Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

PBKS vs RCB: ಕಿಂಗ್ಸ್‌ ಬಗ್ಗುಬಡೆದ ಆರ್‌ಸಿಬಿ ಪ್ಲೇ ಆಫ್‌ಗೆ ಕ್ವಾಲಿಫೈ

ಧರ್ಮಶಾಲಾ: ಲೀಗ್ ಹಂತದ ಮಹತ್ವದ ಪಂದ್ಯದಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) 23 ರನ್‌ಗಳಿಂದ 19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌)ನ 61ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್ ತಂಡವನ್ನು ಮಣಿಸ, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರ ಪಡಿಸಿಕೊಂಡಿದ್ದು, ಪ್ಲೇಆಫ್‌ಗೆ ಕ್ವಾಲಿಫೈ ಆಗಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ತಂಡದ ಸ್ಟಾರ್ ಆಟಗಾರರು ಜಾಕೊಬ್ ಬೆಥೆಲ್‌ (11) ಹಾಗೂ ವಿರಾಟ್‌ ಕೊಹ್ಲಿ ಮೊದಲ ವಿಕೆಟ್‌ಗೆ 21 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಎರಡನೇ ವಿಕೆಟ್‌ಗೆ ವಿರಾಟ್‌ ಕೊಹ್ಲಿ, ದೇವದತ್ ಪಡಿಕ್ಕಲ್‌ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 42 ಎಸೆತಗಳಲ್ಲಿ 76 ರನ್ ಸೇರಿಸಿತು. ಈ ಹಂತದಲ್ಲಿ ದೇವದತ್ ಪಡಿಕ್ಕಲ್‌ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 45 ರನ್‌ ಬಾರಿಸಿ ಔಟ್ ಆದರು.

PBKS vs RCB

ನಾಯಕ ರಜತ್ ಪಾಟಿದಾರ್ ಅವರ ಅನುಪಸ್ಥಿತಿಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಅವಕಾಶವನ್ನು ಪಡೆದ ವೆಂಕಟೇಶ್‌ ಅಯ್ಯರ್‌, ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಸೇರಿಕೊಂಡು ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 35 ಎಸೆತಗಳಲ್ಲಿ 60 ರನ್ ಸೇರಿಸಿತು. ಈ ಹಂತದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ್ದ ವಿರಾಟ್‌ ಕೊಹ್ಲಿ 4 ಬೌಂಡರಿ, 3 ಸಿಕ್ಸರ್ ಸಹಿತ 58 ರನ್ ಸಿಡಿಸಿ ಯುಜ್ವೇಂದ್ರ ಚಾಹಲ್‌ಗೆ ವಿಕೆಟ್‌ ಒಪ್ಪಿಸಿದರು.

ವೆಂಕಟೇಶ್ ಅಯ್ಯರ್ ಆರ್ಭಟ

4ನೇ ವಿಕೆಟ್‌ಗೆ ಟಿಮ್‌ ಡೇವಿಡ್ ಹಾಗೂ ವೆಂಕಟೇಶ್ ಅಯ್ಯರ್ ಅವರು ಸೊಗಸಾದ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯು ಡೆತ್ ಓವರ್‌ಗಳಲ್ಲಿ ರನ್‌ ವೇಗವನ್ನು ಹೆಚ್ಚಿಸಲು ಶ್ರಮಿಸಿದರು. ಈ ಜೋಡಿ 30 ಎಸೆತಗಳಲ್ಲಿ 65 ರನ್ ಸೇರಿಸಿತು. ವೆಂಕಟೇಶ್‌ ಅಯ್ಯರ್‌ 8 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 73 ರನ್‌ ಬಾರಿಸಿದರು. ಟಿಮ್ ಡೇವಿಡ್‌ 28 ರನ್‌ ಸಿಡಿಸಿ ಔಟ್ ಆದರು. ಆರ್‌ಸಿಬಿ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 222 ರನ್‌ ಸೇರಿಸಿತು.

ಕಳಪೆ ಆರಂಭ

ಪಂಜಾಬ್ ತಂಡದ ಯುವ ಭರವಸೆಯ ಆಟಗಾರರಾದ ಪ್ರಭ್‌ಸಿಮ್ರನ್ ಸಿಂಗ್ (2), ಪ್ರಿಯಾಂಶ್ ಆರ್ಯ (0), ನಾಯಕ ಶ್ರೇಯಸ್ ಅಯ್ಯರ್‌ (1) ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಪಂಜಾಬ್ ತಂಡದ ಸ್ಟಾರ್ ಆಟಗಾರರು ಪವರ್ ಪ್ಲೇನಲ್ಲಿ ವಿಕೆಟ್‌ ಒಪ್ಪಿಸಿದರು. ಈ ವೇಳೆ ಭುವನೇಶ್ವರ್ ಕುಮಾರ್ ಮಾರಕ ದಾಳಿ ಮಿಂಚಿದರು. ಕೂಪರ್ ಕಾನೋಲಿ 37 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು. ಸೂರ್ಯಂಶ್ ಶೆಡ್ಗೆ 2 ಬೌಂಡರಿ, 2 ಸಿಕ್ಸರ್ ನೆರವಿನಿಂದ 35 ರನ್‌ ಸಿಡಿಸಿದರು.

PBKS vs RCB

6ನೇ ವಿಕೆಟ್‌ಗೆ ಮಾರ್ಕಸ್‌ ಸ್ಟೋಯ್ನಿಸ್ (37) ಹಾಗೂ ಶಶಾಂಕ್ ಸಿಂಗ್ ಜೋಡಿ ಸೋಲಿನ ಅಂತರವನ್ನು ಕಡಿಮೆ ಮಾಡುವಲ್ಲಿ ಶ್ರಮಿಸಿದರು. ಈ ಜೋಡಿ 32 ಎಸೆತಗಳಲ್ಲಿ 67 ರನ್ ಸೇರಿಸಿತು. ಶಶಾಂಕ್ ಸಿಂಗ್ 4 ಬೌಂಡರಿ, 4 ಸಿಕ್ಸರ್ ನೆರವಿನಿಂದ 56 ರನ್ ಬಾರಿಸಿದರು. ಪಂಜಾಬ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 199 ರನ್‌ ಸೇರಿಸಿತು. ಆರ್‌ಸಿಬಿ ಪರ ರಸಿಕ್ ಸಲಾಂ ದಾರ್ 3, ಭುವನೇಶ್ವರ್ ಕುಮಾರ್ 2 ವಿಕೆಟ್‌ ಉರುಳಿಸಿದರು.

Story first published: Sunday, May 17, 2026, 20:21 [IST]
Other articles published on May 17, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+