ಮಂಗಳವಾರ, ಏಪ್ರಿಲ್ 9ರಂದು ಚಂಡೀಗಢದ ಮುಲ್ಲನ್‌ಪುರದ ಹೊಸ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 23ನೇ ರೋಚಕ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.
ಈ ಮೂಲಕ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ನ್‌ರೈಸರ್ಸ್ ಹೈದರಾಬಾದ್ ತಂಡ ಆಡಿದ ಐದು ಪಂದ್ಯಗಳಲ್ಲಿ ಮೂರು ಮತ್ತು ಎರಡು ಸೋಲುಗಳೊಂದಿಗೆ 6 ಅಂಕಗಳನ್ನು ಕಲೆಹಾಕಿದೆ. ಅಷ್ಟೇ ಪಂದ್ಯಗಳನ್ನು ಆಡಿರುವ ಪಂಜಾಬ್ ಕಿಂಗ್ಸ್ ತಂಡ ಮೂರು ಸೋಲು ಮತ್ತು ಎರಡು ಗೆಲುವುಗಳೊಂದಿಗೆ 4 ಅಂಕ ಗಳಿಸಿದೆ.

ಹೊಸ ವರ್ಷ ಯುಗಾದಿ ದಿನದಂದು ಕಾವ್ಯಾ ಮಾರನ್ ಸಹ-ಒಡೆತನದ ತಂಡ ಗೆಲುವಿನ ಬೆಲ್ಲ ಸವಿದರೆ, ಪ್ರೀತಿ ಜಿಂಟಾ ಸಹ-ಒಡೆತನದ ತಂಡ ಸೋಲಿನ ಬೇವು ಸವಿಯಬೇಕಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿತೀಶ್ ರೆಡ್ಡಿ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 182 ರನ್‌ಗಳನ್ನು ಕಲೆಹಾಕಿತ್ತು.
183 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿ ಕೇವಲ 2 ರನ್‌ಗಳ ರೋಚಕ ಸೋಲು ಕಂಡಿತು.

ಕೊನೆಯ ಓವರ್‌ನಲ್ಲಿ ಗೆಲುವಿಗೆ ಪಂಜಾಬ್ ಕಿಂಗ್ಸ್ ತಂಡಕ್ಕೆ 29 ರನ್‌ಗಳು ಬೇಕಾಗಿದ್ದಾಗ ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮಾ ಜೋಡಿ 26 ರನ್ ಗಳಿಸಿದ ಕೆಚ್ಚೆದೆಯ ಹೋರಾಟದ ಹೊರತಾಗಿಯೂ 2 ರನ್‌ಗಳ ವೀರೋಚಿತ ಸೋಲು ಅನುಭವಿಸಿತು.
ಪಂಜಾಬ್ ಕಿಂಗ್ಸ್ ತಂಡದ ಇನ್ನಿಂಗ್ಸ್ ಆರಂಭಿಸಿದ ನಾಯಕ ಶಿಖರ್ ಧವನ್ ಮತ್ತು ಜಾನಿ ಬೈರ್‌ಸ್ಟೋವ್ ಉತ್ತಮ ಆರಂಭ ನೀಡಲಿಲ್ಲ. ಜಾನಿ ಬೈರ್‌ಸ್ಟೋವ್ ಸೊನ್ನೆಗೆ ಔಟಾದರೆ, ಶಿಖರ್ ಧವನ್ 14 ರನ್ ಗಳಿಸಿದರು. ನಂತರ ಬಂದ ಪ್ರಭ್‌ಸಿಮ್ರಾನ್ ಸಿಂಗ್ ಕೇವಲ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಸ್ಯಾಮ್ ಕರ್ರಾನ್ 29 ರನ್, ಸಿಕಂದರ್ ರಝಾ 28 ರನ್, ಶಶಾಂಕ್ ಸಿಂಗ್ ಅಜೇಯ 46 ರನ್, ಜಿತೇಶ್ ಶರ್ಮಾ 19 ರನ್ ಮತ್ತು ಅಶುತೋಷ್ ಶರ್ಮಾ ಅಜೇಯ 33 ರನ್ ಗಳಿಸಿದರು. ಆದರೆ ಗೆಲುವಿನ ದಡ ತಲುಪಿಸಲು ಸಾಧ್ಯವಾಗಲಿಲ್ಲ.
ಇನ್ನು ಬೌಲಿಂಗ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಭುವನೇಶ್ ಕುಮಾರ್ 2 ವಿಕೆಟ್ ಪಡೆದರೆ, ಪ್ಯಾಟ್ ಕಮ್ಮಿನ್ಸ್. ಟಿ ನಟರಾಜನ್, ನಿತೀಶ್ ರೆಡ್ಡಿ ಮತ್ತು ಜಯದೇವ್ ಉನಾದ್ಕಟ್ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಸನ್ ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ದೊಡ್ಡ ಆರಂಭ ನೀಡಲು ಪ್ರಯತ್ನಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 3.2 ಓವರ್‌ಗಳಲ್ಲಿ 27 ರನ್‌ಗಳ ಜೊತೆಯಾಟವಾಡಿತು.
ಇನ್ನು ಮತ್ತೊಬ್ಬ ಆರಂಭಿಕ ಅಭಿಷೇಕ್ ಶರ್ಮಾ 11 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 16 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇಂಪ್ಯಾಕ್ಟ್ ಪ್ಲೇಯರ್ ಅಗಿ ಬಂದ ರಾಹುಲ್ ತ್ರಿಪಾಠಿ 14 ಎಸೆತಗಳಲ್ಲಿ ಕೇವಲ 11 ರನ್ ಗಳಿಸಿದರು.
ಇನ್ನು ನಿತೀಶ್ ಕುಮಾರ್ ರೆಡ್ಡಿ ಕುಸಿದಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾದರು. ಕೇವಲ 37 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 64 ರನ್ ಬಾರಿಸಿ ಔಟಾದರು.
ನಂತರ ಬಂದ ಹೆನ್ರಿಚ್ ಕ್ಲಾಸೆನ್ 9 ರನ್, ಅಬ್ದುಲ್ ಸಮದ್ 12 ಎಸೆತಗಳಲ್ಲಿ 5 ಬೌಂಡರಿಗಳ ಸಮೇತ 25 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಶಹಬಾಜ್ ಅಹ್ಮದ್ 14 ರನ್, ಪ್ಯಾಟ್ ಕಮ್ಮಿನ್ಸ್ 3 ರನ್, ಭುವನೇಶ್ವರ್ ಕುಮಾರ್ 6 ರನ್ ಮತ್ತು ಜಯದೇವ್ ಉನಾದ್ಕಟ್ ಅಜೇಯ 6 ರನ್ ಗಳಿಸಿ ತಂಡದ ಮೊತ್ತ 180ರ ಗಡಿ ದಾಟಿಸಲು ನೆರವಾದರು.
ಇನ್ನು ಬೌಲಿಂಗ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಅರ್ಶ್‌ದೀಪ್ ಸಿಂಗ್ 4 ಓವರ್‌ಗಳಲ್ಲಿ 29 ರನ್ ನೀಡಿ 4 ವಿಕೆಟ್ ಕಬಳಿಸಿದರು. ಸ್ಯಾಮ್ ಕರ್ರಾನ್ 4 ಓವರ್‌ಗಳಲ್ಲಿ 41 ರನ್ ನೀಡಿ 2 ವಿಕೆಟ್ ಪಡೆದರೆ, ಹರ್ಷಲ್ ಪಟೇಲ್ 4 ಓವರ್‌ಗಳಲ್ಲಿ 30 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಕಗಿಸೊ ರಬಾಡ ಒಂದು ವಿಕೆಟ್ ಪಡೆದರು.