Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Punjab Kings: ಇವರೇ ಪಂಜಾಬ್‌ ಕಿಂಗ್ಸ್‌ ಗೆಲುವಿನ ಹೀರೋ

ಪಂಜಾಬ್‌ ಕಿಂಗ್ಸ್ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ತನ್ನ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಲಕ್ನೋದಲ್ಲಿ ನಡೆದ 13ನೇ ಪಂದ್ಯದಲ್ಲಿ ಪಂಜಾಬ್‌ 8 ವಿಕೆಟ್‌ಗಳಿಂದ ಆತಿಥೇಯ ಎಲ್‌ಎಸ್‌ಜಿ ತಂಡವನ್ನು ಮಣಿಸಿ, ಸತತ ಎರಡನೇ ಗೆಲುವಿನ ನಗೆ ಬೀರಿದೆ. ಈ ಮೂಲಕ ಪಂಜಾಬ್‌ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಪಂಜಾಬ್ ಈ ಗೆಲುವಿನಲ್ಲಿ ಹಲವು ಆಟಗಾರರು ತಮ್ಮ ಕಾಣಿಕೆ ನೀಡಿದ್ದಾರೆ. ಇದರಲ್ಲಿ ಪ್ರಭ್ಸಿಮ್ರಾನ್ ಸಿಂಗ್ ಮೋಸ್ಟ್‌ ವ್ಯಾಲ್ಯುಬಲ್ ಪ್ಲೇಯರ್ ಆಗಿ ಕಾಣಿಸಿಕೊಳ್ಳುತ್ತಾರೆ. ಚೇಸ್‌ ಮಾಡುವಾಗ ಹೇಗೆ ಬ್ಯಾಟಿಂಗ್ ಮಾಡಬೇಕು ಎಂಬುದನ್ನು ತೋರಿಸಿ ಕೊಟ್ಟ ಪ್ರಭ್ಸಿಮ್ರಾನ್ ಸಿಂಗ್ ಪವರ್‌ ಪ್ಲೇನಲ್ಲೇ ಅರ್ಧಶತಕ ಬಾರಿಸಿ ಮಿಂಚಿದರು.

PBKS Dominate in Lucknow Who Was the Most Valuable Player Against LSG

ಟಾಸ್‌ ಗೆದ್ದ ಬೌಲಿಂಗ್ ಆಯ್ಕೆ ಮಾಡಿಕೊಂಡ ಶ್ರೇಯಸ್ ಅವರ ನಿರ್ಧಾರವನ್ನು ಪಂಜಾಬ್‌ ಬೌಲರ್‌ಗಳು ಸಮರ್ಥಿಸಿಕೊಂಡರು. ಮೊದಲ 6 ಓವರ್‌ಗಳಲ್ಲಿ ಎಲ್‌ಎಸ್‌ಜಿ ತಂಡದ ಮೂರು ಅಮೂಲ್ಯ ವಿಕೆಟ್‌ ಪಡೆದು ತಂಡಕ್ಕೆ ಪೆಟ್ಟು ನೀಡಿದ್ದರು. ಅರ್ಷದೀಪ್‌ ಸಿಂಗ್‌ ಪವರ್‌ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಿ ತಂಡಕ್ಕೆ ಆಧಾರವದರು. ಇವರು 43 ರನ್ ನೀಡಿ 3 ಅಮೂಲ್ಯ ವಿಕೆಟ್ ಪಡೆದರು. ನಿಕೋಲಸ್ ಪುರನ್ (44 ರನ್) ಹಾಗೂ ಆಯುಷ್ ಬದೋನಿ (41 ರನ್) ಇವರುಗಳ ಸೊಗಸಾದ ಆಟದ ನೆರವಿನಿಂದ ಎಲ್‌ಎಸ್‌ಜಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 171 ರನ್‌ ಸೇರಿಸಿತು.

ಆರಂಭಿಕ ಆಟಗಾರನ ಅಬ್ಬರ

ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ಪಂಜಾಬ್‌ ತಂಡದ ಆರಂಭ ಸಹ ಕಳಪೆ ಯಾಗಿತ್ತು. ಪ್ರಿಯಾಂಶ್ ಆರ್ಯ (8) ಬೇಗನೆ ವಿಕೆಟ್ ಒಪ್ಪಿಸಿದರು. ಆದರೆ ಇನ್ನೊಬ್ಬ ಆರಂಭಿಕ ಆಟಗಾರ ಪ್ರಭ್ಸಿಮ್ರಾನ್ ಸಿಂಗ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ತಮ್ಮ ನೈಜ್ಯ ಆಟವನ್ನು ಆಡಿ ಗಮನ ಸೆಳೆದರು. ಕೇವಲ 34 ಎಸೆತಗಳಲ್ಲಿ ಇವರು 69 ರನ್‌ ಸಿಡಿಸಿದರು. ಈ ವೇಳೆ ಇವರ ಸ್ಟ್ರೈಕ್‌ ರೇಟ್‌ 202.94 ಆಗಿತ್ತು. ಇವರ ಅಮೋಘ ಇನಿಂಗ್ಸ್‌ನಲ್ಲಿ 9 ಬೌಂಡರಿ, 3 ಸಿಕ್ಸರ್‌ಗಳು ಸೇರಿವೆ.

PBKS Dominate in Lucknow Who Was the Most Valuable Player Against LSG

ಪ್ರಭ್ಸಿಮ್ರಾನ್ ಸಿಂಗ್ ಅವರ ಆಕ್ರಮಣಕಾರಿ ಆಟದ ಮುಂದೆ ಎಲ್‌ಎಸ್‌ಜಿ ಬೌಲರ್‌ಗಳು ಕಂಗಾಲಾದರು. ಇವರು ಎಲ್ಲ ಬೌಲರ್‌ಗಳನ್ನು ತರಾಟೆಗೆ ತೆಗೆದುಕೊಂಡು ತಮ್ಮಲ್ಲಿರುವ ಶಾಟ್‌ಗಳನ್ನು ಬಳಸಿ ರನ್‌ಗಳನ್ನು ಗುಡ್ಡೆ ಹಾಕಿದರು. ಇವರ ಅಮೋಘ ಬ್ಯಾಟಿಂಗ್ ಪ್ರದರ್ಶನಕ್ಕೆ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಲಭಿಸಿತು.

ಪ್ರಭ್ಸಿಮ್ರಾನ್ ಸಿಂಗ್ ಎಲ್‌ಎಸ್‌ಜಿ ಬೌಲರ್‌ಗಳ ವಿರುದ್ಧ ಪ್ರದರ್ಶನ

ಶಾರ್ದೂಲ್ ಠಾಕೂರ್- 6 ಎಸೆತ 13 ರನ್
ಆವೀಶ್ ಖಾನ್- 6 ಎಸೆತ 13 ರನ್
ದಿಗ್ವೇಶ್‌ ರಾಠೆ- 5 ಎಸೆತ 6 ರನ್
ರವಿ ಬಿಷ್ಣೋಯಿ- 11 ಎಸೆತ 26 ರನ್
ಎಂ ಸಿದ್ಧರ್ಥ್- 6 ಎಸೆತ 11 ರನ್

Story first published: Wednesday, April 2, 2025, 0:29 [IST]
Other articles published on Apr 2, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+