Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

PBKS vs RCB: ಪಂಜಾಬ್‌ಗೆ ಮಾಡು ಇಲ್ಲವೇ ಮಡಿ ಪಂದ್ಯ, ಪ್ಲೇಯಿಂಗ್ ಇಲೆವೆನ್, ಪಿಚ್ ವರದಿ, ನೇರಪ್ರಸಾರದ ಮಾಹಿತಿ

ಧರ್ಮಶಾಲಾ: ಕಳೆದ ಆವೃತ್ತಿಯ ಐಪಿಎಲ್‌ನ ಫೈನಲ್‌ನಲ್ಲಿ ಕಾದಾಟ ನಡೆಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು 19ನೇ ಆವೃತ್ತಿ ಐಪಿಎಲ್‌ನ 61ನೇ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಪ್ಲೇ ಆಫ್‌ಗೆ ಪ್ರವೇಶಿಸುವ ಕನಸು ಬೆಂಗಳೂರು ತಂಡದ್ದಾಗಿದೆ. ಸತತ ಐದು ಸೋಲು ಕಂಡಿರುವ ಪಂಜಾಬ್‌ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಹೀಗಾಗಿ ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಹಾಲಿ ಚಾಂಪಿಯನ್ ಬೆಂಗಳೂರು ತಂಡ ಕೆಕೆಆರ್ ವಿರುದ್ಧ ಭರ್ಜರಿ ಜಯ ಸಾಧಿಸಿ ಆತ್ಮವಿಶ್ವಾಸದಿಂದ ಕಣಕ್ಕೆ ಇಳಿಯಲಿದೆ. ಪಂಜಾಬ್‌ ತನ್ನ ಹಿಂದಿನ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋಲು ಕಂಡಿದೆ. ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದು ಪಂದ್ಯ ರೋಚಕತೆ ಹೆಚ್ಚಿಸಿದೆ. ಪಂಜಾಬ್ ತಂಡದ ಸ್ಟಾರ್ ಆಟಗಾರರು ಲಯಕ್ಕೆ ಮರಳುವ ಅನಿವಾರ್ಯತೆ ಇದೆ.

PBKS vs RCB

ಪಂಜಾಬ್ ತಂಡದ ಬೌಲರ್‌ಗಳು ಕಳೆದ ಕೆಲವು ಪಂದ್ಯಗಳಲ್ಲಿ ವಿಕೆಟ್‌ ಬೇಟೆ ನಡೆಸುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ ಇವರಿಗೆ ಫೀಲ್ಡರ್‌ಗಳು ಸಹ ಉತ್ತಮ ಸಾಥ್ ನೀಡಿಲ್ಲ. ಸಾಲು ಸಾಲು ಕ್ಯಾಚ್‌ಗಳನ್ನು ಕೈ ಚೆಲ್ಲಿರುವ ಪಂಜಾಬ್‌ ಒತ್ತಡದಲ್ಲಿದೆ. ಆರ್‌ಸಿಬಿ ವಿರುದ್ಧ ಜಯ ದಾಖಲಿಸಿ ಪ್ಲೇ ಆಫ್‌ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಇರಾದೆ ಶ್ರೇಯಸ್ ಪಡೆಯದ್ದಾಗಿದೆ.

ಧರ್ಮಶಾಲಾದಲ್ಲಿ ಪಿಚ್ ಹೇಗಿರಲಿದೆ?

ಧರ್ಮಶಾಲಾದಲ್ಲಿ ಪಿಚ್ ಬ್ಯಾಟರ್‌ಗಳಿಗೆ ಸಹಾಯ ನೀಡಬಹುದು. ಆದರೂ ಟಾಸ್ ಮಹತ್ವದ ಪಾತ್ರವನ್ನು ವಹಿಸುತ್ತದೆ. ಟಾಸ್‌ ಗೆದ್ದ ತಂಡ ಚೇಸ್ ಮಾಡಲು ಬಯಸುತ್ತದೆ. ಅಲ್ಲದೆ ಈ ಮೈದಾನದ ಅಂಕಿ ಅಂಶಗಳು ಸಹ ಇದೇ ಕಥೆ ಹೇಳುತ್ತವೆ.

ಅಂಕಪಟ್ಟಿಯಲ್ಲಿ ಎರಡೂ ತಂಡಗಳು ಯಾವ ಸ್ಥಾನದಲ್ಲಿವೆ?

ಹಾಲಿ ಚಾಂಪಿಯನ್ ಆರ್‌ಸಿಬಿ ಆಡಿದ 12 ಪಂದ್ಯಗಳಲ್ಲಿ 8 ಜಯ ದಾಖಲಿಸಿದ್ದು 16 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಪಂಜಾಬ್ ಕಿಂಗ್ಸ್‌ ಆಡಿದ 12 ಪಂದ್ಯಗಳಲ್ಲಿ 13 ಅಂಕ ಸೇರಿಸಿ ನಾಲ್ಕನೇ ಸ್ಥಾನದಲ್ಲಿದೆ.

ಆರ್‌ಸಿಬಿ ವಿರುದ್ಧ ಪಂಜಾಬ್ ಸಂಭಾವ್ಯ ತಂಡ ಹೇಗಿರಲಿದೆ?

ಪ್ರಿಯಾಂಶ್ ಆರ್ಯ, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕೂಪರ್ ಕಾನಲಿ, ಶ್ರೇಯಸ್ ಅಯ್ಯರ್ (ನಾಯಕ), ಶಶಾಂಕ್ ಸಿಂಗ್, ಸೂರ್ಯಂಶ್ ಶೇಡ್ಗೆ, ಮಾರ್ಕಸ್ ಸ್ಟೋಯಿನಿಸ್/ಅಜ್ಮತುಲ್ಲಾ ಒಮರ್ಜಾಯ್, ಮಾರ್ಕೊ ಜಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್/ಬೆನ್ ಡ್ವಾರ್ಶುಯಿಸ್, ಅರ್ಶ್‌ದೀಪ್ ಸಿಂಗ್, ವೈಶಾಖ್ ವಿಜಯಕುಮಾರ್, ಯುಜ್ವೇಂದ್ರ ಚಾಹಲ್.

ಆರ್‌ಸಿಬಿ ಮಹತ್ವದ ಪಂದ್ಯದಲ್ಲಿ ಯಾರಿಗೆಲ್ಲ ಅವಕಾಶ ನೀಡಬಹುದು?

ಜೇಕಬ್ ಬೆಥೆಲ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್ (ನಾಯಕ), ಟಿಮ್ ಡೇವಿಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್/ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೇಕಬ್ ಡಫಿ/ಸುಯಾಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ರಸಿಖ್ ಸಲಾಮ್.

ಶ್ರೇಯಸ್‌ ಅಯ್ಯರ್‌ಗೆ ಈ ಪಂದ್ಯ ವಿಶೇಷ ಏಕೆ?

ಪಂಜಾಬ್‌ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಒಟ್ಟಾರೆ ಐಪಿಎಲ್ ಇತಿಹಾಸದಲ್ಲಿ ನಾಯಕರಾಗಿ 100ನೇ ಪಂದ್ಯವನ್ನು ಆಡಲಿದ್ದಾರೆ.

ಪಂದ್ಯದ ನೇರ ಪ್ರಸಾರವನ್ನು ಎಲ್ಲಿ ನೋಡಬಹುದು?

ಆರ್‌ಸಿಬಿ, ಪಂಜಾಬ್ ತಂಡಗಳ ನೇರಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದಾಗಿದೆ. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋ ಹಾಟ್‌ ಸ್ಟಾರ್‌ನಲ್ಲಿ ನೋಡಬಹುದಾಗಿದೆ.

19ನೇ ಆವೃತ್ತಿಯ 61ನೇ ಪಂದ್ಯ ನಡೆಯುವುದು ಯಾವಾಗ?

ಆರ್‌ಸಿಬಿ ಹಾಗೂ ಪಂಜಾಬ್ ತಂಡಗಳ ನಡುವಣ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ. ಪಂದ್ಯ ಆರಂಭಕ್ಕೂ ಅರ್ಧಗಂಟೆ ಮೊದಲು ಟಾಸ್ ನಡೆಯಲಿದೆ.

Story first published: Sunday, May 17, 2026, 7:05 [IST]
Other articles published on May 17, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+