PBKS vs SRH IPL 2024: ನಿತೀಶ್ ರೆಡ್ಡಿ ಆಕರ್ಷಕ ಅರ್ಧಶತಕ; ಪಂಜಾಬ್‌ಗೆ ಸವಾಲಿನ ಗುರಿ ನೀಡಿದ ಹೈದರಾಬಾದ್
ಮಂಗಳವಾರ, ಏಪ್ರಿಲ್ 9ರಂದು ಚಂಡೀಗಢದ ಮುಲ್ಲನ್‌ಪುರದ ಹೊಸ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 23ನೇ ರೋಚಕ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಪಂಜಾಬ್ ಕಿಂಗ್ಸ್ ತಂಡಕ್ಕೆ ಸವಾಲಿನ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿತೀಶ್ ರೆಡ್ಡಿ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 182 ರನ್‌ಗಳನ್ನು ಕಲೆಹಾಕಿದ್ದು, ಪಂಜಾಬ್ ಕಿಂಗ್ಸ್ ತಂಡಕ್ಕೆ 183 ರನ್‌ಗಳ ಗುರಿ ನೀಡಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ದೊಡ್ಡ ಆರಂಭ ನೀಡಲು ಪ್ರಯತ್ನಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 3.2 ಓವರ್‌ಗಳಲ್ಲಿ 27 ರನ್‌ಗಳ ಜೊತೆಯಾಟವಾಡಿತು. ಈ ವೇಳೆ 15 ಎಸೆತಗಳಲ್ಲಿ 4 ಬೌಂಡರಿಗಳ ಸಮೇತ 21 ರನ್ ಗಳಿಸಿ ಔಟಾದರು. ನಂತರ ಬಂದ ಏಡೆನ್ ಮಾರ್ಕ್ರಾಮ್ ಸೊನ್ನೆ ಸುತ್ತಿದರು.
ಇನ್ನು ಮತ್ತೊಬ್ಬ ಆರಂಭಿಕ ಅಭಿಷೇಕ್ ಶರ್ಮಾ 11 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 16 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇಂಪ್ಯಾಕ್ಟ್ ಪ್ಲೇಯರ್ ಅಗಿ ಬಂದ ರಾಹುಲ್ ತ್ರಿಪಾಠಿ 14 ಎಸೆತಗಳಲ್ಲಿ ಕೇವಲ 11 ರನ್ ಗಳಿಸಿದರು.

ಇನ್ನು ನಿತೀಶ್ ಕುಮಾರ್ ರೆಡ್ಡಿ ಕುಸಿದಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾದರು. ಕೇವಲ 37 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 64 ರನ್ ಬಾರಿಸಿ ಔಟಾದರು.
ನಂತರ ಬಂದ ಹೆನ್ರಿಚ್ ಕ್ಲಾಸೆನ್ 9 ರನ್, ಅಬ್ದುಲ್ ಸಮದ್ 12 ಎಸೆತಗಳಲ್ಲಿ 5 ಬೌಂಡರಿಗಳ ಸಮೇತ 25 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಶಹಬಾಜ್ ಅಹ್ಮದ್ 14 ರನ್, ಪ್ಯಾಟ್ ಕಮ್ಮಿನ್ಸ್ 3 ರನ್, ಭುವನೇಶ್ವರ್ ಕುಮಾರ್ 6 ರನ್ ಮತ್ತು ಜಯದೇವ್ ಉನಾದ್ಕಟ್ ಅಜೇಯ 6 ರನ್ ಗಳಿಸಿ ತಂಡದ ಮೊತ್ತ 180ರ ಗಡಿ ದಾಟಿಸಲು ನೆರವಾದರು.
ಇನ್ನು ಬೌಲಿಂಗ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಅರ್ಶ್‌ದೀಪ್ ಸಿಂಗ್ 4 ಓವರ್‌ಗಳಲ್ಲಿ 29 ರನ್ ನೀಡಿ 4 ವಿಕೆಟ್ ಕಬಳಿಸಿದರು. ಸ್ಯಾಮ್ ಕರ್ರಾನ್ 4 ಓವರ್‌ಗಳಲ್ಲಿ 41 ರನ್ ನೀಡಿ 2 ವಿಕೆಟ್ ಪಡೆದರೆ, ಹರ್ಷಲ್ ಪಟೇಲ್ 4 ಓವರ್‌ಗಳಲ್ಲಿ 30 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಕಗಿಸೊ ರಬಾಡ ಒಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications