ವೇಳೆ ಶ್ರೀಲಂಕಾ ಆರಂಭಿಕ ಆಟಗಾರ ಕಮಿಲ್ ಮಿಶಾರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 94 ಎಸೆತ ಎದುರಿಸಿದ ಮಿಶಾರ 44 ರನ್ ಗಳಿಸಿ ದೇಸಾಯಿ ಓವರ್ ನಲ್ಲಿ ಔಟಾದರು. ಪಸಿನುಂದ ಸೂರ್ಯಬಂದಾರ ಅವರ ಶತಕ (115/236) ಶ್ರೀಲಂಕಾ ರನ್ ಹೆಚ್ಚಳಕ್ಕೆ ಕಾರಣವಾಯಿತು.
ದ್ವೀತೀಯ ಇನ್ನಿಂಗ್ಸ್ ಗೆ ಇಳಿದ ಶ್ರೀಲಂಕಾ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. ಬರೀ 150 ರನ್ನಿಗೆ ಶ್ರೀಲಂಕಾ ತನ್ನೆಲ್ಲಾ ವಿಕೆಟ್ ಕಳೆದು ಭಾರತದೆದುರು ಶರಣಾಯಿತು. ಶ್ರೀಲಂಕಾದ ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತದ ಸಿದ್ಧಾರ್ಥ್ ದೇಸಾಯಿ, 40 ರನ್ ಗೆ 4 ವಿಕೆಟ್ ಉರುಳಿಸಿ ಪಾರಮ್ಯ ಮೆರೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications