Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

PBKS vs DC: ಕ್ಯಾಪಿಟಲ್ಸ್‌ ಬಲೆಗೆ ಬಿದ್ದ ಕಿಂಗ್ಸ್‌: ಪಂಜಾಬ್‌ಗೆ ನಿರಾಸೆ

ಧರ್ಮಶಾಲಾ: ನಾಯಕ ಅಕ್ಷರ್ ಪಟೇಲ್ ಹಾಗೂ ಡೇವಿಡ್ ಮಿಲರ್‌ ಅವರ ಭರ್ಜರಿ ಅರ್ಧಶತಕ ಸಹಾಯದಿಂದ 19ನೇ ಇಂಡಿಯನ್ ಪ್ರೀಮಿಯರ್ ಲೀಗ್‌ ( ಐಪಿಎಲ್)ನ 55ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 3 ವಿಕೆಟ್‌ಗಳಿಂದ ಪಂಜಾಬ್‌ ಕಿಂಗ್ಸ್ ತಂಡವನ್ನು ಮಣಿಸಿ, ಪ್ಲೇ ಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಇನ್ನು ಪಂಜಾಬ್ ಕಿಂಗ್ಸ್‌ ಸತತ ನಾಲ್ಕನೇ ಸೋಲನ್ನು ಕಂಡಿದೆ.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಪ್ರಿಯಾಂಶ್ ಆರ್ಯ ಹಾಗೂ ಪ್ರಭ್‌ಸಿಮ್ರನ್‌ ಸಿಂಗ್‌ ಜೋಡಿ ಪವರ್‌ ಪ್ಲೇನಲ್ಲಿ ಅಬ್ಬರಿಸಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್‌ಗಳು ವಿಫಲರಾದರು. ಈ ಜೋಡಿ 6.5 ಓವರ್‌ಗಳಲ್ಲಿ 78 ರನ್‌ ಸೇರಿಸಿತು. ಪ್ರಭ್‌ಸಿಮ್ರನ್‌ 15 ಎಸೆತಗಳಲ್ಲಿ 18 ರನ್ ಬಾರಿಸಿ ಮುಕೇಶ್‌ ಕುಮಾರ್‌ ಅವರು ತೋಡಿದ ಖೆಡ್ಡಾಗೆ ಬಲಿಯಾದರು.

PBKS vs DC

ಭರ್ಜರಿ ಬ್ಯಾಟಿಂಗ್ ಮಾಡಿದ ಪ್ರಿಯಾಂಶ್‌ ಆರ್ಯಾ 33 ಎಸೆತಗಳಲ್ಲಿ 2 ಬೌಂಡರಿ, 6 ಸಿಕ್ಸರ್ ಸಹಾಯದಿಂದ 56 ರನ್‌ ಬಾರಿಸಿ ಔಟ್ ಆದರು. ಮೂರನೇ ವಿಕೆಟ್‌ಗೆ ಕೂಪರ್ ಕಾನೋಲಿ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಜೋಡಿ ಮಧ್ಯದ ಓವರ್‌ಗಳಲ್ಲಿ ವಿಕೆಟ್‌ ಬೀಳದಂತೆ ನೋಡಿಕೊಂಡಿತು. ಅಲ್ಲದೆ ರನ್‌ ಹಿಗ್ಗಿಸುತ್ತಾ ಸಾಗಿತು. ಈ ಜೋಡಿ 52 ಎಸೆತಗಳಲ್ಲಿ 83 ರನ್‌ ಬಾರಿಸಿತು. ಈ ವೇಳೆ ಕೂಪರ್ ಕಾನೋಲಿ 38 ರನ್ ಬಾರಿಸಿ ಮಾಧವ್ ತಿವಾರಿ ವಿಕೆಟ್ ಪಡೆದರು.

ನಾಯಕನ ಆಟವಾಡಿದ ಶ್ರೇಯಸ್

ನಂತರ ಬಂದ ಯಾವೊಬ್ಬ ಬ್ಯಾಟರ್‌ ನಾಯಕ ಶ್ರೇಯಸ್ ಅಯ್ಯರ್‌ಗೆ ಸಾಥ್ ನೀಡಲಿಲ್ಲ. ಶ್ರೇಯಸ್ 36 ಎಸೆತಗಳಲ್ಲಿ ಅಜೇಯ 59 ರನ್‌ ಸಿಡಿಸಿದರು. ಇವರ ಅಮೋಘ ಇನಿಂಗ್ಸ್‌ನಲ್ಲಿ 5 ಬೌಂಡರಿ, 3 ಸಿಕ್ಸರ್‌ಗಳು ಸೇರಿವೆ. ಸೂರ್ಯಾಂಶ್ ಶೆಡ್ಗೆ 8 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯ 21 ರನ್‌ ಸಿಡಿಸಿದರು. ಪಂಜಾಬ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 210 ರನ್‌ ಸೇರಿಸಿತು.

ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಕಳಪೆಯಾಗಿತ್ತು. ಕೆಎಲ್ ರಾಹುಲ್‌ (9), ಅಭಿಷೇಕ್ ಪೊರೆಲ್ (5) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. 18 ವರ್ಷದ ಮಹಾರಾಷ್ಟ್ರದ ಸಾಹಿಲ್ ಪರಾಕ್ (13) ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್‌ ಪವರ್‌ ಪ್ಲೇನಲ್ಲಿ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

PBKS vs DC

ಅಕ್ಷರ್‌, ಮಿಲ್ಲರ್‌ ಅರ್ಧಶತಕ

4ನೇ ವಿಕೆಟ್‌ಗೆ ನಾಯಕ ಅಕ್ಷರ್ ಪಟೇಲ್ ಹಾಗೂ ಟ್ರಿಸ್ಟನ್ ಸ್ಟಬ್ಸ್‌ (12) ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 23 ಎಸೆತಗಳಲ್ಲಿ 41 ರನ್‌ ಸೇರಿಸಿತು. 5ನೇ ವಿಕೆಟ್‌ಗೆ ಅನುಭವಿ ಆಟಗಾರರಾದ ಅಕ್ಷರ್ ಪಟೇಲ್ ಹಾಗೂ ಡೇವಿಡ್‌ ಮಿಲ್ಲರ್ ಜೋಡಿ ಸೊಗಸಾದ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 34 ಎಸೆತಗಳಲ್ಲಿ 64 ರನ್‌ ಸೇರಿಸಿತು. ಈ ಹಂತದಲ್ಲಿ ನಾಯಕ ಅಕ್ಷರ್ ಪಟೇಲ್ 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ 56 ರನ್‌ ಬಾರಿಸಿದರು. ಭರವಸೆಯ ಆಟಗಾರ ಡೇವಿಡ್ ಮಿಲ್ಲರ್ 28 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ನೆರವಿನಿಂದ 51 ರನ್ ಸಿಡಿಸಿದರು.

ಆಶುತೋಷ್ ಶರ್ಮಾ (24), ಮಾಧವ್ ತಿವಾರಿ (ಅಜೇಯ 18), ಅಕಿಬ್ ನಬಿ (ಅಜೇಯ 10) ತಂಡಕ್ಕೆ ಗೆಲುವಿನ ದಡ ದಾಟಿಸಿದರು. ಡೆಲ್ಲಿ 19 ಓವರ್‌ಗಳಲ್ಲಿ 7 ವಿಕೆಟ್‌ಗೆ 216 ರನ್‌ ಸೇರಿಸಿದೆ.

Story first published: Monday, May 11, 2026, 23:44 [IST]
Other articles published on May 11, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+