PBKS vs RCB: ಧರ್ಮಶಾಲಾದತ್ತ ಎಲ್ಲರ ಚಿತ್ತ, ಕಿಂಗ್ಸ್ ಸೋತರೆ ಕಷ್ಟಕಷ್ಟ- ಆರ್‌ಸಿಬಿ ಕೈ ಹಿಡಿಯುತ್ತದಾ ಅದೃಷ್ಟ?
19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್)ನ ಮೊದಲ ಮೂರು ವಾರಗಳ ಕಾಲ ಸೋಲನ್ನೇ ಕಾಣದ ತಂಡ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದ ಪಂಜಾಬ್ ಕಿಂಗ್ಸ್, ಲೀಗ್ ಹಂತದ ಮಹತ್ವದ ಘಟ್ಟದಲ್ಲಿ ಸತತ ಸೋಲುಗಳನ್ನು ಕಂಡು ಸಂಕಷ್ಟಕ್ಕೆ ಸಿಲುಕಿದೆ. 19ನೇ ಆವೃತ್ತಿಯ ಪ್ಲೇ ಆಫ್‌ಗೆ ಸುಲಭವಾಗಿ ಪ್ರವೇಶಿಸಬಹುದು ಎಂಬ ಲೆಕ್ಕಾಚಾರವನ್ನು ಹಾಕಿಕೊಂಡಿದ್ದ ಪಂಜಾಬ್ ಕಿಂಗ್ಸ್‌ಗೆ, ದೊಡ್ಡ ಪೆಟ್ಟು ಬಿದ್ದಿದೆ. ತಂಡದ ಅತಿಯಾದ ಆತ್ಮವಿಶ್ವಾಸ ಸತತ ಸೋಲು ಕಾಣುವಂತೆ ಮಾಡಿದೆ. ಈಗ ಪಂಜಾಬ್‌ಗೆ ಮುಂದಿನ ಪಂದ್ಯಗಳು ಮಾಡು ಇಲ್ಲವೇ ಮಡಿ ಪಂದ್ಯಗಳಾಗಿರಲಿವೆ.
ಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಏಪ್ರಿಲ್ 25 ರಿಂದ ಈಚೆಗೆ ಗೆಲುವಿನ ಮುಖ ಕಾಣದೆ ಸಂಕಷ್ಟಕ್ಕೆ ಸಿಲುಕಿದೆ. ಆರಂಭದಲ್ಲಿ ರಾಜಸ್ಥಾನ್ ರಾಯಲ್ಸ್ ಪಂಜಾಬ್ ಅಜೇಯ ಓಟಕ್ಕೆ ಬ್ರೇಕ್ ಹಾಕಿದರೆ, ಬಳಿಕ ಗುಜರಾತ್, ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ತಂಡಗಳು ಪಂಜಾಬ್ ಗೆಲುವಿನ ಆಸೆಗೆ ಬರೆ ಎಳೆದಿವೆ. ಹೀಗಾಗಿ ಎಲ್ಲರ ಚಿತ್ತ ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ಫೈಟ್ ಮೇಲೆ ನೆಟ್ಟಿವೆ.

ನಿಜಕ್ಕೂ ಆರ್‌ಸಿಬಿ ವಿರುದ್ಧದ ಪಂದ್ಯ ಪಂಜಾಬ್ ಕಿಂಗ್ಸ್ ಪಾಲಿಗಿ ಪ್ರಿ ಕ್ವಾರ್ಟರ್ ಫೈನಲ್ ಮ್ಯಾಚ್ ಆಗಿರಲಿದೆ. ಈ ಪಂದ್ಯದಲ್ಲಿ ಪಂಜಾಬ್ ಗೆಲುವು ಸಾಧಿಸಿ, ಮೇ 23 ರಂದು ನಡೆಯಲಿರುವ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಜಯ ಸಾಧಿಸುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಪಂಜಾಬ್ ಕಿಂಗ್ಸ್ ಸುಲಭವಾಗಿ ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಾಗುತ್ತದೆ. ಇಲ್ಲದೇ ಇದ್ದಲ್ಲಿ ಬೇರೆ ತಂಡಗಳ ಫಲಿತಾಂಶದ ಮೇಲೆ ಎಲ್ಲವೂ ನಿರ್ಣಯವಾಗುತ್ತದೆ.
ಗೆಲುವೊಂದೆ ಟಾರ್ಗೆಟ್
ಪಂಜಾಬ್ ಕಿಂಗ್ಸ್ ಮುಂದಿನ ಹಾದಿ ನಿಜಕ್ಕೂ ಕಲ್ಲು ಮುಳ್ಳುಗಳಿಂದ ಕೂಡಿದೆ. ಕಳೆದ ಬಾರಿಯ ಐಪಿಎಲ್ ಫೈನಲ್‌ಗೆ ಅರ್ಹತೆ ಪಡೆದಿದ್ದ ತಂಡ ಈ ಬಾರಿ ಪ್ಲೇ ಆಫ್ ಪ್ರವೇಶಿಸಲು ಪರದಾಟ ನಡೆಸುವಂತೆ ಆಗಿದೆ. ಇದಕ್ಕೆ ಕಾರಣ ಹತ್ತು ಹಲವು. ಮುಂದಿನ ಪಂದ್ಯಗಳಲ್ಲಿ ಪಂಜಾಬ್ ತನ್ನ ಫೀಲ್ಡಿಂಗ್ ಉತ್ತಮ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಈ ಲೀಗ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಬಿಟ್ಟ ತಂಡಗಳ ಪಟ್ಟಿಯಲ್ಲಿ ಪಂಜಾಬ್ ಅಗ್ರ ಸ್ಥಾನ. ಈ ಒಂದು ವಿಭಾಗದಲ್ಲಿ ತಂಡ ಶಿಸ್ತುಬದ್ಧ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ.
ಪಂಜಾಬ್ ತಂಡದ ಮಿಡ್ಲ್ ಆರ್ಡರ್ ಬ್ಯಾಟಿಂಗ್ ಸಹ ಚಿಂತೆಯನ್ನು ಹೆಚ್ಚಿಸಿದೆ. ಮಧ್ಯದ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಯಾವುದೇ ಅನುಭವಿ ಹಾಗೂ ಯುವ ಆಟಗಾರ ರನ್ ಬಾರಿಸಿ ಭರವಸೆ ಮೂಡಿಸಲಿಲ್ಲ. ಹಲವು ಆಟಗಾರರು ಕೆಲವೊಂದು ಪಂದ್ಯದಲ್ಲಿ ಮಿಂಚಿದರು. ಆದರೆ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಈ ಎಲ್ಲ ನ್ಯೂನತೆಗಳನ್ನು ಪಂಜಾಬ್ ತಿದ್ದುಕೊಳ್ಳಲು ಇನ್ನು ಕೆಲವೇ ಗಂಟೆಗಳು ಉಳಿದಿವೆ.

ಹಾಲಿ ಚಾಂಪಿಯನ್ಸ್ ಸವಾಲು
ಪಂಜಾಬ್ ಮುಂದೆ ದೊಡ್ಡ ಸವಾಲೇ ಎದುರು ನಿಂತಿದೆ. ಹಾಲಿ ಚಾಂಪಿಯನ್ ಆರ್‌ಸಿಬಿ ಈ ಬಾರಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ತಂಡದ ಸ್ಟಾರ್ ಆಟಗಾರರು ತಮ್ಮ ಜವಾಬ್ದಾರಿಯನ್ನು ಅರಿತು ಆಡುತ್ತಿದ್ದಾರೆ. ಲಯ ಕಂಡುಕೊಂಡಿರುವ ಕಿಂಗ್ ವಿರಾಟ್ ಕೊಹ್ಲಿ, ಪಂಜಾಬ್ ಕಿಂಗ್ಸ್‌ಗೆ ತಲೆನೋವಾಗಲಿದ್ದಾರೆ. ಪವರ್ ಪ್ಲೇನಲ್ಲಿ ಧರ್ಮಶಾಲಾದಂತಹ ಪಿಚ್‌ಗಳ ಮೇಲೆ ಭುವನೇಶ್ವರ್ ಕುಮಾರ್ ಹಾಗೂ ಜೋಶ್ ಹ್ಯಾಜಲ್‌ವುಡ್ ಸವಾಲನ್ನು ಎದುರಿಸಲು ಪಂಜಾಬ್ ಪ್ಲ್ಯಾನ್ ಮಾಡಿಕೊಳ್ಳುವ ಅವಶ್ಯಕತೆ ಇದೆ.
ಪಂಜಾಬ್ ತಂಡವನ್ನು ಮತ್ತೊಮ್ಮೆ ಪ್ಲೇ ಆಫ್‌ಗೆ ಕೊಂಡೊಯ್ಯುವ ಕನಸು ಕಾಣುತ್ತಿರುವ ಶ್ರೇಯಸ್ ಅಯ್ಯರ್ ಅವರ ಕನಸಿಗೆ ಉಳಿದ ಆಟಗಾರರು ಸಾಥ್ ನೀಡಿದರೆ ಮಾತ್ರ, ಅಂಕ ಪಟ್ಟಿಯಲ್ಲಿಅಗ್ರ 4 ಸ್ಥಾನದಲ್ಲಿ ಉಳಿಯುವ ಆಸೆ ಫಲಿಸುತ್ತದೆ. ಇಲ್ಲದೇ ಇದ್ದರೆ ಲೀಗ್ ಹಂತದಲ್ಲೇ ಟೂರ್ನಿಗೆ ಗುಡ್ ಬೈ ಹೇಳಬೇಕಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications