Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

PBKS vs RCB: ಆರ್‌ಸಿಬಿ, ಪಂಜಾಬ್‌ ನಡುವೆ ಹೈವೋಲ್ಟೇಜ್ ಫೈಟ್‌; ಕಿಂಗ್ಸ್‌ಗೆ ಗೆಲುವು ಅನಿವಾರ್ಯ

ಧರ್ಮಶಾಲಾ: ಪ್ರಸಕ್ತ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಗೆಲುವಿನ ಹುಡುಕಾಟದಲ್ಲಿರುವ ಪಂಜಾಬ್ ಕಿಂಗ್ಸ್‌ ನಡುವೆ 19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಲೀಗ್‌ ಹಂತದ 61ನೇ ಪಂದ್ಯ ನಡೆಯಲಿದೆ. ಈ ಬಾರಿಯ ಐಪಿಎಲ್‌ ಲೀಗ್ ಹಂತದ ಪಂದ್ಯಗಳು ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದ್ದು, ಪಂದ್ಯಗಳು ರೋಚಕತೆ ಹೆಚ್ಚಿಸಿದೆ. ಉಭಯ ತಂಡಗಳು ಕಳೆದ ಬಾರಿ ಪ್ರಶಸ್ತಿ ಸುತ್ತಿನಲ್ಲಿ ಕಾದಾಟವನ್ನು ನಡೆಸಿದ್ದವು.

ಲೀಗ್‌ ಹಂತದ ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡಿ ಸತತ ಜಯದ ನಾಗಾಲೋಟವನ್ನು ಮುಂದುವರಿಸಿದ್ದ ಪಂಜಾಬ್‌ ಕಿಂಗ್ಸ್‌, ಲೀಗ್‌ ಹಂತದ ಮಹತ್ವದ ಘಟ್ಟದಲ್ಲಿ ಸತತ ಐದು ಪಂದ್ಯಗಳನ್ನು ಸೋತಿದ್ದು ಸಂಕಷ್ಟದಲ್ಲಿದೆ. ಭಾನುವಾರ ಆರ್‌ಸಿಬಿ ವಿರುದ್ಧ ನಡೆಯುವ ಪಂದ್ಯ ಪಂಜಾಬ್ ಕಿಂಗ್ಸ್ ತಂಡದ ಪಾಲಿಗೆ ಮಹತ್ವದಾಗಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ ಮಾತ್ರ ಕಿಂಗ್ಸ್‌ ಪ್ಲೇ ಆಫ್‌ ಕನಸು ಫಲಿಸುತ್ತದೆ. ಇಲ್ಲದೆ ಇದ್ದರೆ ಬೇರೆ ತಂಡಗಳ ಫಲಿತಾಂಶದ ಮೇಲೆ ಕಾಯಬೇಕಾಗುತ್ತದೆ.

PBKS vs RCB

ಒಟ್ಟಾರೆ ಪಂಜಾಬ್‌, ಆರ್‌ಸಿಬಿ ತಂಡಗಳು ಐಪಿಎಲ್‌ನಲ್ಲಿ 37 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಆರ್‌ಸಿಬಿ 19, ಪಂಜಾಬ್‌ 18 ಪಂದ್ಯಗಳಲ್ಲಿ ಜಯ ದಾಖಲಿಸಿದೆ. ಇನ್ನು ಈ ಪಂದ್ಯದಲ್ಲಿ ಜಯ ದಾಖಲಿಸಿ ಪ್ಲೇ ಆಫ್‌ ಪ್ರವೇಶಿಸುವ ಕನಸು ಆರ್‌ಸಿಬಿ ತಂಡದ್ದಾಗಿದೆ. ಈಗಾಗಲೇ ಆರ್‌ಸಿಬಿ 16 ಅಂಕಗಳನ್ನು ಕಲೆ ಹಾಕಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ವಿರಾಟ್‌ ಆಕರ್ಷಣೆ

ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ ಅವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಇವರು ಈ ಲೀಗ್‌ನಲ್ಲಿ ಅಮೋಘವಾಗಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಜಾಕೊಬ್ ಬೆಥೆಲ್ ವಿರಾಟ್‌ಗೆ ಉತ್ತಮ ಸಾಥ್ ನೀಡುವ ಅನಿವಾರ್ಯತೆ ಇದೆ. ಫಿಲ್‌ ಸಾಲ್ಟ್ ಉಪಸ್ಥಿತಿಯ ಬಗ್ಗೆ ಯಾವುದೇ ಅಪ್‌ಡೇಟ್‌ ಲಭ್ಯವಾಗಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ದೇವದತ್ ಪಡಿಕ್ಕಲ್ ಸ್ಥಿರ ಪ್ರದರ್ಶನ ನೀಡಿದ್ದು ಭರವಸೆ ಮೂಡಿಸಿದ್ದಾರೆ. ರಜತ್‌ ಪಾಟಿದಾರ್ ರನ್‌ ವೇಗಕ್ಕೆ ಚುರುಕು ನೀಡಬಲ್ಲ ಕ್ಷಮತೆಯನ್ನು ಸಾಬೀತು ಪಡಿಸಿದ್ದಾರೆ. ಉಳಿದ ಆಟಗಾರರು ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡಿದರೆ ದೊಡ್ಡ ಮೊತ್ತದ ಕನಸು ಫಲಿಸುತ್ತದೆ.

PBKS vs RCB

ವೇಗದ ಬೌಲಿಂಗ್‌ನ ನೊಗವನ್ನು ಭುವನೇಶ್ವರ್ ಕುಮಾರ್ ಹೊತ್ತಿದ್ದಾರೆ. ಇವರು ಈ ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಗೆ ಜೋಶ್ ಹ್ಯಾಜಲ್‌ವುಡ್‌ ಉತ್ತಮ ಸಾಥ್ ನೀಡಲಿದ್ದಾರೆ. ರಸಿಕ್ ಸಲಾಂ ದಾರ್, ಕೃನಾಲ್ ಪಾಂಡ್ಯ ಮಧ್ಯದ ಓವರ್‌ಗಳಲ್ಲಿ ಎದುರಾಳಿ ಬ್ಯಾಟರ್‌ಗಳಿಗೆ ಕಾಡಿದರೆ ಭಾನುವಾರ ಆರ್‌ಸಿಬಿ ಪ್ಲೇ ಆಫ್‌ ಟಿಕೆಟ್‌ ಪಡೆಯಬಹುದಾಗಿದೆ.

ಒತ್ತಡದಲ್ಲಿ ಪಂಜಾಬ್‌

ಪಂಜಾಬ್‌ ಕಿಂಗ್ಸ್ ತಂಡ ಸದ್ಯ ಒತ್ತಡದಲ್ಲಿದೆ. ಪಂಜಾಬ್ ಆಡಿದ 12 ಪಂದ್ಯಗಳಲ್ಲಿ 6 ಜಯ, 5 ಸೋಲು ಕಂಡಿದ್ದು, 1 ಪಂದ್ಯ ರದ್ದಾಗಿದ್ದು 13 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಉಳಿದ ಎರಡೂ ಪಂದ್ಯಗಳಲ್ಲಿ ಜಯ ದಾಖಲಿಸಿದರೆ ಪಂಜಾಬ್‌ 17 ಅಂಕಗಳನ್ನು ಕಲೆ ಹಾಕುತ್ತದೆ. ಆಗ ಸುಲಭವಾಗಿ ಪ್ಲೇ ಆಫ್ ಪ್ರವೇಶಿಸಬಹುದಾಗಿದೆ. ಪಂಜಾಬ್ ತಂಡದ ಯುವ ಆಟಗಾರರು ಆರ್‌ಸಿಬಿ ಬೌಲಿಂಗ್ ಸವಾಲನ್ನು ಮೆಟ್ಟಿನಿಂತು ರನ್ ಕಲೆ ಹಾಕುವ ಅನಿವಾರ್ಯತೆ ಇದೆ. ಇನ್ನು ಬೌಲರ್‌ಗಳು ಸರಿಯಾದ ಸ್ಥಳದಲ್ಲಿ ಬೌಲಿಂಗ್ ನಡೆಸಿದರೆ ಜಯದ ಆಸೆ ಫಲಿಸುತ್ತದೆ.

Story first published: Saturday, May 16, 2026, 15:19 [IST]
Other articles published on May 16, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+