For Quick Alerts
ALLOW NOTIFICATIONS  
For Daily Alerts
 

IPL 2025: ಕೆಕೆಆರ್‌ ಮಣಿಸಿ ದಾಖಲೆ ಬರೆದ ಪಂಜಾಬ್ ಬಾಯ್ಸ್

ಐಪಿಎಲ್ ಇತಿಹಾಸದಲ್ಲಿ ಯಾವುದೇ ತಂಡ ಸಾಧಿಸದ ದಾಖಲೆಯ ಗೆಲುವು ಪಂಜಾಬ್ ಕಿಂಗ್ಸ್ ತಂಡಕ್ಕೆ ಒಲಿದಿದೆ. ಮುಲ್ಲನ್ಪುರ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025ರ 31ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮಣಿಸುವ ಮೂಲಕ ಪಂಜಾಬ್ ಕಿಂಗ್ಸ್ ದಾಖಲೆ ಸೃಷ್ಟಿಸಿದೆ. ಐಪಿಎಲ್‌ನಲ್ಲಿ ಅತ್ಯಂತ ಕಡಿಮೆ ಸ್ಕೋರ್ ಡಿಫೆಂಡ್ ಮಾಡಿದ ಮೊದಲ ಎಂಬ ಹೆಗ್ಗಳಿಕೆ ಪಂಜಾಬ್ ಕಿಂಗ್ಸ್ ಪಾತ್ರವಾಗಿದೆ. ಇದರೊಂದಿಗೆ ಪಂಜಾಬ್ ಕಿಂಗ್ಸ್ ತವರಿನಲ್ಲಿ ಮೊದಲ ಗೆಲುವು ಕಂಡಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 15.3 ಓವರ್‍‌ಗಳಲ್ಲಿ ಆಲೌಟಾಗುವ ಮೂಲಕ 111 ರನ್ ಗಳಿಸಿದೆ. ಪಂಜಾಬ್ ನೀಡಿದ 112 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್‌ 15.1 ಓವರ್‍‌ಗಳಲ್ಲಿ ಕೇವಲ 95 ರನ್‌ಗಳಿಗೆ ಸರ್ವಪತನವಾಯಿತು. ಈ ಮೂಲಕ ಪಂಜಾಬ್ 16 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಪಂಜಾಬ್ ಪರ ಯುಜ್ವೇಂದ್ರ ಚಹಾಲ್ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿ ಮಿಂಚಿದರು.

PBKS vs KKR IPL 2025 Toss Match Report Score batting and bowling performance kannada

ಹೀನಾಯ ಸೋಲು

ಪಂಜಾಬ್ ಕಿಂಗ್ಸ್ ನೀಡಿದ ಸುಲಭ ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ಆತ್ಯಂತ ಕೆಟ್ಟ ಆರಂಭ ಪಡೆಯಿತು. ಕೆಕೆಆರ್ ತಂಡದ ಇಬ್ಬರು ಆರಂಭಿಕ ಬ್ಯಾಟರ್ಸ್‌ 7 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇದಾದ ನಂತರ ನಾಯಕ ಅಜಿಂಕ್ಯಾ ರಹಾನೆ ಮತ್ತು ಅಂಗ್‌ಕ್ರಿಶ್ ರಘುವಂತಿ ಉತ್ತಮ ಜೊತೆಯಾಟ ಆಡುವ ಮೂಲಕ ತಂಡದ ಸ್ಕೋರ್ ಅನ್ನು 50 ರನ್‌ಗಳ ಗಟಿ ದಾಟಿಸಿದರು.

ಅಜಿಂಕ್ಯಾ ರಹಾನೆ 17 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದ ತಕ್ಷಣ ವಿಕೆಟ್‌ಗಳು ಬೀಳಲು ಶುರುವಾದವು. ರಘುವಂತಿ 28 ಎಸೆತಗಳಲ್ಲಿ 37 ರನ್ ಗಳಿಸಿ ಗಮನ ಸೆಳೆದರು. ವೆಂಕಟೇಶ್ ಅಯ್ಯರ್ 7 ಮತ್ತು ರಿಂಕು ಸಿಂಗ್ 2 ರನ್ ಗಳಿಸಿದರು. ಆಂಡ್ರೆ ರಸೆಲ್ 11 ಎಸೆತಗಳಲ್ಲಿ 17 ರನ್ ಗಳಿಸುವ ಮೂಲಕ ಗೆಲುವಿನ ಭರವಸೆ ಮೂಡಿಸಿದರು. ಆದರೆ, ರಸೆಲ್ ತಂಡವನ್ನು ಗೆಲುವಿನತ್ತ ಸಾಗಿಸಲು ಸಾಧ್ಯವಾಗಲಿಲ್ಲ. ರಸೆಲ್ 16ನೇ ಔಟಾಗುತ್ತಿದಂತೆ ಕೋಲ್ಕತ್ತಾ ಸರ್ವಪತನವಾಯಿತು. ಪಂಜಾಬ್ ಪರ ಯುಜ್ವೇಂದ್ರ ಚಹಾಲ್ ನಾಲ್ಕು ವಿಕೆಟ್ ಪಡೆದರೆ, ಮಾರ್ಕೊ ಜಾನ್ಸೆನ್ ಕೂಡ ಮೂರು ವಿಕೆಟ್ ಕಬಳಿಸಿದರು.

ಪಂಜಾಬ್ ಪೆವಿಲಿಯನ್ ಪರೇಡ್

ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪಂಜಾಬ್ ಕಿಂಗ್ಸ್ ಪರ ಪ್ರಿಯಾಂಶ್ ಆರ್ಯ ಮತ್ತು ಪ್ರಭಾಸಿಮ್ರಾನ್ ಸಿಂಗ್ ಇನ್ನಿಂಗ್ಸ್ ತೆರೆದರು. ಈ ಜೋಡಿ ಪಂಜಾಬ್ ತಂಡಕ್ಕೆ ಉತ್ತಮ ಆರಂಭ ನೀಡುವ ಮೂನ್ಸೂಚನೆ ನೀಡಿತು. ಆದರೆ, ಇದಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬೌಲರ್ಸ್ ಅವಕಾಶ ನೀಡಲಿಲ್ಲ. ಪಂಜಾಬ್ ತಂಡ 54 ರನ್ ಗಳಿಸುವ ಮೊದಲು 4 ವಿಕೆಟ್ ಕಳೆದುಕೊಂಡಿತು.

ಪ್ರಿಯಾಂಶ್ ಆರ್ಯ 12 ಎಸೆತಗಳಲ್ಲಿ 22 ರನ್, ಪ್ರಭಾಸಿಮ್ರಾನ್ ಸಿಂಗ್ 15 ಎಸೆತಗಳಲ್ಲಿ 30 ರನ್, ಶ್ರೇಯಸ್ ಅಯ್ಯರ್ 0, ಜೋಶ್ ಇಂಗ್ಲಿಸ್ 6 ಎಸೆತಗಳಲ್ಲಿ 2 ರನ್ ಗಳಿಸಿ ಔಟಾದರು. ಆರಂಭದಲ್ಲಿ ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್ ಮತ್ತು ಶ್ರೇಯಸ್ ಅಯ್ಯರ್ ವಿಕೆಟ್ ಪಡೆಯುವ ಮೂಲಕ ವೇಗಿ ಹರ್ಷಿತ್ ರಾಣಾ ಪಂಜಾಬ್ ತಂಡಕ್ಕೆ ಶಾಕ್ ನೀಡಿದರು.

ಟಾಪ್ ಆರ್ಡರ್‍‌ನಲ್ಲಿ ಕುಸಿತ ಕಂಡ ಪಂಜಾಬ್ ಸಂಕಷ್ಟಕ್ಕೆ ಸಿಲುಕಿತು. ನಂತರ ಬಂದ ನೆಹಾಲ್ ವಧೇರಾ 9 ಎಸೆತಗಳಲ್ಲಿ 10 ರನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 10 ಎಸೆತಗಳಲ್ಲಿ 7 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಮಧ್ಯಮ ಕ್ರಮಾಂಕದಲ್ಲಿ ಪಂಜಾಬ್ ತಂಡಕ್ಕೆ ಈ ಇಬ್ಬರ ಆಸರೆಯಾಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಈ ಜೋಡಿ ತಂಡಕ್ಕೆ ಆಸರೆಯಾಗಲಿಲ್ಲ.

ಶಶಾಂಕ್ ಸಿಂಗ್ 17 ಎಸೆತಗಳಲ್ಲಿ 18 ರನ್ ಗಳಿಸಿ ಚೇತರಿಕೆ ಆಟವಾಡಿ ಔಟಾದರು. ಸೂರ್ಯಾಂಶ್ ಶೆಡ್ಜ್ 4 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಮಾರ್ಕೊ ಜಾನ್ಸೆನ್ 1 ರನ್, ಕ್ಸೇವಿಯರ್ ಬಾರ್ಟ್ಲೆಟ್ 11 ರನ್, ಅರ್ಶ್ದೀಪ್ ಸಿಂಗ್ 1 ರನ್ ಗಳಿಸಿ ಔಟಾದರು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಸಂಘಟಿತ ಬೌಲಿಂಗ್ ಪ್ರದರ್ಶನ ಕಂಡುಬಂತು. ಯುವ ವೇಗದ ಬೌಲರ್ ಹರ್ಷಿತ್ ರಾಣಾ 3 ವಿಕೆಟ್ ಉರುಳಿಸಿ ಸಂಭ್ರಮಿಸಿದರು. ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ 2 ವಿಕೆಟ್ ಕಬಳಿಸಿದರೆ, ವೈಭವ್ ಆರೋರಾ ಮತ್ತು ಅನ್ರಿಚ್ ನಾರ್ಟ್ಜೆ ತಲಾ ಒಂದೊಂದು ವಿಕೆಟ್ ಪಡೆದರು.

ಉಭಯ ತಂಡಗಳ ಪ್ಲೇಯಿಂಗ್-11

ಪಂಜಾಬ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ಪ್ರಭುಸಿಮ್ರಾನ್ ಸಿಂಗ್, ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಜೋಶ್ ಇಂಗ್ಲಿಸ್ (ವಿಕೆಟ್‌ಕೀಪರ್), ಶಶಾಂಕ್ ಸಿಂಗ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕೊ ಜಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಸೂರ್ಯಾಂಶ್ ಶೆಡ್ಜ್.

ಕೋಲ್ಕತ್ತಾ ನೈಟ್ ರೈಡರ್ಸ್: ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ಸುನಿಲ್ ನರೈನ್, ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಹರ್ಷಿತ್ ರಾಣಾ, ವೈಭವ್ ಅರೋರಾ, ಅನ್ರಿಚ್ ನಾರ್ಟ್ಜೆ, ವರುಣ್ ಚಕ್ರವರ್ತಿ, ಆಂಗ್ಕ್ರಿಶ್ ರಘುವಂಶಿ.

Story first published: Tuesday, April 15, 2025, 21:21 [IST]
Other articles published on Apr 15, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+