PBKS vs RR IPL 2024: ಪಂಜಾಬ್-ರಾಜಸ್ಥಾನ ಉಭಯ ತಂಡಗಳ ಬಲಾಬಲ ವರದಿ; ಯಾರ ಪ್ರಾಬಲ್ಯ ಹೆಚ್ಚು?
ಮೇ 15 ಬುಧವಾರ, 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 65ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮತ್ತು ರಾಜಸ್ಥಾನ್ ರಾಯಲ್ಸ್(ಆರ್‌ಆರ್) ತಂಡಗಳು ಮುಖಾಮುಖಿಯಾಗುತ್ತಿವೆ. ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾತ್ರಿ 7.30 ರಿಂದ ಪಂದ್ಯ ನಡೆಯಲಿದೆ.
ಈ ಪಂದ್ಯದಲ್ಲಿ ಪಂಜಾಬ್ ತಂಡದ ನಾಯಕತ್ವವನ್ನು ಸ್ಯಾಮ್ ಕುರ್ರಾನ್ ವಹಿಸಲಿದ್ದು, ಅವರು ರಾಜಸ್ಥಾನದ ನಾಯಕ ಸಂಜು ಸ್ಯಾಮ್ಸನ್‌ಗೆ ಪ್ರಬಲ ಪೈಪೋಟಿ ನೀಡಲಿದ್ದಾರೆ. ಈ ಋತುವಿನಲ್ಲಿ ಪಂಜಾಬ್ ಮತ್ತು ರಾಜಸ್ಥಾನ ನಡುವಿನ ಮೊದಲ ಪಂದ್ಯ ಏಪ್ರಿಲ್ 13 ರಂದು ಮೊಹಾಲಿಯ ಮಲ್ಲನ್‌ಪುರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿತ್ತು.

ಪಂಜಾಬ್ ತಂಡವನ್ನು ರಾಜಸ್ಥಾನ 3 ವಿಕೆಟ್‌ಗಳಿಂದ ಸೋಲಿಸಿತು. ಇದೀಗ ರಾಜಸ್ಥಾನವನ್ನು ಸೋಲಿಸುವ ಮೂಲಕ ಕಳೆದ ಸೋಲಿಗೆ ಸೇಡು ತೀರಿಸಿಕೊಳ್ಳಲು ಪಂಜಾಬ್ ಸಿದ್ದವಾಗಿದೆ. ಇದರೊಂದಿಗೆ ಪ್ಲೇಆಫ್ ತಲುಪುವ ರಾಜಸ್ಥಾನದ ಹಾದಿಯನ್ನು ಸ್ವಲ್ಪ ಕಷ್ಟಕರವಾಗಿಸಲು ಪಂಜಾಬ್ ತಂತ್ರ ರೂಪಿಸಿದೆ. ಆದರೆ ರಾಜಸ್ಥಾನ ಈ ಪಂದ್ಯವನ್ನು ಗೆಲ್ಲುವ ಮೂಲಕ ಪ್ಲೇಆಫ್ ಟಿಕೆಟ್ ಅನ್ನು ಖಚಿತಪಡಿಸಿಕೊಳ್ಳಲು ಸಜ್ಜಾಗಿದೆ.
ಈ ಋತುವಿನಲ್ಲಿ ಉಭಯ ತಂಡಗಳ ಪ್ರದರ್ಶನ
ಐಪಿಎಲ್ 2024ರಲ್ಲಿ ರಾಜಸ್ಥಾನ ಈವರೆಗೆ 12 ಪಂದ್ಯಗಳನ್ನು ಆಡಿದೆ. 8 ಪಂದ್ಯ ಗೆದ್ದಿದ್ದರೆ, 4 ಪಂದ್ಯಗಳಲ್ಲಿ ಸೋಲು ಕಂಡು 16 ಅಂಕಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ 2ನೇ ಸ್ಥಾನದಲ್ಲಿದೆ. ಪಂಜಾಬ್ ಕೂಡ 12 ಪಂದ್ಯಗಳನ್ನು ಆಡಿದೆ. 4 ಪಂದ್ಯಗಳಲ್ಲಿ ಗೆದ್ದಿದ್ದರೆ, 8 ಪಂದ್ಯಗಳಲ್ಲಿ ಸೋಲು ಕಂಡಿದೆ. ಸದ್ಯ ಪಂಜಾಬ್ 8 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ 10ನೇ ಸ್ಥಾನದಲ್ಲಿದೆ.

ಪಂಜಾಬ್-ರಾಜಸ್ಥಾನ ಹೆಡ್ ಟು ಹೆಡ್
ರಾಜಸ್ಥಾನ ಮತ್ತು ಪಂಜಾಬ್ ನಡುವೆ ಇದುವರೆಗೆ ಒಟ್ಟು 27 ಪಂದ್ಯಗಳು ನಡೆದಿವೆ. ರಾಜಸ್ಥಾನ 17 ಪಂದ್ಯಗಳನ್ನು ಗೆದ್ದಿದ್ದರೆ, ಪಂಜಾಬ್ ತಂಡ ಕೇವಲ 11 ಪಂದ್ಯಗಳನ್ನು ಗೆದ್ದಿದೆ. ಸಾಮಾನ್ಯವಾಗಿ ಪಂಜಾಬ್ ಮೇಲೆ ರಾಜಸ್ಥಾನ ಮೇಲುಗೈ ಸಾಧಿಸಿದೆ. ಈ ಎರಡು ತಂಡಗಳ ನಡುವಿನ ಕೊನೆಯ 5 ಪಂದ್ಯಗಳ ಬಗ್ಗೆ ನೋಡುವುದಾರೆ, ಇಲ್ಲಿಯೂ ರಾಜಸ್ಥಾನ ತನ್ನ ಪ್ರಾಬಲ್ಯವನ್ನು ಹಿಡಿತದಲ್ಲಿಟ್ಟುಕೊಂಡಿದೆ. ಕಳೆದ 5 ಪಂದ್ಯಗಳಲ್ಲಿ ರಾಜಸ್ಥಾನ 4 ಪಂದ್ಯಗಳನ್ನು ಗೆದ್ದಿದ್ದರೆ, ಪಂಜಾಬ್ 1 ಪಂದ್ಯವನ್ನು ಮಾತ್ರ ಗೆಲ್ಲಲು ಶಕ್ತವಾಗಿದೆ.
ಪಂಜಾಬ್ vs ರಾಜಸ್ಥಾನ ಪಂದ್ಯದ ಟಿವಿ, ಲೈವ್ ಸ್ಟ್ರೀಮಿಂಗ್ ವಿವರ
ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಐಪಿಎಲ್ 2024ರ ರೋಚಕ ಪಂದ್ಯವನ್ನು ಭಾರತದಲ್ಲಿ ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಿದ್ದರೆ, ಮೊಬೈಲ್‌ನಲ್ಲಿ ಜಿಯೋಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.
ಪಂಜಾಬ್ vs ರಾಜಸ್ಥಾನ ಸಂಭ್ಯಾವ ಆಡುವ 11ರ ಬಳಗ
ಪಂಜಾಬ್ ಕಿಂಗ್ಸ್ ತಂಡ : ಜಾನಿ ಬೈರ್‌ಸ್ಟೋವ್ (ವಿ.ಕೀ), ಪ್ರಭಾಸಿಮ್ರಾನ್ ಸಿಂಗ್, ರಿಲೆ ರೊಸೊವ್, ಸ್ಯಾಮ್ ಕರ್ರಾನ್ (ನಾಯಕ), ಜಿತೇಶ್ ಶರ್ಮಾ, ಶಶಾಂಕ್ ಸಿಂಗ್, ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಕಗಿಸೊ ರಬಾಡ.
ರಾಜಸ್ಥಾನ್ ರಾಯಲ್ಸ್ ತಂಡ : ಯಶಸ್ವಿ ಜೈಸ್ವಾಲ್, ಶುಭಂ ದುಬೆ, ಸಂಜು ಸ್ಯಾಮ್ಸನ್ (ವಿ.ಕೀ ಮತ್ತು ನಾಯಕ), ರಿಯಾನ್ ಪರಾಗ್, ಡೊನೊವನ್ ಫೆರೇರಾ, ರೋವ್‌ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications