Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ ಟೆಸ್ಟ್ ಕ್ರಿಕೆಟ್ ಆಟಗಾರರ ವೇತನ ಏರಿಕೆ, ಎಷ್ಟು?

ನವದೆಹಲಿ, ಅ. 01 : ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಬಿಸಿಸಿಐ ದಸರಾ ಸಿಹಿ ಸುದ್ದಿಯೊಂದನ್ನು ನೀಡಿದೆ. ಐತಿಹಾಸಿಕ 500ನೇ ಟೆಸ್ಟ್ ಪಂದ್ಯ ಗೆದ್ದ ಟೀಂ ಇಂಡಿಯಾ ಟೆಸ್ಟ್ ಆಟಗಾರರ ವೇತನವನ್ನು ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ) ಏರಿಕೆ ಮಾಡಿದೆ.

ಈ ಹಿಂದೆ ಪ್ರತಿ ಟೆಸ್ಟ್ ಪಂದ್ಯಕ್ಕೆ 7 ಲಕ್ಷ ರುಗಳನ್ನು ಸಂಭವನೆ ಪಡೆದುಕೊಳ್ಳುತ್ತಿದ್ದರು. ವೇತನದಲ್ಲಿ ಏರಿಕೆ ಕಂಡಿದ್ದರಿಂದ ಪ್ರತಿ ಆಟಗಾರರು ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷದವರೆಗೆ ಹೆಚ್ಚುವರಿ ವೇತನವನ್ನು ಪಡೆದುಕೊಳ್ಳಲಿದ್ದಾರೆ. ಎಂದು ಭಾರತೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಅನೂರಾಗ್ ಠಾಕೂರ್ ತಿಳಿಸಿದ್ದಾರೆ.

India

ಆದರೆ, ಇದು ಟೆಸ್ಟ್​​ ತಂಡದಲ್ಲಿ ಸ್ಥಾನ ಪಡೆಯುವ ಅಂತಿಮ 11 ಆಟಗಾರರಿಗೆ ಮಾತ್ರ ಅನ್ವಯವಾಗಲಿದೆ. ಇನ್ನು ಇನ್ನುಳಿದ ​ಆಟಗಾರರು 7.5 ಲಕ್ಷ ರುಗಳನ್ನು ಪಡೆಯಲಿದ್ದಾರೆ. ಇನ್ನು ಮಹಿಳಾ ಟೀಂ ಇಂಡಿಯಾ ಆಟಗಾರರ ಸಂಭವನೆ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಅನೂರಾಗ್ ಠಾಕೂರ್ ತಿಳಿಸಿದ್ದಾರೆ.

ಐಪಿಎಲ್ ಸ್ಟಾರ್ ಆಟಗಾರರಿಗೆ ಕೋಟಿಗಟ್ಟಲೇ ಸಮಭವನೆಯನ್ನು ನೀಡಲಾಗುತ್ತಿದೆ. ಅದನ್ನು ಟೆಸ್ಟ್ ಸಂಭವನೆಗೆ ಹೋಲಿಕೆ ಬೇಡ. ಟೆಸ್ಟ್ ಕ್ರಿಕೆಟ್ ಗೂ ಆಟಗಾರರು ಆಸಕ್ತಿವಹಿಸುವ ದೃಷ್ಟಿಯಿಂದ ಈ ಸಂಭವನೆಯನ್ನು ಏರಿಸಲಾಗಿದೆ ಎಂದು ಬಿಸಿಸಿಐ ಹೇಳಿದೆ.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+