Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

PBKS vs MI: ಮುಂಬೈಗೆ ಜಯದ ತಿಲಕ; ಪಂಜಾಬ್‌ಗೆ ಸೋಲಿನ ಪಂಚ್

ಧರ್ಮಶಾಲಾ: ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಯುವ ಆರಂಭಿಕ ಆಟಗಾರರಾದ ಪ್ರಿಯಾಂಶ್‌ ಆರ್ಯ (17 ಎಸೆತ, 22) ಹಾಗೂ ಪ್ರಭ್‌ಸಿಮ್ರನ್ ಸಿಂಗ್ ಮೊದಲ ವಿಕೆಟ್‌ಗೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಮುಂಬೈ ಬೌಲರ್‌ಗಳು ಆರಂಭದಲ್ಲಿ ವಿಫಲರಾದರು. ಈ ಜೋಡಿ 5.3 ಓವರ್‌ಗಳಲ್ಲಿ 50 ರನ್‌ ಸೇರಿಸಿತು.

ಎರಡನೇ ವಿಕೆಟ್‌ಗೆ ಆರಂಭಿಕ ಪ್ರಭ್‌ಸಿಮ್ರನ್‌ ಸಿಂಗ್ ಹಾಗೂ ಕೂಪರ್ ಕಾನೋಲಿ (22 ಎಸೆತ, 21 ರನ್) ಜೋಡಿ ಸಹ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿ ಅರ್ಧಶತಕ ಜೊತೆಯಾಟವನ್ನು ನೀಡಿತು. ಪ್ರಭ್‌ಸಿಮ್ರನ್‌ ಸಿಂಗ್‌ 32 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್‌ ನೆರವಿನಿಂದ 57 ರನ್‌ ಸೇರಿಸಿದರು.

PBKS vs MI

ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ (4), ಸೂರ್ಯಾಂಶ್‌ ಶೆಡ್ಗೆ (8), ಶಶಾಂಕ್ ಸಿಂಗ್ (2), ಮಾರ್ಕೊ ಜಾನ್ಸನ್‌ (2) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಅಜ್ಮತುಲ್ಲಾ ಒಮರ್ಜೈ ಭರ್ಜರಿ ಬ್ಯಾಟಿಂಗ್ ನಡೆಸಿದರು. ಇವರು 17 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಹಾಯದಿಂದ 38 ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. ಪಂಜಾಬ್ ಕಿಂಗ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 200 ರನ್‌ ಸೇರಿಸಿತು.

ಶಾರ್ದೂಲ್ ಅಬ್ಬರ

ಭರವಸೆಯ ಬೌಲರ್‌ ಶಾರ್ದೂಲ್ ಠಾಕೂರ್ ಅಬ್ಬರಿಸಿದರು. ಇವರು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸಿದರು. ಶಾರ್ದೂಲ್‌ 4 ಓವರ್ ಬೌಲಿಂಗ್ ಮಾಡಿ 39 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು. ದೀಪಕ್ ಚಾಹರ್ 2 ವಿಕೆಟ್‌ ಉರುಳಿಸಿದರು.

PBKS vs MI

201 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕರಾದ ಅನುಭವಿ ರೋಹಿತ್ ಶರ್ಮಾ (26 ಎಸೆತ, 25 ರನ್) ಹಾಗೂ ರಯಾನ್‌ ರಿಕಲ್ಟನ್‌ (23 ಎಸೆತ, 48 ರನ್) ಜೋಡಿ ಮೊದಲ ವಿಕೆಟ್‌ಗೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಪವರ್ ಪ್ಲೇನಲ್ಲಿ ವಿಕೆಟ್‌ ಬೀಳದಂತೆ ನೋಡಿಕೊಂಡಿತು. ಈ ಜೋಡಿ 6.3 ಓವರ್‌ಗಳಲ್ಲಿ 61 ರನ್ ಸೇರಿಸಿತು. ಭರವಸೆಯ ಆಟಗಾರ ನಮನ್ ಧೀರ್ (9) ಜವಾಬ್ದಾರಿ ಮರೆತರು.

ತಿಲಕ್ ಅರ್ಧಶತಕ

4ನೇ ವಿಕೆಟ್‌ಗೆ ತಿಲಕ್ ವರ್ಮಾ ಅವರನ್ನು ಸೇರಿಕೊಂಡ ಶೆರ್ಫೇನ್ ರುದರ್ಫೋರ್ಡ್ (20) ಭರ್ಜರಿ ಜೊತೆಯಾಟ ನೀಡಿದರು. ಈ ಜೋಡಿ 42 ಎಸೆತಗಳಲ್ಲಿ 61 ರನ್‌ ಸೇರಿಸಿತು. 5ನೇ ವಿಕೆಟ್‌ಗೆ ತಿಲಕ್ ವರ್ಮಾ ಹಾಗೂ ವಿಲ್ ಜಾಕ್ಸ್ ಸಹ ಅರ್ಧಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.

ಭರವಸೆಯ ಮಧ್ಯಮ ಕ್ರಮಾಂಕದ ಬ್ಯಾಟರ್ ತಿಲಕ್ ವರ್ಮಾ ಸೊಗಸಾದ ಬ್ಯಾಟಿಂಗ್ ನಡೆಸಿದರು. ಇವರು 33 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ನೆರವಿನಿಂದ ಅಜೇಯ 75 ರನ್‌ ಸಿಡಿಸಿ ಮಿಂಚಿದರು.

Story first published: Thursday, May 14, 2026, 23:39 [IST]
Other articles published on May 14, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+